DA Hike In Karnataka: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ಮತ್ತೆ ಡಿಎ ಹೆಚ್ಚಿಸಿ ಆದೇಶ ಹೊರಡಿಸಿದ ಸರ್ಕಾರ

7th Pay Commission Da Hike for government employees in Karantaka

DA Hike In Karnataka : ಕೇಂದ್ರ ಸರ್ಕಾರ ಇತ್ತೀಚೆಗೆ ತನ್ನ ನೌಕರರ ತುಟ್ಟಿಭತ್ಯೆಯನ್ನು (DA) ಶೇ 4ರಷ್ಟು ಏರಿಕೆ ಮಾಡಿದ್ದು, ಈಗ ರಾಜ್ಯಗಳು ತಮ್ಮ ಉದ್ಯೋಗಿಗಳ ಡಿಎಯನ್ನು (DA Hike)ಹೆಚ್ಚಿಸಲು ಆರಂಭ ಮಾಡಿದೆ. ಕರ್ನಾಟಕ ಸರ್ಕಾರವು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇಕಡಾ 3.75 ರಷ್ಟು ಏರಿಕೆ ಮಾಡಲು(DA Hike In Karnataka) ಮುಂದಾಗಿದೆ. ಹೌದು!! ಸರ್ಕಾರ(Government) ತುಟ್ಟಿಭತ್ಯೆಯನ್ನು ಈಗಿರುವ ಶೇ.35ರಿಂದ ಶೇ.38.75ಕ್ಕೆ ಪರಿಷ್ಕರಿಸುತ್ತಿರುವ ಕುರಿತು ಆದೇಶದಲ್ಲಿ ತಿಳಿಸಿದೆ.

 

ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರು (Central Government Employees)ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಳ ಮಾಡಿದ್ದು, ಹೀಗಾಗಿ, 48.67 ಲಕ್ಷ ಉದ್ಯೋಗಿಗಳು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಕರ್ನಾಟಕ ಸರ್ಕಾರವು ಯುಜಿಸಿ/ಎಐಸಿಟಿಇ/ಐಸಿಎಆರ್ ಸ್ಕೇಲ್‌ನಲ್ಲಿ ಉಪನ್ಯಾಸಕರು ಮತ್ತು ನ್ಯಾಯಾಂಗ ಅಧಿಕಾರಿಗಳ ಡಿಎ ಅಡಿಯಲ್ಲಿ 4% ಹೆಚ್ಚಳವನ್ನು ಘೋಷಿಸಿದೆ. ಈ ನಡುವೆ, ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್(DR )ಶೇ 46ಕ್ಕೆ ಹೆಚ್ಚಳವಾಗಿದೆ. ಜುಲೈ 1, 2023 ರಿಂದ ತುಟ್ಟಿ ಭತ್ಯೆ ಹೆಚ್ಚಳ ಅನ್ವಯವಾಗಲಿದ್ದು, ಏಳನೇ ವೇತನ ಆಯೋಗದ (7th Pay Commission)ಶಿಫಾರಸುಗಳನ್ನು ಆಧರಿಸಿದ ಸೂತ್ರದ ಪ್ರಕಾರ ತುಟ್ಟಿ ಭತ್ಯೆಯಲ್ಲಿ ಈ ಹೆಚ್ಚಳವಾಗಿದೆ.

ಇದನ್ನೂ ಓದಿ: Job Openings: ಸರ್ಕಾರದಿಂದ ಭರ್ಜರಿ ಉದ್ಯೋಗಾವಕಾಶ- 5,980 ಡಾಟಾ ಎಂಟ್ರಿ ಆಪರೇಟರ್ ನೇಮಕಕ್ಕೆ ಅಧಿಸೂಚನೆ ಪ್ರಕಟ

Leave A Reply

Your email address will not be published.