Home National Kerala: ಸ್ನೇಹಿತರ ಫೋಟೋವನ್ನು ಅಸಹ್ಯವಾಗಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ – 14ರ ಖತರ್ನಾಕ್...

Kerala: ಸ್ನೇಹಿತರ ಫೋಟೋವನ್ನು ಅಸಹ್ಯವಾಗಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ – 14ರ ಖತರ್ನಾಕ್ ಬಾಲಕ ಅಂದರ್

Kerala
Image source: The statesman

Hindu neighbor gifts plot of land

Hindu neighbour gifts land to Muslim journalist

Kerala: ತಂತ್ರಜ್ಞಾನ ಅನ್ನೋದು ಎಷ್ಟು ಮುಖ್ಯವೋ ಅಷ್ಟೇ ಅಪಾಯವು ಇದೆ ಎನ್ನುವುದು ವಾಸ್ತವ ಸತ್ಯ. ಅದೇ ರೀತಿ ಎಐ ತಂತ್ರಜ್ಞಾನ ಬಳಸಿ ಶಾಲಾ ಮಕ್ಕಳ ಅಶ್ಲೀಲ ಫೋಟೋ ಚಿತ್ರಿಸಿ ಅದನ್ನು ಸೋಶಿಯಲ್ ಮೀಡಿಯಾಗಳಿಗೆ ಅಪ್‌ಲೋಡ್‌ ಮಾಡುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕನನ್ನು ಕೇರಳ(Kerala) ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ.

ಮುಖ್ಯವಾಗಿ ಎಐ ತಂತ್ರಜ್ಞಾನ ಬಳಸಿ ಯಾರ ಫೋಟೋವನ್ನು ಹೇಗೆ ಬೇಕಾದರೂ ಎಡಿಟ್ ಮಾಡಬಹುದಾಗಿದೆ. ಮಕ್ಕಳು ವಯಸ್ಸಾದ ನಂತರ ಹೇಗೆ ಕಾಣುತ್ತಾರೆ. ವಯಸ್ಸಾದವರು ಯೌವ್ವನದಲ್ಲಿ ಹೇಗಿದ್ದರು? ಹೀಗೆ ನಿಮಗೆ ಹೇಗೆ ಬೇಕೋ ಹಾಗೆ ಆಯ್ಕೆಗಳನ್ನು ಎಐಗೆ ನೀಡಿದರೆ ಅವುಗಳು ಫೋಟೋಗಳನ್ನು ಚಿತ್ರಿಸಿ ನೀಡುತ್ತದೆ.

ಅಂತೆಯೇ ಆರೋಪಿ ಬಾಲಕ ಶಾಲೆಯ ವಾಟ್ಸಾಪ್ ಗ್ರೂಪ್‌ನಿಂದ ವಿದ್ಯಾರ್ಥಿನಿಯರ ಫೋಟೋ ತೆಗೆದುಕೊಂಡು ಅದನ್ನು ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಿ ವಿರೂಪಗೊಳಿಸುತ್ತಿದ್ದ. ಬರೀ ಇಷ್ಟೇ ಅಲ್ಲದೇ ಈತ ಸಾಮಾಜಿಕ ಜಾಲತಾಣದಲ್ಲಿ ಹಲವು ನಕಲಿ ಐಡಿಗಳನ್ನು ಹೊಂದಿದ್ದು, ಅವುಗಳ ಮೂಲಕ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ, ಈ ಪ್ರಕರಣದಲ್ಲಿ ಸಂತ್ರಸ್ತೆಯಾದ ಬಾಲಕಿ ಹಾಗೂ ಆಕೆಯ ಗೆಳತಿಯರ ಫೋಟೋಗಳನ್ನು ಈ ಬಾಲಕ ಪೋಸ್ಟ್ ಮಾಡಿದ್ದ, ಅಲ್ಲದೇ ಅವರಿಗೆ ಬೆದರಿಕೆ ಒಡ್ಡಿದ್ದ.

ಬಹಳ ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಕ ತನ್ನ ಈ ಕಿಡಿಗೇಡಿ ಕೆಲಸಗಳನ್ನು ಮಾಡಿ ಸಿಕ್ಕಿಬೀಳದಂತೆ ತಡೆಯಲು ವಿಪಿಎನ್(virtual private network) ಹಾಗೂ ಚಾಟ್‌ಬಾಟ್ ಬಳಸುತ್ತಿದ್ದ. ಸದ್ಯ ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯ ನಂತರ ಈ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಯನಾಡ್ ಸೈಬರ್ ಪೊಲೀಸ್ ಇನ್ಸ್‌ಪೆಕ್ಟರ್ ಶಾಜು ಜೊಸೇಫ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಅದಲ್ಲದೆ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಮ್ಮ ಮಕ್ಕಳ ಮೇಲೆ ಒಂದು ಕಣ್ಣಿಡುವಂತೆ ಹಾಗೂ ಅವರ ಸೋಶೀಯಲ್ ಮೀಡಿಯಾ ಚಟುವಟಿಕೆಗಳ ಬಗ್ಗೆ ಗಮನಿಸುವಂತೆ ಸೂಚಿಸಿದ್ದಾರೆ.

ಮುಖ್ಯವಾಗಿ ಈ ಪ್ರಕರಣ ಬೇಧಿಸಲು ಪೊಲೀಸರು ಇನ್ಸ್ಟಾಗ್ರಾಮ್‌ ಟೆಲಿಗ್ರಾಮ್‌ ಮುಂತಾದ ಸೋಶಿಯಲ್ ಮೀಡಿಯಾಗಳ ಸಹಾಯ ಪಡೆದಿದ್ದರು. ಜೊತೆಗೆ ಬಾಲಕನ ಮೊಬೈಲ್ ಫೋನ್ ಟ್ರೇಸ್ ಮಾಡಿದ್ದರು.

ಅಲ್ಲದೆ ಬಾಲಕ ಅಪ್ರಾಪ್ತನಾಗಿರುವುದರಿಂದ ಆತನನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನ ಸಾಮಾಜಿಕ ಹಿನ್ನೆಲೆಯ ವರದಿಯನ್ನು ಸಕ್ಷಮ ನ್ಯಾಯಾಲಯದ ಮುಂದೆ ಸಲ್ಲಿಸಲಾಗುವುದು. ಅಪ್ರಾಪ್ತ ಆರೋಪಿಯನ್ನು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಾರ್ಕಿನಲ್ಲಿ ಜೊತೆಯಾದ ಜೋಡಿ; ಬೆದರಿಸಿ, ಹಣ ಕಿತ್ತು ಮಂಚಕ್ಕೆ ಕರೆದ ಪೋಲೀಸರು !!