Andhra Pradesh: ಕಾಂತಾರದ ಸೀನ್ ಸೃಷ್ಟಿಸಲು ಹೋದ ಜನ – ಮುಂದಾಗಿದ್ದೆ ಭಯಾನಕ ಅವಘಡ !

Andhrapradesh news kantara film Sean recreate fire accident 6 injured

Share the Article

Andhra Pradesh: ಕಾಂತಾರಾ (kantara) ಸಿನಿಮಾ ಸೀನ್ ಸೃಷ್ಟಿಸಲು ಹೋಗಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಕಡಪಾ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಪರಿಣಾಮ 6 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಕಾಂತಾರಾ ಸೀನ್ ಸೃಷ್ಟಿಸಲು ಹೋಗಿ ಈ ಅನಾಹುತ ಸಂಭವಿಸಿದೆ. ಸುತ್ತಲು ಬೆಂಕಿ ನಡುವೆ ದೈವ ನರ್ತನದ ವೇಷಧಾರಿಗಳು ನೃತ್ಯ ಮಾಡಿದ್ದು, ಈ ವೇಳೆ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಇದರಿಂದ ದೈವ ವೇಷಧಾರಿಗಳು ಬೆಂಕಿ ಮಧ್ಯೆ ಸಿಲುಕಿದ್ದು, ಬೆಂಕಿಯ ಬೇಗೆ ಕೆಲವರ ದೇಹವನ್ನು ಸುಟ್ಟಿದೆ.

ಇನ್ನು, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ. ಸುತ್ತಲಿನ ಜನರೆಲ್ಲಾ ಧಗಧಗಿಸುತ್ತಿದ್ದ ಬೆಂಕಿ ನೋಡಿ ಭಯಗೊಂಡರು. ಹಾಗೇ ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಇದನ್ನೂ ಓದಿ: Chhatrapati Shivaji Maharaj : ಭಾರತೀಯರಿಗೆಲ್ಲಾ ಸಂತೋಷದ ಸುದ್ದಿ- 300 ವರ್ಷಗಳ ನಂತರ ಭಾರತಕ್ಕೆ ಬರ್ತಿದೆ ಶಿವಾಜಿ ಮಹಾರಾಜರ ‘ಹುಲಿ ಪಂಜ’ !

Leave A Reply