China Intresting Facts: ಚೀನಾ ಮಹಾಗೋಡೆ ಕುರಿತು ರೋಚಕ ಸತ್ಯ ಬಿಚ್ಚಿಟ್ಟ ಡಾ. ಬ್ರೋ !!

Share the Article

Intresting facts About China: ಡಾ.ಬ್ರೋ ಖ್ಯಾತಿಯ ಗಗನ್‌ ಅವರು ಚೀನಾಗೆ (china)ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅನೇಕ ರೋಚಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದು, ಅದರಲ್ಲಿಯೂ ಚೀನಾದ ಮಹಾಗೋಡೆ (Great Wall of China) ಬಗ್ಗೆ ಜನರಿಗೆ ತಿಳಿಯದ ಕೆಲ ವಿಚಾರಗಳನ್ನು ಡಾ. ಬ್ರೋ ಹಂಚಿಕೊಂಡಿದ್ದಾರೆ.

ಡಾ. ಬ್ರೋ ಕೇಬಲ್‌ ಕಾರಿನ ಮೇಲೆ 21 ಸಾವಿರ ಕಿಲೋ ಮೀಟರ್‌ ಇರುವ ಗೋಡೆಯ ವೀಕ್ಷಣೆ ಮಾಡಿದ್ದು, ಚೀನಾದ ಮಹಾ ಗೋಡೆಯನ್ನು 2300 ವರ್ಷಗಳ ಹಿಂದೆ ಕಟ್ಟಲಾಗಿದ್ದು, ಈ ಗೋಡೆ ಬರಿಗಣ್ಣಿಗೆ ಕಾಣುವುದಿಲ್ಲ ಎಂಬ ವಿಚಾರ ಹಂಚಿಕೊಂಡಿದ್ದು, ಟೆಲಿಸ್ಕೋಪ್‌ನಿಂದ ಈ ಗೋಡೆಯನ್ನು ನೋಡಬಹುದು. ಡಾ.ಬ್ರೋ ಅನೇಕ ರೋಚಕ ವಿಚಾರ ಹಂಚಿಕೊಂಡಿದ್ದು, ಗೋಡೆ ಕಟ್ಟುವಾಗ ಸರಿ ಸುಮಾರು 10 ಲಕ್ಷದಷ್ಟು ಕಾರ್ಮಿಕರು ಮೃತಪಟ್ಟಿದ್ದಾರಂತೆ. ಆದರೆ ಮತ್ತೊಂದು ಅಚ್ಚರಿ ಏನೆಂದರೆ, ಹೀಗೆ ಸಾಯುವವರನ್ನು ಅಲ್ಲಿಯೇ ಇಟ್ಟು ಅದರ ಮೇಲೆಯೇ ಗೋಡೆ ಕಟ್ಟಲಾಗಿದೆಯತೆ. ಅಕ್ಕಿಗೆ ವಿಷ ಹಾಕಿ ಅದನ್ನು ಹಕ್ಕಿಗಳು ತಿನ್ನದ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಪೇಸ್ಟ್‌ ಮಾಡಿ ಗೋಡೆಗಳಿಗೆ ಅಂಟಿಸಲಾಗುತ್ತಿತ್ತಂತೆ.

ಕ್ರಿಸ್ತ ಪೂರ್ವ 220ರಲ್ಲಿ ಈ ಗೋಡೆಯನ್ನು ಕಟ್ಟಲು ಶುರು ಮಾಡಿ ಆ ಬಳಿಕ ರಾಜರು ಕಟ್ಟುತ್ತಾ ಬಂದರಂತೆ. ಸದ್ಯ ಈ ಗೋಡೆ 8 ಸಾವಿರ ಕಿಲೋ ಮೀಟರ್‌ ಉಳಿದಿದ್ದು, ಗೋಡೆಗಳನ್ನು ಇಟ್ಟಿಗೆಗಳ ಬಳಕೆಗೆ ಮೊದಲು, ದಮ್ಮಸುಮಾಡಿದ ಮಣ್ಣು, ಕಲ್ಲುಗಳು, ಮತ್ತು ಮರದ ಮೂಲಕ ನಿರ್ಮಾಣ ಮಾಡಲಾಗಿದೆಯಂತೆ.ಇದರ ಜೊತೆಗೆ ಮಿಂಗ್‌ ರಾಜವಂಶದ ಅವಧಿಯಲ್ಲಿ, ಹಾಸುಬಿಲ್ಲೆಗಳು, ಸುಣ್ಣಕಲ್ಲು, ಮತ್ತು ಕಲ್ಲಿನಂಥ ಸಾಮಗ್ರಿಗಳಂತೆ ಇಟ್ಟಿಗೆಗಳನ್ನು ಗೋಡೆಯ ಅನೇಕ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆಯಂತೆ.

ಡಾಕ್ಟರ್ ಬ್ರೋ ಹಂಚಿಕೊಂಡ ಮಾಹಿತಿ ಅನುಸಾರ, ಮಹಾನ್‌ ಗೋಡೆಯ ಉದ್ದಕ್ಕೂ ಇರುವ ಸೇನಾ ತುಕಡಿಗಳ ನಡುವಿನ ಸಂವಹನೆಯು, ಹೆಚ್ಚಿನ ಪ್ರಾಮುಖ್ಯತೆಯನ್ನು ಆ ಕಾಲದಲ್ಲಿ ಹೊಂದಿತ್ತು. ಮಂಗೋಲಿಯಾದ ಬಲಶಾಲಿ ಸೈನಿಕರು ನಿರಂತರವಾಗಿ ದಾಳಿ ಮಾಡುತ್ತಿದ್ದರಂತೆ. ಇದನ್ನು ತಪ್ಪಿಸಲು ಈ ಮಹಾಗೋಡೆ ನಿರ್ಮಿಸಲಾಗಿದ್ದು, 25 ಸಾವಿರ ವಾಚ್‌ ಟವರ್‌ ಕಟ್ಟಲಾಗಿದ್ದು, ಇದು ಸೈನಿಕರು ಬಂದಾಗ ತಿಳಿಯುತ್ತದಂತೆ. ವೈರಿಗಳ ಚಲನವಲನಗಳನ್ನು ವೀಕ್ಷಿಸಲು ಮಾತ್ರವಲ್ಲದೇ ಸೈನ್ಯಗಳನ್ನು ಎಚ್ಚರಿಸುವ ಹಾಗೂ ಸೈನ್ಯದ ಬಲವನ್ನು ಹೆಚ್ಚಿಸುವ ಸಾಮರ್ಥ್ಯ ಈ ಮಹಾಗೋಡೆ ಹೊಂದಿದೆಯಂತೆ.

https://youtu.be/VlTChaI5IHc?feature=shared

 

ಇದನ್ನು ಓದಿ: ಮನೆಯಲ್ಲಿ ಗುಲಾಬಿ ಗಿಡಗಳಿದ್ರೆ ಚಳಿಗಾಲದಲ್ಲಿ ಹೀಗೆ ಆರೈಕೆ ಮಾಡಿ – ವರ್ಷ ಪೂರ್ತಿ ಗಿಡದ ತುಂಬಾ ಹೂ ಇರುತ್ತವೆ

Leave A Reply