Tamilnadu: ಈತನಿಗೆ ಹಳೆ ಮೊಬೈಲ್ ಕೊಟ್ರೆ ಗಿಫ್ಟ್ ಆಗಿ ಸಿಗುತ್ತೆ ಕೋಳಿಮರಿ – ಹೀಗೊಂದು ವಿಶಿಷ್ಟ ಪರಿಸರ ಜಾಗೃತಿ
Tamilnadu news intresting news man sells chicks for old mobile phones in Tamil Nadu
Tamilnadu: ಪರಿಸರ ಸ್ನೇಹಿ ಬಳಕೆ ವಸ್ತುಗಳ ಬಳಕೆಗೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿರುವುದು ಗೊತ್ತಿರುವ ವಿಚಾರ!! ಆದರೆ, ಪ್ಲಾಸ್ಟಿಕ್ ಬಳಕೆ ತಡೆಗೆ ಎಷ್ಟೇ ಕ್ರಮ ಕೈಗೊಂಡರು ಕೂಡ ಪ್ಲಾಸ್ಟಿಕ್ ಬಳಕೆ ಮಾಡುವವರು ಅಷ್ಟೆ ಮಂದಿಯಿದ್ದಾರೆ. ಆದರೆ, ಇಲ್ಲೊಬ್ಬರು ಪರಿಸರ ಪ್ರೇಮಿ ವಿಭಿನ್ನ ರೀತಿಯಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ನಾವು ಹಳೆ ಪೇಪರ್, ಪ್ಲಾಸ್ಟಿಕ್-ಕಬ್ಬಿಣದ ಪರಿಕರಗಳಿಗೆ ಹಣ ನೀಡುವುದನ್ನು ಗಮನಿಸಿರುತ್ತೇವೆ. ಆದರೆ ತಮಿಳುನಾಡಿನ (Tamilnadu)ತಿರುನಲ್ವೇಲಿಯಲ್ಲಿ ಒಬ್ಬ ವ್ಯಕ್ತಿ ಹಳೆಯ ಸೆಲ್ ಫೋನ್‌ಗಳಿಗಾಗಿ ಹಣದ ಬದಲಾಗಿ ಕೋಳಿ ಮರಿಯನ್ನು ಮಾರಾಟ ಮಾಡಲು ಆರಂಭಿಸಿದ್ದಾನೆ .ಸ್ಮಾರ್ಟ್‌ಫೋನ್ ಬಳಕೆಯ ಬಳಿಕ ಪ್ರತಿ ಮನೆಯಲ್ಲೂ ಹಾನಿಗೊಳಗಾದ ಮೊಬೈಲ್‌ಗಳು ಹೆಚ್ಚಾಗಿದ್ದು, ಇವೆಲ್ಲವೂ ನಿರುಪಯುಕ್ತವಾಗಿದೆ. ಅವುಗಳನ್ನು ಖರೀದಿಸಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಅರಿವು ಮೂಡಿಸಿ ಪರಿಸರ ಮಾಲಿನ್ಯದಿಂದ ರಕ್ಷಿಸುವ ಗುರಿ ಹೊಂದಿರುವ ಯುವಕನೊಬ್ಬ ಮನೆ ಮನೆಗೆ ತೆರಳಿ ಹಳೆಯ ಸೆಲ್ ಫೋನ್ ಗಳನ್ನು ತೆಗೆದುಕೊಂಡು ಕೋಳಿ ಮರಿ ನೀಡುತ್ತಾನೆ.
ತಮಿಳುನಾಡಿನ ತಿರುನಲ್ವೇಲಿಯ ಅನ್ಬಳಗನ್ ಎಂಬ ವ್ಯಕ್ತಿ ಪರಿಸರ ಸಂರಕ್ಷಣೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವ ಸಲುವಾಗಿ ಹಳೆಯ ಮೊಬೈಲ್ ಫೋನ್‌ಗಳನ್ನು ಖರೀದಿಸಲು ಅನ್ಬಳಗನ್ ತೀರ್ಮಾನ ಮಾಡಿದ್ದಾರೆ. ತಾನು ಖರೀದಿಸಿದ ಸೆಲ್ ಫೋನ್‌ಗಳನ್ನು ಮರುಬಳಕೆ ಮಾಡಲು ವಿವಿಧ ಸೆಲ್ ಫೋನ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಗ್ನೇನ್ ಆಯಾ ಸಂಸ್ಥೆಗಳಿಂದ ಸಿಗ್ನಲ್ ಪಡೆದುಕೊಂಡು ತನ್ನ ಕಾರ್ಯಕ್ರಮವನ್ನು ಜಾರಿಗ ತೆಂಕಶಿ, ಮಧುರೈ, ತೂತುಕುಡಿ, ವಿರುದುನಗರ ಮತ್ತಿತರ ಪ್ರದೇಶಗಳಲ್ಲಿ ವಿನೂತನ ರೀತಿಯಲ್ಲಿ ಸೆಲ್ ಫೋನ್ ಖರೀದಿಸಲು ಟೈಮ್ ಟೇಬಲ್ ಕೂಡ ಮಾಡಿಕೊಂಡಿದ್ದಾರಂತೆ.
ನಿರುಪಯುಕ್ತ ಹಳೆಯ ಬಟನ್ ಸೆಲ್ ಫೋನ್ ನೀಡಿದವರಿಗೆ 2 ಮರಿಗಳು ಹಾಗೂ ಆಯಂಡ್ರಾಯ್ಡ್ ಅಥವಾ ಸ್ಮಾರ್ಟ್ ಫೋನ್ ನೀಡಿದವರಿಗೆ 4 ಮರಿಗಳನ್ನು ನೀಡೋದಕ್ಕೆ ತೀರ್ಮಾನ ಮಾಡಿದ್ದರಂತೆ. ಇದಕ್ಕಾಗಿ 50 ಮಂದಿಯನ್ನು ತಮ್ಮ ವಿನೂತನ ವ್ಯವಹಾರಕ್ಕೆ ಬಳಕೆ ಮಾಡಿಕೊಂಡಿದ್ದರೆ. ಕೋಳಿ ಬುಟ್ಟಿಗಳಲ್ಲಿ ಹಳೆಯ ಸೆಲ್ ಫೋನ್ ಗಳನ್ನು ಹಾಕಿಕೊಂಡು ಸೈಕಲ್ ಇಲ್ಲವೇ ಬೈಕ್ ನಲ್ಲಿ ಬೀದಿ ಬೀದಿಗಳಲ್ಲಿ ಸಂಚರಿಸುತ್ತಾರೆ. ನಾಮಕಲ್ ಭಾಗದಲ್ಲಿ ನೂರಾರು ಮರಿಗಳನ್ನು ಜನರು ಖರೀದಿ ಮಾಡಿದ್ದಾರೆ. ಒಟ್ಟಿನಲ್ಲಿ ಇವರಂತೆ ಪ್ರಕೃತಿ ಉಳಿಸುವತ್ತ ಎಲ್ಲರು ಚಿತ್ತ ವಹಿಸಿದರೆ ಪರಿಸರ ಉಳಿಯುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:Old Age Pension:ವೃದ್ಧಾಪ್ಯ ವೇತನದಲ್ಲಿ ಭಾರೀ ಹೆಚ್ಚಳ – ಸಿಎಂ ಸಿದ್ದರಾಮಯ್ಯ ಘೋಷಣೆ