Gruha aarogya scheme: ರಾಜ್ಯದ ಜನರೇ ನಿಮಗೆ ಮತ್ತೊಂದು ಸಂತಸ ಸುದ್ದಿ – ಮನೆ ಬಾಗಿಲಿಗೇ ಬರ್ತಿದೆ ‘ಗ್ಯಾರಂಟಿ’ಗಳನ್ನೂ ಮೀರಿಸೋ ಹೊಸ ಯೋಜನೆ

Karnataka news HEALTH scheme MINISTER GUNDURAO says ASHA KIRAN YOJANA and gruha aarogya WILL START SOON

Gruha aarogya scheme: ಇನ್ನುಮುಂದೆ ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸೋ ಗೃಹ ಆರೋಗ್ಯ ಯೋಜನೆಯನ್ನು (Health scheme) ಜಾರಿಗೊಳಿಸಲಾಗಿದ್ದು, ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ.

ಈ ಕುರಿತು, ಬೆಳಗಾವಿಯ ಸುವರ್ಣಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು , ಗೃಹ ಆರೋಗ್ಯ ಯೋಜನೆಯನ್ನು(Gruha aarogya scheme) ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಎಲ್ಲಾ ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಈ ಯೋಜನೆ ಪ್ರಕಾರ, ಪ್ರತಿಯೊಬ್ಬರ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸಿ, ಆರೋಗ್ಯ ತಪಾಸಣೆ ನಡೆಸುವ ನಿಟ್ಟಿನಲ್ಲಿ ಗೃಹ ಆರೋಗ್ಯ ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ. ವೈದ್ಯತರ ತಂಡ ಮನೆ ಮನೆಗೆ ಭೇಟಿ ಮಾಡಿ, ಜನರ ಸಮಸ್ಯೆಗಳಿಗೆ ಉಚಿತ ಔಷಧ ಒದಗಿಸಲಿದ್ದಾರೆ. ಇದಕ್ಕಾಗಿ ಆಶಾಕಿರಣ ಯೋಜನೆಯಡಿ ಪ್ರಾಯೋಗಿಕ ಅನುಷ್ಠಾನಕ್ಕೆ ಬೆಳಗಾವಿ ವಿಭಾಗದಲ್ಲಿ ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ ಆಯ್ಕೆ ಮಾಡಲಾಗಿದೆ. ಅಲ್ಲದೇ ಈ ಭಾಗದ ಎಲ್ಲ ಮನೆಗಳಿಗೆ ವೈದ್ಯರ ತಂಡ ಭೇಟಿ ನೀಡಿ, ಕಣ್ಣಿನ ತಪಾಸಣೆ ನಡೆಸಿ, ಉಚಿತ ಕನ್ನಡಕ ವಿಚರಿಸಲಿದ್ದಾರೆ ಎಂದರು.

ಇದನ್ನೂ ಓದಿ: BJP ಹೈಕಮಾಂಡ್ ಗೇ ಬೆದರಿಕೆ ಹಾಕಿದ ಅಣ್ಣಾ ಮಲೈ – ಹೊಸ ಅವತಾರ ಕಂಡು ಅಮಿತ್ ಶಾ, ಜೆಪಿ ನಡ್ಡಾ ಶಾಕ್

Leave A Reply

Your email address will not be published.