Hindu Culture: ಮಹಿಳೆಯರೇ, ನೀವೇಕೆ ತೆಂಗಿನಕಾಯಿ ಒಡೆಯಬಾರದು ಗೊತ್ತಾ?! ಇಲ್ಲಿದೆ ನೋಡಿ ಕುತೂಹಲಕಾರಿ ವಿಷ್ಯ
Hindu Culture Do you know why women shouldn't break coconuts
Hindu Culture: ಹಿಂದೂ ಧರ್ಮದಲ್ಲಿ (Hindu Culture) ಎಲ್ಲ ವಸ್ತುಗಳಿಗೂ ಆದ್ಯತೆಯನ್ನು ನೀಡಲಾಗಿದೆ. ಇದಕ್ಕೆ ತೆಂಗಿನ ಕಾಯಿ ಅಥವಾ ಶ್ರೀಫಲವೂ ಹೊರತಾಗಿಲ್ಲ. ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯದಲ್ಲಿ ತೆಂಗಿನ ಕಾಯಿ ಇರಲೇಬೇಕು. ಇದು ಎಲ್ಲ ಶುಭ ಕಾರ್ಯಗಳಿಗೂ ಬೇಕೇ ಬೇಕು. ಒಂದು ಕಲಶ ಸ್ಥಾಪನೆ ಮಾಡುವುದಿದ್ದರೂ ತೆಂಗಿನ ಕಾಯಿಯನ್ನು ಬಳಸುತ್ತಾರೆ. ಕುಂಭ ಮೇಳ ಸ್ವಾಗತಕ್ಕೂ ಕಾಯಿ ಬೇಕು ಎಂದರೆ ಅದರ ವಿಶೇಷ ಸ್ಥಾನ ಎಷ್ಟಿರಬಹುದು ಎಂಬುದನ್ನು ಪ್ರತ್ಯೇಕವಾಗಿ ನಾವು ಹೇಳಬೇಕಿಲ್ಲ.
ತೆಂಗಿನ ಕಾಯಿಯನ್ನು ಸಹಜವಾಗಿ ಎಲ್ಲರೂ ಒಡೆಯುತ್ತಾರೆ. ಆದರೆ, ಇದಕ್ಕೂ ಒಂದು ಹಿನ್ನೆಲೆ ಅಥವಾ ಧರ್ಮಶಾಸ್ತ್ರದ ನಿಯಮ ಇದೆ ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಕಾರಣ, ಈ ತೆಂಗಿನ ಕಾಯಿಯನ್ನು ಪುರುಷರು ಮಾತ್ರ ಒಡೆಯಬೇಕು. ಮಹಿಳೆಯರು ಒಡೆಯಬಾರದು ಎಂದು ಹೇಳಲಾಗುತ್ತದೆ. ಆದರೆ, ಇದಕ್ಕೆ ಧರ್ಮಶಾಸ್ತ್ರದಲ್ಲಿ ಕಾರಣವನ್ನೂ ಕೊಡಲಾಗಿದೆ. ಹಿಂದೂ ಶಾಸ್ತ್ರದಲ್ಲಿ ಮಹಿಳೆಯರಿಗೆ ಕೆಲವೊಂದು ಆಚರಣೆ, ಪದ್ಧತಿಯನ್ನು ನಿಷೇಧಿಸಲಾಗಿದ್ದರೂ, ಅದಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ ಎಂದು ಹೇಳುತ್ತಾರೆ.
ತೆಂಗಿನಕಾಯಿ ಒಂದು ಬೀಜ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮಹಿಳೆ ಮಗುವಿಗೆ ಜನ್ಮ ನೀಡಿದಾಗ, ಅದರ ಪ್ರಾರಂಭವು ಬೀಜದಂತಿರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಮಹಿಳೆ ತೆಂಗಿನಕಾಯಿ ಒಡೆದರೆ ಅದು ಅವಳ ಮೇಲೆ ಮತ್ತು ಅವಳ ಗರ್ಭಾಶಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಭಗವಾನ್ ವಿಷ್ಣುವು ಲಕ್ಷ್ಮಿ ದೇವಿಯ ಜೊತೆಗೆ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಮೊದಲ ಬಾರಿಗೆ ಹಣ್ಣಾಗಿ ಕಳುಹಿಸಿದನು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತೆಂಗಿನಕಾಯಿಯ ಮೇಲೆ ಲಕ್ಷ್ಮಿ ದೇವಿಗೆ ಮಾತ್ರ ಅಧಿಕಾರವಿದೆ. ಇದೇ ಕಾರಣಕ್ಕೆ ಮಹಿಳೆಯರು ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಿರುವುದು. ಅಂದಹಾಗೆ, ಭಾರತೀಯ ವೈದಿಕ ಸಂಪ್ರದಾಯದ ಪ್ರಕಾರ, ತೆಂಗಿನಕಾಯಿಯನ್ನು ಮಂಗಳಕರ, ಸಮೃದ್ಧಿ, ಗೌರವ, ಪ್ರಗತಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಇದನ್ನು ಓದಿ: Google Pay: ನಿಮ್ಮ ಬ್ಯಾಂಕ್ ಅಕೌಂಟ್ ಜೀರೋ ಆಗಿದ್ರೂ ಗೂಗಲ್ ಪೇನಲ್ಲಿ 15,000 ದಷ್ಟು ಪೇ ಮಾಡ್ಬೋದು !!