Mysterious Illness: ಈ ಶಾಲೆಯ ಹುಡುಗಿಯರಿಗೆ ಬಂದಿದೆ ವಿಚಿತ್ರ ಖಾಯಿಲೆ !! ನಡಿತಾ, ಓಡ್ತಾ ಇದ್ರೆ ಅಲ್ಲೆ ಹೊಡೆಯುತ್ತೆ ಪಾರ್ಶ್ವವಾಯು !!

Latest news health news girls at this school have a mysterious illness

Mysterious Illness : ಕೀನ್ಯಾದ ಸೇಂಟ್ ಥೆರೆಸಾ ಎರೇಗಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಚಿತ್ರ ಖಾಯಿಲೆ (Mysterious Illness) ಕಂಡುಬಂದಿದೆ. ಈ ಶಾಲೆಯ ಹುಡುಗಿಯರಿಗೆ ವಿಚಿತ್ರ ಖಾಯಿಲೆ ಬಂದಿದ್ದು, ನಡಿತಾ, ಓಡ್ತಾ ಇದ್ರೆ ಅಲ್ಲೆ ಪಾರ್ಶ್ವವಾಯು ಹೊಡೆಯುತ್ತೆ. ಈಗಾಗಲೇ 100ಕ್ಕೂ ಅಧಿಕ ಬಾಲಕಿಯರಿಗೆ ಈ ಅನಾರೋಗ್ಯ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಪ್ರೌಢಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಬಾಲಕಿಯರ ಕಾಲುಗಳಿಗೆ ಪಾರ್ಶ್ವವಾಯು ಉಂಟಾದ ಹಿನ್ನೆಲೆ ಅವರು ಶಾಲೆಯಲ್ಲಿ ನಡೆದಾಡಲು ಕೂಡ ಕಷ್ಟಪಡುತ್ತಿರುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಸ್ಥಳೀಯ ವರದಿಗಳ ಪ್ರಕಾರ ಕೆಲವು ಪೀಡಿತ ವಿದ್ಯಾರ್ಥಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 30 ಕಾಕಮೆಗಾ ಲೆವನ್‌ ಫೈವ್‌ ಆಸ್ಪತ್ರೆಗಳಲ್ಲಿ, 20 ಶಿಬ್ವೆ ಲೆವಲ್‌ ಫೋರ್‌ ಆಸ್ಪತ್ರೆಯಲ್ಲಿ ಮತ್ತು 12 ಇಗುಹು ಲೆವಲ್‌ 4 ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಕೆಲವು ವರದಿಗಳು ಘಟನೆಯನ್ನು “ಸಾಮೂಹಿಕ ಹಿಸ್ಟೀರಿಯಾ” ಎಂದು ಹೇಳಿವೆ. ಆದರೆ, ಈ ಕಾಯಿಲೆಗೆ ನಿಖರವಾದ ಕಾರಣ ಏನು ಅನ್ನೋದು ತಿಳಿದುಬಂದಿಲ್ಲ. ಸದ್ಯ ಕೀನ್ಯಾ ಸರ್ಕಾರವು ಈ ವಿಷಯವನ್ನು ತನಿಖೆ ನಡೆಸುತ್ತಿದೆ. ಅನಾರೋಗ್ಯದ ಸ್ವರೂಪ ಹಾಗೂ ಅದರ ಮೂಲದ ಬಗ್ಗೆ ತಿಳಿಯಲು ಈ ವಿದ್ಯಾರ್ಥಿನಿಯರ ರಕ್ತದ ಮಾದರಿಗಳನ್ನು ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಇಎಂಆರ್‌ಐ) ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ. ಶಿಕ್ಷಣ ಇಲಾಖೆ, ಕೌಂಟಿ ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯು ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ನಿರತವಾಗಿದೆ ಎಂದು ಪ್ರಾದೇಶಿಕ ಶಿಕ್ಷಣ ನಿರ್ದೇಶಕ ಜೇರೆಡ್ ಒಬಿರೋ ಹೇಳಿದ್ದಾರೆ.

 

ಇದನ್ನು ಓದಿ: Rare Sanke Video: ಭೂಮಿಯಲ್ಲಿ ಕಂಡು ಬಂದ ಅಪರೂಪದ ಹಾವು! ಹುಲ್ಲಿಗೂ ಇದಕ್ಕೂ ವ್ಯತ್ಯಾಸನೇ ಇಲ್ಲ ಗುರೂ…

Leave A Reply

Your email address will not be published.