Home Karnataka State Politics Updates Anand Singh: ಚುನಾವಣಾ ರಾಜಕೀಯಕ್ಕೆ ಆನಂದ್ ಸಿಂಗ್ ಗುಡ್ ಬೈ !! ಬಿಜೆಪಿಗೆ ಶಾಕ್ ಕೊಡ್ತಾರಾ...

Anand Singh: ಚುನಾವಣಾ ರಾಜಕೀಯಕ್ಕೆ ಆನಂದ್ ಸಿಂಗ್ ಗುಡ್ ಬೈ !! ಬಿಜೆಪಿಗೆ ಶಾಕ್ ಕೊಡ್ತಾರಾ ಮತ್ತೊಬ್ಬ ಪ್ರಬಲ ನಾಯಕ?!

Hindu neighbor gifts plot of land

Hindu neighbour gifts land to Muslim journalist

Anand Singh: ಈ ಬಾರಿ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಪಕ್ಷದಲ್ಲಿ ಹಲವಾರು ಗೊಂದಲಗಳು, ಭಿನ್ನಾಭಿಪ್ರಾಯ ಗಳು, ರಾಜೀನಾಮೆಗಳು, ಪಕ್ಷ ಬದಲಾವಣೆ ಬೆಳಕಿಗೆ ಬರುತ್ತಿದೆ. ಅಂತೆಯೇ ಈಗಾಗಲೇ ಚುನಾವಣೆ ರಾಜಕೀಯದಿಂದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ದೂರ ಉಳಿದ ಬಳಿಕ ಇದೀಗ ಮತ್ತೊಬ್ಬ ಸಚಿವ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಬಗ್ಗೆ ಸುದ್ದಿ ತಿಳಿದಿದೆ .

ಹೌದು, ಮಾಜಿ ಸಚಿವ ಆನಂದ ಸಿಂಗ್ (Anand Singh) ರಾಜಕೀಯದಿಂದ ದೂರವಾಗೋ ಮಾತನಾಡಿದ್ದಾರೆ. ಒಂದು ಉಪಚುನಾವಣೆ ಸೇರಿದಂತೆ ಹೊಸಪೇಟೆ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರೋ ಆನಂದ ಸಿಂಗ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಗ ಸಿದ್ಧಾರ್ಥ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ್ದರು. ಲೋಕಸಭೆ ಚುನಾವಣೆಗೆ ಹೋಗೋ ಉದ್ದೇಶದಿಂದಲೇ ಮಗನನ್ನು ಕಣಕ್ಕಿಳಿಸಿದ್ದಾರೆ ಎನ್ನಲಾಗಿತ್ತು. ಆದ್ರೆ ಕಾಂಗ್ರೆಸ್ ಗ್ಯಾರಂಟಿ ಅಲೆಯಲ್ಲಿ ಸಿದ್ದಾರ್ಥ ಸೋಲನುಭವಿಸಿದರು. ಮಗನ ಜೊತೆಗೆ ಬಿಜೆಪಿಯ ದೊಡ್ಡ ಸೋಲು ಚುನಾವಣೆ ರಾಜಕೀಯದಿಂದ ಹಿಂದೆ ಸರಿಯುವಂತೆ ಮಾಡಿದೆ ಎನ್ನಲಾಗಿದೆ.

ಸದ್ಯ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆಯಿಂದ ಸ್ಪರ್ಧೆ ಮಾಡೋ ಬಗ್ಗೆ ಪ್ರಶ್ನಿಸಿದಾಗ, ನಾನು ಚುನಾವಣೆಗೆ ಸ್ಪರ್ಧಿಸಲ್ಲ ಆದರೆ ಪಕ್ಷದಲ್ಲಿರುತ್ತೇನೆ. ಚುನಾವಣೆ ವೇಳೆ ಪಕ್ಷ ಕೊಟ್ಟ ಕೆಲಸ ಮಾಡುತ್ತೇನೆ. ಅಗತ್ಯ ಇದ್ದವರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಪಕ್ಷ ಯಾರನ್ನೇ ಕಣಕ್ಕಿಳಿಸಿದ್ರು ಗೆಲ್ಲಿಸಿಕೊಂಡು ಬರುತ್ತೇನೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಇದನ್ನು ಮೂರು ವರ್ಷಗಳ ಹಿಂದೆಯೇ ಹೇಳಿದ್ದೆ ಅದರಂತೆ ನಡೆದುಕೊಂಡಿದ್ದೇನೆ ಎಂದಿದ್ದಾರೆ.

ಈಗಾಗಲೇ ಆನಂದ ಸಿಂಗ್‌ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ರಾಜಕೀಯದಿಂದ ಆಸಕ್ತಿ ಕಳೆದುಕೊಂಡಂತಾಗಿದ್ದಾರೆ. ಮಾಧ್ಯಮದಿಂದ ದೂರವೇ ಉಳಿದಿದ್ದು, ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ದಿಢೀರಾಗಿ ಚುನಾವಣೆಯಿಂದ ದೂರು ಉಳಿಯುವ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ವಾಸ್ತು ಪ್ರಕಾರ ಲಿವಿಂಗ್ ರೂಮಿನಲ್ಲಿ ಈ ಬಣ್ಣವನ್ನು ಬಳಸಬಾರದು !! ಯಾಕೆ ಗೊತ್ತಾ?