LPG Cylinder: ಇಂತವರಿಗಿನ್ನು ಸಿಗಲಿದೆ ಕೇವಲ 400ರೂ ಗೆ LPG ಸಿಲಿಂಡರ್, ಭಾರೀ ಮೊತ್ತದ ಪಿಂಚಣಿ ಹಣ !!
National news government gives LPG cylinder at rupees 400 and increased social security pensions
LPG Cylinder: ನ. 30ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿ ಆ ಎಸ್) ಕೆಲವು ಭರವಸೆಗಳನ್ನು ನೀಡಿದ್ದು, ಈ ಭರವಸೆಯಲ್ಲಿ ಇವರಿಗೆ ಸಿಗಲಿದೆ ಕೇವಲ 400ರೂ ಗೆ LPG ಸಿಲಿಂಡರ್ (LPG Cylinder), ಭಾರೀ ಮೊತ್ತದ ಪಿಂಚಣಿ ಹಣ.
ಹೌದು, ರೈತರಿಗೆ ‘ರೈತಬಂಧು ‘ಹೂಡಿಕೆ ಯೋಜನೆಯಡಿ ಹಣಕಾಸು ನೆರವು ಹೆಚ್ಚಳ ಮತ್ತು 400 ರೂ.ಗೆ ಎಲ್ಪಿಜಿ ಸಿಲಿಂಡರ್ ಪೂರೈಕೆ ಭರವಸೆ ನೀಡಿದ್ದು, ರವಿವಾರ ಬಿ ಆರ್.ಎಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು, ನೂತನ ಸರಕಾರ ರಚನೆಯಾದ ಬಳಿಕ ಐದಾರು ತಿಂಗಳುಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರಾಣಾಳಿಕೆಯಲ್ಲಿನ ಪ್ರಮುಖ ಅಂಶಗಳಿವು:- ರಾಜ್ಯದಲ್ಲಿ ಬಿಪಿಎಲ್ ವರ್ಗದ ಎಲ್ಲ 93 ಲಕುಟುಂಬಗಳಿಗೆ ಐದು – ಲ.ರೂ.ಗಳ ಜೀವವಿಮೆ ಸೌಲಭ್ಯ. ‘ರೈತಬಂಧು ಯೋಜನೆಯಡಿ ರೈತರು ಪ್ರತಿ ಎಕರೆಗೆ ವಾರ್ಷಿಕ ಪಡೆಯುತ್ತಿರುವ 10,000 ರೂ.ಗಳ ಹಣಕಾಸು ನೆರವು ಮುಂದಿನ ಐದು ವರ್ಷಗಳಲ್ಲಿ ಕ್ರಮೇಣ 15,000 ರೂ.ಗಳಿಗೆ ಹೆಚ್ಚಳ
ಹಾಗೂ ಅರ್ಹ ಫಲಾನುಭವಿಗಳಿಗೆ 400 ರೂ.ಗಳಲ್ಲಿ ಎಲ್ಪಿಜಿ ಸಿಲಿಂಡರ್.
ಈಗ 2,016 ರೂ.ಗಳಿರುವ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಬಿ ಆರ್ ಎಸ್ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ 3,016 ರೂ.ಗೆ ಹೆಚ್ಚಳ ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಕ್ರಮೇಣ ಮಾಸಿಕ 5,000 ರೂ.ಗಳಿಗೆ ಏರಿಕೆ. ವಿಕಲಾಂಗರಿಗೆ ನೀಡುತ್ತಿರುವ 4016 ರೂ.ಗಳ ಪಿಂಚಣಿ ಮುಂದಿನ ಐದು ವರ್ಷಗಳಲ್ಲಿ 5,015 ರೂ.ಗಳಿಗೆ ಏರಿಕೆ. ಆರೋಗ್ಯ ಶ್ರೀ ಯೋಜನೆಯಡಿ ಎಲ್ಲ ಅರ್ಹ ಫಲಾನುಭವಿಗಳಿಗೆ ಆರೋಗ್ಯ ವಿಮೆ ರಕ್ಷಣೆಯ ಮೊತ್ತ ಈಗಿನ ಐದು ಲ.ರೂ.ಗಳಿಂದ 15 ಲ.ರೂ.ಗಳಿಗೆ ಏರಿಕೆ. ಎಲ್ಲ ವಸತಿ ಜ್ಯೂನಿಯರ್ ಕಾಲೇಜುಗಳು ವಸತಿ ಪದವಿ ಶಾಲೆಗಳಾಗಿ ಪರಿವರ್ತನೆ ಮಾಡುವ ಭರವಸೆ ನೀಡಲಾಗಿದೆ.
ಇದನ್ನೂ ಓದಿ: Canara Bank: ಕೆನರಾ ಬ್ಯಾಂಕಲ್ಲಿ ಖಾತೆ ಹೊಂದಿರೋರಿಗೆ ಬೆಳ್ಳಂಬೆಳಗ್ಗೆಯೇ ಸಿಹಿ ಸುದ್ದಿ !!