Home Breaking Entertainment News Kannada Radika Kumaraswamy brother Raviraj: ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ನಿರ್ಮಾಪಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ!

Radika Kumaraswamy brother Raviraj: ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ನಿರ್ಮಾಪಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ!

Radika Kumaraswamy brother Raviraj
Image source Credit: filmbeat

Hindu neighbor gifts plot of land

Hindu neighbour gifts land to Muslim journalist

Radika Kumaraswamy brother Raviraj: ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ಚಿತ್ರರಂಗದಲ್ಲಿ ನಾಯಕಿಯಾಗಿ, ನಿರ್ಮಾಪಕಿಯಾಗಿ ಮುಂಚುತ್ತಿದ್ದಾರೆ. ಇದೀಗ, ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ (Radika Kumaraswamy brother Raviraj)ಅವರು ಕೂಡ ನಿರ್ಮಾಪಕನಾಗಿ(Producer)ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ರಾಧಿಕಾ ಕುಮಾರಸ್ವಾಮಿಯವರ ಸಹೋದರ ರವಿರಾಜ್ ರವರು ಈ ಹಿಂದೆ, ‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ‘ಭೈರಾದೇವಿ’ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದೀಗ, ತಮ್ಮದೇ ನಿರ್ಮಾಣ ಸಂಸ್ಥೆ ಆರಂಭ ಮಾಡಿದ್ದು, ಇದಕ್ಕೆ ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಎಂದು ನಾಮಕರಣ ಮಾಡಲಾಗಿದೆ. ಮೊದಲ ಸಿನಿಮಾ ಹಾರರ್ ಸ್ಟೈಲ್ ನಲ್ಲಿ ಮೂಡಿ ಬರುತ್ತಿದ್ದು, ಈ ಚಿತ್ರದ ಶೂಟಿಂಗ್ ಕೂಡ ಮುಗಿದಿದೆ ಎನ್ನಲಾಗಿದೆ. ಇಲ್ಲಿಯವರೆಗೆ ರಾಧಿಕಾ ಕುಮಾರಸ್ವಾಮಿ ಅವರ ಶಮಿಕಾ ಎಂಟರ್ಪ್ರೈಸಸ್ನಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡುತ್ತಿದ್ದ ರವಿರಾಜ್ ಸಿನಿಮಾ ನಿರ್ಮಾಣದ ಅನುಭವ ಪಡೆದು ಪೂರ್ಣಪ್ರಮಾಣದ ನಿರ್ಮಾಪಕರಾಗಿ ಮಿಂಚುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತಂದೆಯ ಕನಸಿನ ಬ್ಯಾನರ್ ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಅನ್ನು ರವಿರಾಜ್ ನೆರವೇರಿಸುವ ತವಕದಲ್ಲಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರಂತೆ ಚಿತ್ರರಂಗದಲ್ಲಿ ಹೆಸರು ಮಾಡುವ ಅಭಿಲಾಷೆ ಹೊತ್ತಿರುವ ರವಿರಾಜ್ ತಮ್ಮ ಬ್ಯಾನರ್ ಮೂಲಕ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸನ್ನು ನನಸಾಗಿಸುವತ್ತ ಕಾರ್ಯೋನ್ಮುಖರಾಗಿದ್ದಾರೆ.

ಇದನ್ನೂ ಓದಿ: Dress Code In Temple: ಇನ್ಮುಂದೆ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತಾದಿಗಳು ಹೀಗೆ ಬರುವಂತಿಲ್ಲ