Home latest Vijayanagara: ಇವನೆಂಥ ಪತಿ? ಅಣ್ಣ-ತಂಗಿ ಮಧ್ಯೆ ಅನೈತಿಕ ಸಂಬಂಧದ ಶಂಕೆ- ಗಂಡನಿಂದ ಘೋರ ಕೃತ್ಯ!!!

Vijayanagara: ಇವನೆಂಥ ಪತಿ? ಅಣ್ಣ-ತಂಗಿ ಮಧ್ಯೆ ಅನೈತಿಕ ಸಂಬಂಧದ ಶಂಕೆ- ಗಂಡನಿಂದ ಘೋರ ಕೃತ್ಯ!!!

Vijayanagara

Hindu neighbor gifts plot of land

Hindu neighbour gifts land to Muslim journalist

Vijayanagara: ವಿಜಯನಗರ (Vijayanagara) ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ಜೋಡಿಕೊಲೆಯೊಂದು ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ಬಹಳ ಕುತೂಹಲ ಮೂಡಿಸಿದೆ.

ನಂದೀಶ್‌, ಈತನ ಅಪ್ಪ ಜಾತಪ್ಪ ಬಂಧಿತ ಆರೋಪಿಗಳು. ಕಾವ್ಯ ಎಂಬಾಕೆಯನ್ನು ನಂದೀಶ್‌ ಜೊತೆ ಮದುವೆ ಮಾಡಲಾಗಿತ್ತು. ಕಾವ್ಯಾ ಹಾಗೂ ಆಕೆಯ ಅಣ್ಣ ಕೊಟ್ರೇಶ್‌ ನಡುವೆ ಅಕ್ರಮ ಸಂಬಂಧ ಇದೆ ಎಂದು ಗಂಡನಾದ ನಂದೀಶ ಶಂಕಿಸಿದ್ದಾನೆ. ಹಾಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಅ.8 ರಂದು ಇವರಿಬ್ಬರ ಮೃತದೇಹ ಪತ್ತೆಯಾಗಿತ್ತು. ಅಣ್ಣ ತಂಗಿ ವಿಷ ಸೇವಿಸಿ ಮೃತ ಹೊಂದಿದ್ದಾರೆ ಎಂದು ನಂದೀಶ ಹಾಗೂ ಜಾತಪ್ಪ ಚಿಗಟೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಶವ ಪರಿಶೀಲನೆ ಮಾಡಿದಾಗ ಕೊಲೆಯಾಗಿರುವ ಸಂಶಯ ವ್ಯಕ್ತವಾಗಿದೆ.

ಮೃತ ಕಾವ್ಯ ಅವರ ತಾಯಿ ಬಸಮ್ಮ ಅವರು ನೀಡಿದ ದೂರಿನ ಪ್ರಕಾರ, ಪೊಲೀಸರು ಈ ಕೊಲೆ ಪ್ರಕರಣವನ್ನು 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾವ್ಯಾ ಮತ್ತು ಕೊಟ್ರೇಶ್‌ ನಡುವೆ ಅಕ್ರಮ ಸಂಬಂಧ ಇದೆ ಎಂದು ಶಂಕೆ ವ್ಯಕ್ತಪಡಿಸಿದ ನಂದೀಶ, ತನ್ನ ತಂದೆ ಜಾತಪ್ಪನೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ!!