Senior Citizens: ಹಿರಿಯ ನಾಗರಿಕರೇ.. ಎಫ್‌ಡಿ ಬಡ್ಡಿದರ ಏರಿಸಿದೆ ಈ ಬ್ಯಾಂಕ್ !! ಚಾನ್ಸ್ ಮಿಸ್ ಮಾಡದಿರಿ

Business news good news for senior citizen this bank increases fixed deposit interest rates

Fixed Deposit: ಹಿರಿಯ ನಾಗರಿಕರಿಗೆ ಹಣ ಉಳಿತಾಯ ಮಾಡಲು ಹಲವಾರು ಬ್ಯಾಂಕ್ ಗಳು ಇವೆ. ಅಂದರೆ ಸರ್ಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಗಳು ಹತ್ತು ಹಲವಾರು ಇವೆ. ಆದರೆ ಉಳಿತಾಯ ಮತ್ತು ಠೇವಣಿ ಮೊತ್ತಗಳಿಗೆ ನೀಡುವ ಬಡ್ಡಿದರ ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯತ್ಯಾಸ ಇರಬಹುದು. ಮುಖ್ಯವಾಗಿ ನಿವೃತ್ತಿ ಸಮಯದಲ್ಲಿ ಹಿರಿಯರಿಗೆ ಆದಾಯದ ಮೂಲವಾಗಿರುವುದು ಪಿಂಚಣಿ ಅಥವಾ ಎಫ್‌ಡಿಯಿಂದ ಬರುವ ಬಡ್ಡಿಯಾಗಿದೆ.

ಇದೀಗ ಎಫ್‌ಡಿಯಲ್ಲಿ( Fixed Deposit) ನೀವು ಹೂಡಿಕೆ ಮಾಡಿದ್ದರೆ ನಿಮಗೆ ಈ ಬ್ಯಾಂಕ್ ಸಿಹಿಸುದ್ದಿಯನ್ನು ನೀಡಿದೆ. ಬ್ಯಾಂಕ್ ಆಫ್ ಬರೋಡಾವು ಎನ್‌ಆರ್‌ಒ ಮತ್ತು ಎನ್‌ಆರ್‌ಇ ಟರ್ಮ್ ಡೆಪಾಸಿಟ್‌ಗಳನ್ನು ಸೇರಿದಂತೆ ದೇಶೀಯ ರಿಟೇಲ್ ಟರ್ಮ್ ಡೆಪಾಸಿಟ್‌ಗಳ ಬಡ್ಡಿದರವನ್ನು 50 ಮೂಲಾಂಕದಷ್ಟು ಹೆಚ್ಚಿಸಿದೆ. ಹೌದು, 3 ವರ್ಷಗಳವವರೆಗಿನ ವಿವಿಧ ಅವಧಿಗಳ ಎಫ್‌ಡಿ ಬಡ್ಡಿದರವನ್ನು ಬ್ಯಾಂಕ್ ಆಫ್ ಬರೋಡಾ ಸುಮಾರು 50 ಮೂಲಾಂಕ ಹೆಚ್ಚಳ ಮಾಡಿದೆ. ಇನ್ನು ವರದಿ ಪ್ರಕಾರ ಅಕ್ಟೋಬರ್ 9, 2023 ರಿಂದ ಈ ಹೊಸ ಬಡ್ಡಿದರ ಜಾರಿಗೆ ಬರುತ್ತದೆ. ಹಾಗೆಯೇ 2 ಕೋಟಿ ರೂಪಾಯಿಗಿಂತ ಕಡಿಮೆ ಡೆಪಾಸಿಟ್‌ಗಳ ಮೇಲೆ ಈ ಬಡ್ಡಿದರ ಅನ್ವಯವಾಗುತ್ತದೆ.

ಬ್ಯಾಂಕ್ ಆಫ್ ಬರೋಡಾವು ಸಾಮಾನ್ಯ ನಾಗರಿಕರಿಗೆ ವಾರ್ಷಿಕವಾಗಿ ಶೇಕಡ 7.40 ರಷ್ಟು ಬಡ್ಡಿದರವನ್ನು ನೀಡುತ್ತದೆ. ಆದರೆ ಹಿರಿಯ ನಾಗರಿಕರಿಗೆ ವಾರ್ಷಿಕವಾಗಿ ಶೇಕಡ 7.90 ರಷ್ಟು ಬಡ್ಡಿದರವನ್ನು ನೀಡುತ್ತದೆ. ಅಂದರೆ ಸಾಮಾನ್ಯ ನಾಗರಿಕರಿಗಿಂತ 50 ಬಿಪಿಎಸ್ ಅಥವಾ ಶೇಕಡ 0.50 ಹೆಚ್ಚುವರಿ ಬಡ್ಡಿದರವನ್ನು ನೀಡುತ್ತದೆ. ಇನ್ನು ನಾನ್‌ಕಾಲೇಬಲ್ ಡೆಪಾಸಿಟ್‌ಗೆ ಮತ್ತೆ ಹೆಚ್ಚುವರಿ ಶೇಕಡ 0.15 ರಷ್ಟು ಬಡ್ಡಿದರ ನೀಡುತ್ತದೆ.

ಅದಲ್ಲದೆ ಬ್ಯಾಂಕ್‌ನ 399 ದಿನಗಳವರೆಗಿನ ತಿರಂಗಾ ಪ್ಲಸ್ ಡೆಪಾಸಿಟ್ ಯೋಜನೆಯ ಬಡ್ಡಿದರಗಳು ಪರಿಷ್ಕರಣೆ ಮಾಡಲಾಗಿದೆ. ಈ ಪರಿಷ್ಕರಣೆ ಬಳಿಕ ಹಿರಿಯ ನಾಗರಿಕರು ನಾನ್‌ ಕಾಲೇಬಲ್ ಎಫ್‌ಡಿ ಮೇಲೆ ಶೇಕಡ 7.80 ವರೆಗೆ ಬಡ್ಡಿಯನ್ನು ಪಡೆಯಬಹುದಾಗಿದೆ.

ಈ ಬ್ಯಾಂಕ್ ಮೂಲಕ ಹಿರಿಯ ನಾಗರಿಕರು ಎಫ್‌ಡಿ ಹೂಡಿಕೆಯಿಂದ ಪಡೆಯುವ ಪ್ರಯೋಜನ ಇಂತಿವೆ :
ಗ್ಯಾರಂಟಿ ರಿಟರ್ನ್:
ಎಫ್‌ಡಿಗಳು ನಿಮ್ಮ ಹೂಡಿಕೆಯ ಮೇಲೆ ಗ್ಯಾರಂಟಿ ರಿಟರ್ನ್ ಅನ್ನು ನೀಡುತ್ತದೆ. ಇದು ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ಉತ್ತಮ ಆಯ್ಕೆಯಾಗಿದೆ.

ನಿಯಮಿತ ಆದಾಯ, ತೆರಿಗೆ ಪ್ರಯೋಜನಗಳು:
ಎಫ್‌ಡಿಗಳು ನಿಯಮಿತ ಆದಾಯವನ್ನು ಒದಗಿಸಬಹುದು. ಇದು ನಿಗದಿತ ಬಜೆಟ್‌ನಲ್ಲಿರುವ ಹಿರಿಯ ನಾಗರಿಕರಿಗೆ ಸಹಾಯಕವಾಗಬಹುದು. ಹಿರಿಯ ನಾಗರಿಕರು ತಮ್ಮ ಎಫ್‌ಡಿ ಆದಾಯದ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಫ್ಲೆಕ್ಸಿಬಿಲಿಟಿ:
ಎಫ್‌ಡಿಗಳು ಹೊಂದಿಕೊಳ್ಳುವ ಹೂಡಿಕೆಯ ಆಯ್ಕೆಯಾಗಿದೆ. ಏಕೆಂದರೆ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನೀವು ಅವಧಿ ಮತ್ತು ಬಡ್ಡಿ ಪಾವತಿ ಸಮಯದ ಆಯ್ಕೆಯನ್ನು ಮಾಡಬಹುದಾಗಿದೆ.

ಈ ಕುರಿತು ಬ್ಯಾಂಕ್‌ ಆಫ್‌ ಬರೋಡಾದ ರಿಟೇಲ್ ಲಯೇಬಲಿಟಿ & ಎನ್‌ಆರ್‌ಐ ಬ್ಯುಜಿನೆಸ್‌ನ ಮುಖ್ಯ ಅಧಿಕಾರಿ ರವೀಂದ್ರ ಸಿಂಗ್ ಅವರು “ಗ್ರಾಹಕರಿಗೆ ಆಕರ್ಷಕ ಬಡ್ಡಿದರಗಳನ್ನು ನೀಡಲು ನಾವು ಸಂತೋಷಪಡುತ್ತೇವೆ. ಹೆಚ್ಚಿನ ಖಚಿತವಾದ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. 2 ರಿಂದ 3 ವರ್ಷಗಳ ಹೂಡಿಕೆಯ ಅವಧಿಯಲ್ಲಿ, ಹಿರಿಯ ನಾಗರಿಕ ಡೆಪಾಸಿಟ್‌ದಾರರು ಈಗ ಶೇಕಡ 7.90ವರೆಗೆ ಬಡ್ಡಿದರ ಗಳಿಸಬಹುದು. ಇದು ಅತೀ ಹೆಚ್ಚಿನ ಬಡ್ಡಿದರವಾಗಿದೆ. ನೀವು ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತವಾದ ಸಮಯವಾಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಆಹಾರಗಳನ್ನು ತಪ್ಪಿಯೂ ಸೇವಿಸಬೇಡಿ !! ಸೇವಿಸಿದರೆ ಸರಸ, ವಿರಸ ಆಗೋದು ಪಕ್ಕಾ

Leave A Reply

Your email address will not be published.