Varthur Santhosh: ವರ್ತೂರು ಸಂತೋಷ್‌ ಹುಲಿ ಉಗುರು ಧರಿಸಿದ್ದು ಸಾಬೀತು! ಮುಂದೇನು?

Share the Article

BBK Season 10: ಬಿಗ್‌ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್‌ (Varthur Santhosh) ಅವರು ಸಂಕಷ್ಟಕ್ಕೆ ಸಿಲುಕಿದ್ದು, ಭಾನುವಾರ ಸಂಜೆ ಅವರನ್ನು ಅರಣ್ಯಾಧಿಕಾರಿಗಳು ಬಿಗ್‌ಬಾಸ್‌ ಮನೆಯಲ್ಲಿ ಅರೆಸ್ಟ್‌ ಮಾಡಿದ ಬೆನ್ನಲ್ಲೇ ಇದೀಗ ತಪಾಸಣೆ ಮಾಡಿದ ಮೇಲೆ ಅದು ಹುಲಿ ಉಗುರು ಎಂದು ಸಾಬೀತಾಗಿದೆ ಎಂದು ಟಿವಿ9 ಕನ್ನಡಕ್ಕೆ ಉಪ ಅರಣ್ಯಾಧಿಕಾರಿ ರವೀಂದ್ರ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾಧಿಕಾರಿ ಕೊಟ್ಟ ಮಾಹಿತಿ ಮೇಲೆ ಅವರನ್ನು ಬಂಧಿಸಿದ್ದಾಗಿಯೂ, ತಪಾಸಣೆ ಸಂದರ್ಭ ಅದು ಹುಲಿ ಉಗುರು ಎಂದು ಸಾಬೀತು ಆಗಿದೆ. ಹಾಗಾಗಿ ಬಂಧಿಸಿ ಕರೆತಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ರಾಮೋಹಳ್ಳಿ ಅರಣ್ಯಾಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆದಿದೆ. ಸುಮೊಟೋ ಕೇಸ್ ದಾಖಲಿಸಿ ಕಾರ್ಯಾಚರಣೆ ಮಾಡಲಾಗಿತ್ತು. ಇನ್ನಷ್ಟು ಮಾಹಿತಿ ಪಡೆಯಲು ಸಂತೋಷ್ ಅವರನ್ನು ಕೋರ್ಟ್​​ಗೆ ಹಾಜರುಪಡಿಸಲಾಗುತ್ತಿದೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ ಅಡಿಯಲ್ಲಿ ಈ ಬಂಧನ ನಡೆದಿದೆ ಎಂದು ಟಿವಿ9 ವರದಿ ಮಾಡಿದೆ.

Leave A Reply