BBK Season 10: ಬಿಗ್‌ಬಾಸ್‌ ಮನೆಗೆ ಕಾಲಿಟ್ಟ MLA ಪ್ರದೀಪ್‌ ಈಶ್ವರ್‌!!!

BBK season 10 MLA Pradeep Eshwar entered to bigg Boss house

BBK Season 10: ಕಲರ್ಸ್ ಕನ್ನಡ ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್‌ಗೆ ಅದ್ಧೂರಿ ತೆರೆ ಬಿದ್ದಿದೆ. ಪ್ರತಿ ಬಾರಿ ಬಿಗ್‌ಬಾಸ್ ಶೋ ಶುರುವಾಗುವ ಸಂದರ್ಭ ಯಾರೆಲ್ಲಾ ದೊಡ್ಮನೆಗೆ ಬರಲಿದ್ದಾರೆ ಎಂಬ ಕೌತುಕ ಜನರಲ್ಲಿ ಮನೆ ಮಾಡುವುದು ಸಹಜ. ಅದರಲ್ಲಿಯೂ ಈ ಬಾರಿಯಂತೂ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವವರ ಬಗ್ಗೆ ಸಣ್ಣ ಹಿಂಟ್ ಕೂಡ ಜನರಿಗೆ ಸಿಕ್ಕಿರಲಿಲ್ಲ. ಆ ಮಟ್ಟಿಗೆ ವಾಹಿನಿ ತನ್ನ ಗೌಪ್ಯತೆ ಕಾಯ್ದುಕೊಂಡು ಜನರಿಗೆ ಸರ್ಪ್ರೈಸ್ ನೀಡಿತ್ತು.

 

 

 

ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10)ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಪಾದಾರ್ಪಣೆ ಮಾಡಿದ್ದಾರೆ. 7 ಜನ ನೇರವಾಗಿ ದೊಡ್ಮನೆ ಪ್ರವೇಶಿಸಿದರೆ ಇಬ್ಬರು ಔಟ್ ಆಗಿ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ಮನೆಗೆ ಹೋಗಿದ್ದಾರೆ. ಆರು ಜನ ಜಸ್ಟ್ ಪಾಸ್ ಆಗಿ ಷರತ್ತಿನ ಅನುಸಾರ ಮೇಲೆ ಗೃಹಪ್ರವೇಶ ಮಾಡಿದ್ದಾರೆ. ಇದರಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಮಾತ್ರ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು ಎಂದರೆ ತಪ್ಪಾಗದು.

ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಬರಬೇಕು ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತಿತ್ತು.ಇದೀಗ, ಸಡನ್ ಆಗಿ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.ಈಗಾಗಲೇ ಬಿಗ್‌ಬಾಸ್ ಮೊದಲ ದಿನದ ಆಟ ಆರಂಭವಾಗಿದ್ದು,17 ಜನ ಸ್ಪರ್ಧಿಗಳು ತಮ್ಮನ್ನು ಪರಿಚಯಿಸಿಕೊಂಡು ಇನ್ನುಳಿದ ಸ್ಪರ್ಧಿಗಳ ಜೊತೆಗೆ ಬೆರೆಯಿತ್ತಿದ್ದಾರೆ. ಈ ನಡುವೆ, ಬಿಗ್‌ಬಾಸ್ ಮನೆಗೆ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ನೀಡಿದ್ದಾರೆ.ಈ ನಡುವೆ, ಪ್ರದೀಪ್ ಈಶ್ವರ್ ಕೇವಲ ಅತಿಥಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಹೀಗಾಗಿ, ಸಚಿವರು ಕೇವಲ ಒಂದು ಇಲ್ಲವೇ ಎರಡು ದಿನ ಮಾತ್ರ ಮನೆಯಲ್ಲಿ ಇರಬಹುದೇನೋ ಎಂಬ ಚರ್ಚೆ ಕೂಡ ನಡೆಯುತ್ತಿದೆ.

 

ಚಿಕ್ಕಬಳ್ಳಾಪುರದ ಶಾಸಕರಾಗಿರುವ ಹಿನ್ನೆಲೆ 3 ತಿಂಗಳ ಕಾಲ ಬಿಗ್‌ಬಾಸ್ ಮನೆಯೊಳಗೆ ಹೋಗಿ ಇರುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿದ್ದರೂ ಕೂಡ ಡೊಳ್ಳು ಕುಣಿತ ತಂಡ ಮುಖ್ಯದ್ವಾರದ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಗೆ ಭೇಟಿ ನೀಡಿ ಎಲ್ಲರಿಗು ಶಾಕ್ ನೀಡಿದ್ದಾರೆ

 

ಇದನ್ನು ಓದಿ: KYC Update: ಬ್ಯಾಂಕ್‌ ಗ್ರಾಹಕರೇ ಗಮನಿಸಿ, ನೀವೇನಾದರೂ KYC ಮಾಡುವುದು ವಿಳಂಬವಾದರೆ ನಿಮ್ಮ ಬ್ಯಾಂಕ್‌ ಖಾತೆ ನಿಷ್ಕ್ರಿಯ!

Leave A Reply

Your email address will not be published.