Home News Ration Card Holder: ಪಡಿತರ ಚೀಟಿ ಹೊಂದಿರುವವರಿಗೆ ಭರ್ಜರಿ ನ್ಯೂಸ್ – ಇಂತವರಿಗಿನ್ನು ಮನೆ ಬಾಗಿಲಿಗೇ...

Ration Card Holder: ಪಡಿತರ ಚೀಟಿ ಹೊಂದಿರುವವರಿಗೆ ಭರ್ಜರಿ ನ್ಯೂಸ್ – ಇಂತವರಿಗಿನ್ನು ಮನೆ ಬಾಗಿಲಿಗೇ ಬರುತ್ತೆ ರೇಷನ್ !!

Ration Card Holder

Hindu neighbor gifts plot of land

Hindu neighbour gifts land to Muslim journalist

Ration Card Holder: ಪಡಿತರ ಚೀಟಿದಾರರಿಗೆ (Ration Card Holder)ಮತ್ತೊಂದು ಗುಡ್ ನ್ಯೂಸ್ ಇಲ್ಲಿದೆ. ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ನೆರವಾಗುವ ದೆಸೆಯಲ್ಲಿ ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಹೋಗುವ ಬದಲಿಗೆ ಮನೆ ಬಾಗಿಲಲ್ಲೇ ಪಡಿತರ ನೀಡಲು ಹಿರಿಯ ನಾಗರಿಕ ಸ್ನೇಹಿ ನೀತಿಯನ್ನು ಆಹಾರ ಇಲಾಖೆ ಜಾರಿಗೊಳಿಸಲು ನಿರ್ಧರಿಸಿದೆ.

75 ವರ್ಷ ದಾಟಿದವರ ಮನೆ ಬಾಗಿಲಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ತಲುಪಿಸಲು ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರೊಬ್ಬರು ನ್ಯಾಯಬೆಲೆ ಅಂಗಡಿಗೆ (Ration Shop)ಹೋಗಿ ಬಯೋಮೆಟ್ರಿಕ್ ನೀಡಿದ ಬಳಿಕ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಸೇರಿ ಪಡಿತರ ಪಡೆಯಬೇಕಾಗುತ್ತದೆ. ಆದರೆ, ಇದರಿಂದ ಹಿರಿಯರಿಗೆ ಪಡಿತರ ಪಡೆಯಲು ಸಮಸ್ಯೆ ಉಂಟಾಗುವ ಹಿನ್ನೆಲೆ ನ್ಯಾಯಬೆಲೆ ಅಂಗಡಿಗೆ ಹೋಗುವ ಬದಲಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಯೋಜನೆ ರೂಪಿಸಲಾಗಿದೆ.

ಪಡಿತರ ಚೀಟಿಯಲ್ಲಿ ನಮೂದಿಸಿದಂತೆ 75 ವರ್ಷ ಒಳಗಿನ ಬೇರೆ ಸದಸ್ಯರು ಇಲ್ಲದ, ಅದೇ ರೀತಿ, 75 ವರ್ಷ ದಾಟಿದ ವೃದ್ಧರು, ದಂಪತಿಗಳಿಗೆ ಮನೆ ಬಾಗಿಲಿಗೆ ಪಡಿತರ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪಡಿತರ ಚೀಟಿಯಲ್ಲಿ 75 ವರ್ಷದೊಳಗಿನ ಸದಸ್ಯರ ಹೆಸರು ಇದ್ದರೂ ಅವರು ಕೆಲಸ ಕಾರ್ಯಗಳ ನಿಮಿತ್ತ ವಲಸೆ ಹೋಗಿದ್ದರೆ ಆ ಕುಟುಂಬಗಳ ವೃದ್ಧರು ಮನವಿ ಸಲ್ಲಿಸಿದರೆ ಅವರ ಮನೆ ಬಾಗಿಲಿಗೂ ಕೂಡ ಪಡಿತರ ತಲುಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Wallet: ಪುರುಷರೇ, ಪರ್ಸ್ ಅನ್ನು ಪ್ಯಾಂಟಿನ ಹಿಂದಿನ ಜೇಬಲ್ಲಿ ಇಡುತ್ತೀರಾ ?! ಹಾಗಿದ್ರೆ ನೀವು ಈ ಸ್ಟೋರಿ ಓದಲೇ ಬೇಕು