Snake Drinking water: ಬಿಸಿಲ ಬೇಗೆಗೆ ಬೆಂದು ಗ್ಲಾಸ್’ನಲ್ಲಿದ್ದ ನೀರನ್ನು ಗಟಗಟನೆ ಕುಡಿದು ಬಿಟ್ಟ ಕರಿನಾಗರ: ವೈರಲ್ ಆಯ್ತು ವಿಡಿಯೋ

Snake Drinking water from Glass

Share the Article

Snake Drinking water from Glass: ಹಾವು ಭೂಮಿಯ ಮೇಲಿನ ಅತ್ಯಂತ ನಿಗೂಢ ಜೀವಿಗಳಲ್ಲಿ ಒಂದಾಗಿದೆ. ಇನ್ನು ಮನುಷ್ಯನ ಎದುರಿಗೆ ಹಾವು ಬರಬೇಕು ಎಂದಿಲ್ಲ ಹಾವಿನ ಹೆಸರು ಕೇಳಿದರೆ ಸಾಕು ಕೈ ಕಾಲು ನಡುಗಿ ಬಿಡುತ್ತದೆ. ಆದರೆ ಇಲ್ಲೊಬ್ಬ ಹಾವಿಗೆ ನೀರು ಕುಡಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಕೂಡ ಹರಿಬಿಟ್ಟಿದ್ದಾನೆ.

ಹೌದು, ಹಾವು ನೀರು ಕುಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅದೂ ಕೂಡ ಲೋಟದಲ್ಲಿ? ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಬಾಯಾರಿದ ಕಪ್ಪು ನಾಗರಹಾವು ಲೋಟದಲ್ಲಿ ನೀರು ಕುಡಿಯುತ್ತಿರುವುದು ನೀವು ನೋಡಿ ಖಂಡಿತಾ ಆಶ್ಚರ್ಯ ಪಡುತ್ತೀರಾ!

ಸದ್ಯ ಈ ವೀಡಿಯೊವನ್ನು ಮೇ 15 ರಂದು Instagram ಹ್ಯಾಂಡಲ್ @thebeautifulshorts ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ದಲ್ಲಿ “ಬಾಯಾರಿದ ಹಾವು…. ಬ್ಲ್ಯಾಕ್ ನೆಕ್ಡ್ ಸ್ಪಿಟ್ಟಿಂಗ್ ಕೋಬ್ರಾ (ನಜಾ ನಿಗ್ರಿಕೊಲಿಸ್) ಜಾತಿಯಾಗಿದೆ, ಇದು ಹೆಚ್ಚಾಗಿ ಉಪ-ಸಹಾರನ್ ಆಫ್ರಿಕಾದಲ್ಲಿ ಕಂಡುಬರುತ್ತದೆ, 1.2 ರಿಂದ 2.2 ಮೀ (3.9 ರಿಂದ 7.2 ಅಡಿ) ಉದ್ದಕ್ಕೆ ಬೆಳೆಯುತ್ತದೆ” ಎಂದು ಬರೆಯಲಾಗಿದೆ. ಸದ್ಯ ಈ ವಿಡಿಯೋ ಹಲವಾರು ವೀಕ್ಷಣೆ ಪಡೆದಿದೆ.

ಇದನ್ನು ಓದಿ: Bantwal: ಪಾಣೇರ್ ಸೇತುವೆಯಲ್ಲಿ ಬಿರುಕು : ಆತಂಕದಲ್ಲಿ ಜನರು, ಸಂಪರ್ಕ ಕಡಿತದ ಭೀತಿ

 

Leave A Reply