KSRTC Special Tour Package For Mangalore Dasara: ದಸರಾ ಪ್ರಯುಕ್ತ ಮಂಗಳೂರಿಗರಿಗೆ ಭರ್ಜರಿ ನ್ಯೂಸ್- KSRTC ಕಡೆಯಿಂದ ಬಂತು ಬಂಪರ್ ಆಫರ್
KSRTC Special Tour Package For Mangalore Dasara package latest updates
KSRTC Special Tour Package: ಮಂಗಳೂರಿನಲ್ಲಿ(Mangalore)ದಸರಾ ಉತ್ಸವ ಆರಂಭವಾಗಿದೆ (Mangaluru Darasa). ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರು ದಸರಾ ಕೂಡ ವಿಶೇಷವಾಗಿದ್ದು, ಹೀಗಾಗಿ, ಸ್ಪೆಷಲ್ ಬಸ್ಗಳ ವ್ಯವಸ್ಥೆ(KSRTC Special Tour Package) ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ‘ಮಂಗಳೂರು ದಸರಾ ದರ್ಶನ’ ವಿಶೇಷ ಪ್ಯಾಕೇಜ್ ಟೂರ್‌ಗಳು(KSRTC Special Tour Package For Mangalore)ಶುರುವಾಗಿದೆ.
ವಿವಿಧ ದೇವಸ್ಥಾನಗಳಿಗೆ ಪ್ರಯಾಣಿಕರು ಪ್ರಯಾಣಿಸುವ ಸಲುವಾಗಿ ಒಂಬತ್ತು ಬಸ್‌ಗಳನ್ನು ಮೀಸಲಿಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.ವಿವಿಧ ದೇವಸ್ಥಾನಗಳಿಗೆ ಪ್ರಯಾಣಿಕರು ಹೋಗಿ ಬರಲು ನೆರವಾಗುವ ದೆಸೆಯಲ್ಲಿ ಒಂಬತ್ತು ಬಸ್‌ಗಳನ್ನು ಮೀಸಲಿಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಕೊಲ್ಲೂರು ದೇವಾಲಯಕ್ಕೆ ಹೋಗುವ ಪ್ರವಾಸಿಗರಿಗೆ ವಿಶೇಷವಾಗಿ ನಿರ್ದಿಷ್ಟವಾಗಿ ನಾಲ್ಕು ಬಸ್ಸುಗಳನ್ನು ಮೀಸಲಿಡಲಾಗಿದೆ. ಇದರ ಜೊತೆಗೆ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಪ್ರತಿ ಪ್ರವಾಸಕ್ಕೆ ಒಬ್ಬ ಕೋ ಆರ್ಡಿನೇಟರ್ ಅನ್ನು ನೇಮಕ ಮಾಡಿದೆ. ಇವರು ಅವರು ಪ್ರಯಾಣದ ಸಂದರ್ಭ ಪ್ರಯಾಣಿಕರೊಂದಿಗೆ ತೆರಳಲಿದ್ದು, ಪ್ರವಾಸದ ಸಂದರ್ಭ ಯಾವುದೇ ಗೊಂದಲ , ಅನುಮಾನ ಉಂಟಾದರೂ ಬಗೆಹರಿಸುವಲ್ಲಿ ಮತ್ತು ಪ್ರವಾಸಿಗರ ಕ್ಷೇಮಕ್ಕಾಗಿ ಜೊತೆಗಿರುತ್ತಾರೆ ಎಂದು ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಈ ವಿಶೇಷ ಪ್ಯಾಕೇಜ್ನಲ್ಲಿ ಮಂಗಳಾದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಭಗವತಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನ ಮತ್ತು ಕುದ್ರೋಳಿ ಮಾರಿಯಮ್ಮ ದೇವಸ್ಥಾನಗಳಿಗೆ ಪ್ರಯಾಣಿಕರು ಭೇಟಿ ನೀಡಬಹುದು. ವಿಶೇಷ ಪ್ಯಾಕೇಜ್ ಅಡಿಯಲ್ಲಿ ಹೆಚ್ಚುವರಿಯಾಗಿ, ಎರಡು ಬಸ್‌ಗಳನ್ನು ಮಡಿಕೇರಿ ಪ್ಯಾಕೇಜ್ ಸಲುವಾಗಿ ಮೀಸಲಿಡಲಾಗಿದೆ.
ಮಂಗಳೂರು- ಕೊಲ್ಲೂರು ಪ್ಯಾಕೇಜ್‌ನಲ್ಲಿ ಪ್ರಯಾಣಿಸುವವರಿಗೆ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ. ದರ ನಿಗದಿ ಮಾಡಲಾಗಿದೆ. ಈ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಮಂಗಳೂರು ಬಸ್ ನಿಲ್ದಾಣದಿಂದ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮೂಲಕ ತೆರಳಿ ಮಂಗಳೂರು ಬಸ್ ನಿಲ್ದಾಣಕ್ಕೆ ಮರಳಲು ಅನುವು ಮಾಡಿಕೊಡಲಾಗಿದೆ.
ಮಂಗಳೂರಿನಿಂದ ಮಡಿಕೇರಿ ಪ್ಯಾಕೇಜ್ನಲ್ಲಿ ಪ್ರಯಾಣಿಸುವವರಿಗೆ ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ. ನಿಗದಿಪಡಿಸಲಾಗಿದೆ. ರಾಜಾ ಸೀಟ್, ಅಬ್ಬೆ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್ ಮತ್ತು ಹಾರಂಗಿ ಅಣೆಕಟ್ಟುಗಳನ್ನು ವೀಕ್ಷಣೆ ಮಾಡಬಹುದು.
ಇದನ್ನು ಓದಿ: High Court: ಮಹಿಳೆಯರ ಈ ಸ್ವಭಾವಗಳು ಅಶ್ಲೀಲವಲ್ಲ- ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್