Siddaramaiah: ರೈತ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದ ವ್ಯಕ್ತಿ- ಸಕತ್ತಾಗೇ ಕೌಂಟ್ರು ಕೊಟ್ಟ ಸಿಎಂ ಸಿದ್ದು !!
man told CM Siddaramaiah that they are not giving girls for farmers' children's marriage

Siddaramaiah: ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ (Siddaramaiah) ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಸಿಎಂ ಸಿದ್ದು ವ್ಯಕ್ತಿಗೆ ಸಕತ್ತಾಗೇ ಕೌಂಟ್ರು ಕೊಟ್ಟಿದ್ದಾರೆ. ಅಷ್ಟಕ್ಕೂ ಸಿದ್ದು ಹೇಳಿದ್ದೇನು ಗೊತ್ತಾ?? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಮಾಹಿತಿ!!!.

ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದು, ಈ ವೇಳೆ ವ್ಯಕ್ತಿಯೊಬ್ಬ
ಸಿದ್ದು ಬಳಿ ಬಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಹೌದು,
ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ವ್ಯಕ್ತಿ ಹೇಳಿದ್ದು, ಇದಕ್ಕೆ
ಸಿಎಂ ಸಕತ್ತಾಗೇ ಕೌಂಟ್ರು ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ, ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಅಂತಾ ಏನೂ ಇಲ್ಲ. ರೈತರ ಮಕ್ಕಳಿಗೆ ಎಲ್ಲರೂ ಹೆಣ್ಣು ಕೊಡುತ್ತಾರೆ. ಸುಮ್ಮನೆ ಏನೇನೋ ಮಾತಾಡಬಾರದು, ಹಾಗಾದರೆ ರೈತರ ಹೆಣ್ಣು ಮಕ್ಕಳು, ಗಂಡು ಮಕ್ಕಳು ಮದುವೆನೇ ಆಗಿಲ್ವಾ? ನಾನು ಮಧ್ಯೆ ಆಗಿಲ್ವಾ ಎಂದು ಪ್ರಶ್ನಿಸಿದ್ದಾರೆ.