Home News Orange Vande Bharat Train: ‘ವಂದೇ ಭಾರತ್’ ರೈಲುಗಳು ಕಿತ್ತಳೆ ಬಣ್ಣದಲ್ಲಿರೋದು ಯಾಕೆ ?! ಇಲ್ಲಿದೆ...

Orange Vande Bharat Train: ‘ವಂದೇ ಭಾರತ್’ ರೈಲುಗಳು ಕಿತ್ತಳೆ ಬಣ್ಣದಲ್ಲಿರೋದು ಯಾಕೆ ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ

Orange Vande Bharat Train

Hindu neighbor gifts plot of land

Hindu neighbour gifts land to Muslim journalist

Orange Vande Bharat Train: ದೇಶದ ಮೊದಲ ಕೇಸರಿ ಬಣ್ಣದ ವಂದೇ ಭಾರತ್ ರೈಲು (Orange Vande Bharat Train) ಸೆ. 24ರಂದು ಕೇರಳದ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಸಂಚಾರ ಆರಂಭಿಸಿದೆ. ಇದೀಗ ಕಿತ್ತಳೆ ಬಣ್ಣದ ರೈಲಿನ ಬಗ್ಗೆ ಇಂಟೆರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ‘ವಂದೇ ಭಾರತ್’ ರೈಲುಗಳು ಕಿತ್ತಳೆ ಬಣ್ಣದಲ್ಲಿರೋದು ಯಾಕೆ ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ!!!.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು, ಕಿತ್ತಳೆ ಬಣ್ಣದ (Orange Color) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು (Vande Bharat Express Train) ಪ್ರಾರಂಭಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಎಂದು ಹೇಳಿದ್ದಾರೆ.

ಹಳದಿ ಮತ್ತು ಕಿತ್ತಳೆ ಎರಡು ಬಣ್ಣಗಳು ಮಾನವನ ಕಣ್ಣುಗಳಿಗೆ ಹೆಚ್ಚು ಗೋಚರಿಸುತ್ತವೆ. ಹಾಗೆಯೇ ಯುರೋಪ್ ದೇಶಗಳಲ್ಲೂ, ಸುಮಾರು 80 ಪ್ರತಿಶತ ರೈಲುಗಳ ಬಣ್ಣ ಕಿತ್ತಳೆ ಅಥವಾ ಹಳದಿ ಮತ್ತು ಕಿತ್ತಳೆ ಸಂಯೋಜನೆಯನ್ನು ಹೊಂದಿವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಮತ್ತು ಇದು 100% ವೈಜ್ಞಾನಿಕ ಚಿಂತನೆಯಿಂದ ಈ ಬಣ್ಣವನ್ನು ಆಯ್ಕೆ ಮಾಡಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.

ಈ ಕಾರಣದಿಂದಲೇ ಹಡಗು ಹಾಗೂ ವಿಮಾನಗಳಲ್ಲಿ ಇಡಲಾಗಿರುವ ಬ್ಲ್ಯಾಕ್ ಬಾಕ್ಸ್‌ಗಳಿಗೆ ಕಿತ್ತಳೆ ಬಣ್ಣ ಬಳಿಯಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿಗಳು ಹಾಗೂ ಲೈಫ್ ಜಾಕೆಟ್‌ಗಳು ಕೂಡಾ ಕಿತ್ತಳೆ ಬಣ್ಣದಲ್ಲಿರುತ್ತವೆ ಎಂದು ಅವರು ವಿವರಿಸಿದರು. ಈ ಮೂಲಕ ಕಿತ್ತಳೆ ಬಣ್ಣದ ಹಿಂದೆ ರಾಜಕೀಯವಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

 

ಇದನ್ನು ಓದಿ: Tirupati temple: ಈ ರಾಶಿಯವರು ಇನ್ಮುಂದೆ ತಿರುಪತಿ ದೇವಾಲಯಕ್ಕೆ ಹೆಚ್ಚಾಗಿ ಹೋಗಬಾರದು !! ಅಚ್ಚರಿ ಸಂಗತಿ ಬಹಿರಂಗ !