Central Government: ಮಧ್ಯಮ ವರ್ಗದವರೆಲ್ಲಾ ಖುಷಿ ಪಡೋ ಸುದ್ದಿ- ಕೇಂದ್ರದಿಂದ ಸಿಗ್ತಿದೆ ಬಂಪರ್ ಗಿಫ್ಟ್ !

Central Government: ಮಧ್ಯಮ ವರ್ಗದವರೆಲ್ಲಾ ಖುಷಿ ಪಡೋ ಸುದ್ದಿ ಇಲ್ಲಿದೆ. ಕೇಂದ್ರದಿಂದ ಸಿಗ್ತಿದೆ ಬಂಪರ್ ಗಿಫ್ಟ್. ಹೌದು, ಇದೀಗ ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಮನೆ ನಿರ್ಮಾಣದ (Housing Schem) ಕನಸನ್ನು ನನಸು ಮಾಡಲು ಮುಂದಾಗಿದೆ. ಬಡ ಜನರ ಮನೆ ನಿರ್ಮಾಣಕ್ಕೆ ಸಹಾಯವಾಗಲು ಸರ್ಕಾರ (Central Government) ಹೊಸ ಯೋಜನೆಯನ್ನು ಪರಿಚಯಿಸಿದೆ.

ನಗರ ಪ್ರದೇಶಗಳಲ್ಲಿ ಸಣ್ಣ ಮನೆಗಳ ನಿರ್ಮಾಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ ರೂ. 60,000 ಕೋಟಿ ಮೊತ್ತದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2024 ರ ಸಾವ್ರತಿಕ ಚುನಾವಣೆಯ ಮುಂಚಿತವಾಗಿ ಬ್ಯಾಂಕುಗಳು ಒಂದು ತಿಂಗಳುಗಳ ಮುಂಚಿತವಾಗಿ ಈ ಯೋಜನೆಯನ್ನು ಜಾರಿಗೆ ತರಲಿವೆ ಎಂದು ಹೇಳಲಾಗಿದೆ.

ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆಯನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ಶೀಘ್ರದಲ್ಲೇ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರವು 60,000 ಕೋಟಿ ರೂ. ಸಬ್ಸಿಡಿಯನ್ನು ಪ್ರಾರಂಭಿಸಲಿದೆ.

ಒಟ್ಟು ಸಾಲದಲ್ಲಿ 9 ಲಕ್ಷದ ವರೆಗಿನ ಮೊತ್ತಕ್ಕೆ ವಾರ್ಷಿಕ ಶೇ. 3 ರಿಂದ ಶೇ. 6.5 ರ ವರೆಗೆ ಬಡ್ಡಿ ಸಹಾಯಧನ ಸಿಗಲಿದೆ. ರೂ. 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲವನ್ನು 20 ವರ್ಷಗಳ ವರೆಗೆ ಪಡೆದಿರುವವರು ಪ್ರಸ್ತಾಪಿತ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ತಿಳಿದುಬಂದಿದೆ. ಬಡ್ಡಿ ಸಹಾಯಧನದ ಮೊತ್ತವನ್ನು ಫಲಾನುಭವಿಗಳಿವೆ ಮುಂಗಡವಾಗಿ ನೀಡಲಾಗುತ್ತದೆ. ಸದ್ಯದಲ್ಲೇ ಈ ಯೋಜನೆ ಅರ್ಹರಿಗೆ ತಲುಪುವ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಲಿದೆ.

 

ಇದನ್ನು ಓದಿ: Plants To Keep Snakes Away : ಮನೆ ಮುಂದೆ ಈ ಗಿಡಗಳನ್ನು ನೆಟ್ಟು ನೋಡಿ, ಮನೆ ಹತ್ತಿರ ಅಲ್ಲ, ಕಾಂಪೌಂಡ್ ಹತ್ರಕ್ಕೂ ಹಾವುಗಳು ಸುಳಿಯಲ್ಲ !!

Leave A Reply

Your email address will not be published.