Harrasment Case: ಹೋಟೆಲ್’ನ 4ನೇ ಮಹಡಿಯಲ್ಲಿ ತಂಗಿದ್ದ ಹುಡುಗಿ- ಪೈಪ್ ಮೂಲಕ ಮೇಲೇರಿ ‘ನನ್ನೊಂದಿಗೆ ಮಲಗು’ ಎಂದು ಪೀಡಿಸಿದ ಕಾಮುಕ

Gujarat harassment case Man Climbs Pipe To 4th-Floor Hotel Room In Ahmedabad harrase Woman

Share the Article

Harrasment Case: ಅಹಮದಾಬಾದ್‌ನ ನರೋಡಾದ ಮಹಿಳೆಯೊಬ್ಬರು(26) ತಮ್ಮ ಮನೆ ನವೀಕರಿಸುತ್ತಿದ್ದ ಹಿನ್ನೆಲೆ ತನ್ನ ಪತಿಯೊಂದಿಗೆ ನರೋಡಾ-ಮುಥಿಯಾ ಪ್ರದೇಶದ ಹೋಟೆಲ್ ನಲ್ಲಿ(Hotel)ತಂಗಿದ್ದರು ಎನ್ನಲಾಗಿದೆ. ಸೋಮವಾರ ಮುಂಜಾನೆ 3:30 ರ ಸುಮಾರಿಗೆ ಮಹಿಳೆಯ ಪತಿ ಹೋಟೆಲ್ ನಿಂದ ಹೊರಬಂದ ಸಂದರ್ಭ ವ್ಯಕ್ತಿಯೊಬ್ಬ ಹೋಟೆಲ್‌ನ ನಾಲ್ಕನೇ ಮಹಡಿಗೆ ಪೈಪ್ ಮೂಲಕ ಏರಿ ಮಹಿಳೆ ಜೊತೆಗೆ ಲೈಂಗಿಕತೆಗೆ ಬೇಡಿಕೆಯೊಡ್ಡಿದ್ದಾನೆ. ಇದನ್ನು ಮಹಿಳೆ ವಿರೋಧಿಸಿದಾಗ ಮಹಿಳೆಗೆ ಕಿರುಕುಳ ನೀಡಿದ್ದಾನೆ.

ಆರೋಪಿ ಮಹಿಳೆಗೆ ಕಿರುಕುಳ (Harrasment Case)ನೀಡುತ್ತಿದ್ದ ಹಿನ್ನೆಲೆ ಮಹಿಳೆ ನೆರವಿಗಾಗಿ ಕರೆ ಮಾಡುತ್ತಾ ಕೋಣೆಯಿಂದ ಹೊರಗೆ ಓಡಿದ್ದು, ಹೋಟೆಲ್ ಸಿಬ್ಬಂದಿ ಮತ್ತು ಅವಳ ಪತಿ ಅವಳನ್ನು ರಕ್ಷಿಸಲು ಧಾವಿಸಿದ್ದಾರೆ ಎನ್ನಲಾಗಿದೆ. ಸದ್ಯ, ಮಹಿಳೆ ನೀಡಿದ ಮಾಹಿತಿಯ ಮೇರೆಗೆ ನರೋಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR)ದಾಖಲಾಗಿದ್ದು, ಮಹಿಳೆಯ ಪತಿಯ ಮೇಲೂ ಕೂಡ ಆರೋಪಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸದ್ಯ, ಪೊಲೀಸರು 31 ವರ್ಷದ ಸರ್ದಾರ್ ನಗರ ನಿವಾಸಿ ಪಾರ್ತ್ ಪಟೇಲ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈತ ದಿನಗೂಲಿ ಕಾರ್ಮಿಕನಾಗಿದ್ದು, ಮಹಿಳೆಯನ್ನು ಚಲನವಲನಗಳನ್ನು ಗಮನಿಸುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Gruha Jyoti Scheme: ದೇವಾಲಯಗಳಿಗೂ ಇನ್ಮುಂದೆ ಫ್ರೀ ಕರೆಂಟ್ !! ಸರ್ಕಾರದಿಂದ ಮಹತ್ವದ ನಿರ್ಧಾರ

Leave A Reply