Mangaluru: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ; ಪರಿಶೀಲನೆಗೆ ತೆರಳಿದ ಪೊಲೀಸರಿಗೆ ಎದುರಾದ ಅಪಾಯ !

Dakshina Kannada news young man committed suicide on railway track at mangaluru

Mangaluru: ರೈಲ್ವೇ ಮೇಲ್ಸೇತುವೆ ಪೊಲೀಸರು ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ದುತ್ತನೆಂದು ರೈಲು ಬಂದ ಘಟನೆಯೊಂದು ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಬೆವೂರು ರೈಲ್ವೇ ಮೇಲ್ಸೇತುವೆಯಲ್ಲಿ ನಡೆದಿದೆ.

 

ತಮಿಳುನಾಡು ನಿವಾಸಿ ವಿಶ್ಲೇಷ್‌ (26) ಭಾನುವಾರ ರಾತ್ರಿ 8.30 ರ ಸುಮಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದರು. ಈ ಆತ್ಮಹತ್ಯೆ ಪ್ರಕರಣವು ತೀವ್ರ ಇಕ್ಕಟ್ಟಾಗಿರುವ ರೈಲ್ವೆ ಮೇಲ್ಸೇತುವೆ ಕಳಗಡೆ ನಡೆದಿದ್ದು, ಇದರ ತನಿಖೆಗೆ ಹೋದ ನಾಲ್ವರು ಮೂಲ್ಕಿ ಪೊಲೀಸ್‌ ಠಾಣೆಯ ಅಧಿಕಾರಿಗಳಾದ ಎಎಸ್‌ಐ ಸಂಜೀವ, ಚಂದ್ರಶೇಖರ್‌, ಶಂಕರ್‌ ಬಸವರಾಜ್‌ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಮತ್ತೊಂದು ರೈಲು ಹಾದು ಹೋಗಿದ್ದು, ಕೂಡಲೇ ಪೊಲೀಸ್‌ ಸಿಬ್ಬಂದಿಗಳು ಬದಿಗೆ ಹಾರಿದ್ದು, ಅದೃಷ್ಟವಶಾತ್‌ ಪಾರಾಗಿದ್ದಾರೆ.

ಇದನ್ನೂ ಓದಿ: Tiger Killed By Porcupine: ಮುಳ್ಳು ಹಂದಿ ಜೊತೆ ಗುದ್ದಾಡಿ ಜೀವ ಕಳೆದುಕೊಂಡ ʼವ್ಯಾಘ್ರʼ!!!

Leave A Reply

Your email address will not be published.