Home News Puttur: ದೈವರಾಧನೆ ವೇದಿಕೆಯಲ್ಲಿ ಪ್ರದರ್ಶನದ ಕಲೆಯಲ್ಲ – ನಂಬಿಕೊಂಡು ಬಂದ ವ್ಯವಸ್ಥೆಗೆ ಅಪಹಾಸ್ಯ ಸಲ್ಲದು !

Puttur: ದೈವರಾಧನೆ ವೇದಿಕೆಯಲ್ಲಿ ಪ್ರದರ್ಶನದ ಕಲೆಯಲ್ಲ – ನಂಬಿಕೊಂಡು ಬಂದ ವ್ಯವಸ್ಥೆಗೆ ಅಪಹಾಸ್ಯ ಸಲ್ಲದು !

Puttur

Hindu neighbor gifts plot of land

Hindu neighbour gifts land to Muslim journalist

Puttur: ಕರಾವಳಿ ಭಾಗದ ಜನರಲ್ಲಿ ತುಳು ಆಚರಣೆ, ದೈವದ ಮೇಲೆ ವಿಶೇಷವಾದ ನಂಬಿಕೆಯಿದೆ.ನಂಬಿದ ದೇವರು(Lord)ಕೈ ಬಿಟ್ಟರು ದೈವ ಎಂದಿಗೂ ನಮ್ಮ ಕೈ ಬಿಡುವುದಿಲ್ಲ ಎನ್ನುವ ಬಲವಾದ ನಂಬಿಕೆ ಜನರಲ್ಲಿ ಅಚ್ಚಳಿಯದೆ ಉಳಿದಿದೆ.

ಕರಾವಳಿ ಭಾಗದಲ್ಲಿ ದೈವಾರಾಧನೆ, ಧಾರ್ಮಿಕ ಆಚರಣೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಕಾಂತಾರ ಚಿತ್ರ ತೆರೆ ಕಂಡ ಬಳಿಕ ತುಳುನಾಡಿನ ಆರಾಧನಾ ಪದ್ಧತಿಯಾದ ಭೂತಾರಾಧನೆ/ದೈವಾರಾಧನೆಗೆ ಹೆಚ್ಚಿನ ಮಹತ್ವ ದೊರೆತಿದೆ ಎಂದರೂ ತಪ್ಪಾಗಲಾರದು.ಇದರ ನಡುವೆ, ದೈವಾರಾಧನೆಯನ್ನು ತಮಾಷೆಯ ವಿಷಯವಾಗಿ ನೋಡುವವರು ಕೂಡ ಇದ್ದಾರೆ. ಹೀಗಾಗಿ, ಗಣೇಶೋತ್ಸವ, ನವರಾತ್ರಿ ರೀತಿಯ ನಮ್ಮ ಧಾರ್ಮಿಕ ಆಚರಣೆ, ಮೆರವಣಿಗೆಗಳಲ್ಲಿ ದೈವಾರಾಧನೆ ತೋರಿಸುವ ನರ್ತನ, ಪ್ರದರ್ಶನ ಮಾಡುವುದು ತರವಲ್ಲ. ಈ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ದೈವಾರಾಧನಾ ಸಮಿತಿಯ ಪದಾಧಿಕಾರಿಗಳು ಹೇಳಿದ್ದಾರೆ.

ತುಳುನಾಡಿನಲ್ಲಿ ದೈವಾರಾಧನೆಗೆ ಅದರದ್ದೇ ಆದ ನಂಬಿಕೆ, ನಡವಳಿಕೆಗಳಿದ್ದು, ದೈವ ಕಟ್ಟುವವರು ಶ್ರದ್ಧೆಯಿಂದ ನಿಯಮ ಪಾಲಿಸಬೇಕು. ಆದರೆ, ಇತ್ತೀಚಿಗೆ ಅದಕ್ಕೆ ಅಪಚಾರ ಆಗುವಂತಹ ಕಾರ್ಯಗಳು ನಡೆಯುತ್ತಿದೆ. ಇತ್ತೀಚೆಗೆ ಮೆರವಣಿಗೆಯೊಂದರಲ್ಲಿ ಗುಳಿಗ ವೇಷ ಹಾಕಿಕೊಂಡು ರಸ್ತೆಯಲ್ಲಿ ಹೊರಳಾಡುವ ಆವೇಶ ಬಂದಂತೆ ನಟಿಸುವ ದೃಶ್ಯಗಳು ಕಂಡುಬರುತ್ತಿವೆ. ಆವೇಶ ತನ್ನಷ್ಟಕ್ಕೆ ತಾನು ಬರುವುದಿಲ್ಲ, ಅದಕ್ಕೆ ಕೂಡ ಒಂದು ಕ್ರಮವಿದ್ದು, ದೈವದ ಕೊಡಿಯಡಿಯಲ್ಲಿ ಎಲ್ಲರೂ ಅಕ್ಷತೆ ಹಿಡಿದು ಪ್ರಾರ್ಥನೆ ಸಲ್ಲಿಸಿ ಅಭಯದ ನುಡಿ ಕೊಡಬೇಕು ಎಂದು ಪ್ರಾರ್ಥಿಸಿದ ನಂತರವೇ ದೈವಕ್ಕೆ ಆವೇಶ ಬರುತ್ತದೆ.

ದೈವಗಳ ನರ್ತನ ದೈವದ ಕೊಡಿಯಡಿಯಲ್ಲೇ ನಡೆಯಬೇಕು ಹೊರತು ಹಾದಿಬೀದಿಯಲ್ಲಿ ನಡೆಯುವುದು ಸರಿಯಲ್ಲ. ಇದಕ್ಕೆ ಒಂದು ಕಟ್ಟುಕಟ್ಟಳೆ, ನಿಯಮವಿದೆ. ಗಣೇಶೋತ್ಸವ, ಶಾರದೋತ್ಸವ, ನವರಾತ್ರಿ ಉತ್ಸವದಂತಹ ಮೆರವಣಿಗೆಗಳಲ್ಲಿ ದೈವದ ಪ್ರದರ್ಶನ ಮಾಡುವುದು ದೈವಾರಾಧನೆ ಮಾಡುವ ಜನರ ಭಾವನೆಗೆ ದಕ್ಕೆ ಉಂಟುಮಾಡುತ್ತದೆ. ದೈವಾರಾಧನೆ ಎಂದಿಗೂ ಹಾಸ್ಪಸ್ಪದ ವಿಚಾರವಾಗಬಾರದು ಎಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಅವರು ಹೇಳಿದ್ದಾರೆ.

ತುಳುನಾಡಿನಲ್ಲಿ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಮ್, ಕ್ರೈಸ್ತ ಜನಾಂಗದವರೂ ದೈವಾರಾಧನೆಯನ್ನು ಯಾರೂ ವಿರೋಧ ಮಾಡುವುದಿಲ್ಲ. ನಾವು ನಂಬಿಕೊಂಡು ಬಂದ ಆಚರಣೆಗೆ ಅಪಹಾಸ್ಯ ಮಾಡಿದಂತಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ ನಂತರ ಪ್ರದರ್ಶನ ಮಾಡಬಾರದು ಎನ್ನುವ ಆದೇಶ ನೀಡಿದ್ದರು ಕೂಡ ಅಪಹಾಸ್ಯ ಮಾಡುವವರಿದ್ದಾರೆ. ತುಳುನಾಡಿನ ಈ ಶ್ರೇಷ್ಠ ಆಚರಣೆಯನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಬಾರದೆಂದು ಮನವಿ ಮಾಡಿದ್ದಾರೆ.

 

ಇದನ್ನೂ ಓದಿ: Gurmeet Choudhary:ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿ, ತಕ್ಷಣ ಸಿಪಿಆರ್ ಕೊಟ್ಟು ಬದುಕಿಸಿದ ಖ್ಯಾತ ಕಿರುತೆರೆ ನಟ!!