Small Saving Scheme: ಠೇವಣಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದ ಕೇಂದ್ರ ಸರಕಾರ! ಆರ್‌ಡಿ ಬಡ್ಡಿ ದರ ಹೆಚ್ಚಳ!!!
Small Saving Scheme: ಇಂದು ಶುಕ್ರವಾರ ಠೇವಣಿದಾರರಿಗೆ ಕೇಂದ್ರಸರಕಾರ ಗುಡ್‌ನ್ಯೂಸ್ ನೀಡಿದೆ. ಹೌದು ಆರ್‌ಡಿ ಯೋಜನೆಯೊಂದರ ಬಡ್ಡಿ ದರವನ್ನು ಕೇಂದ್ರ ಸರಕಾರ ಜಾಸ್ತಿ ಮಾಡಿದೆ. ಈ ಮೂಲಕ ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇದರ ಬಗ್ಗೆ ಕೇಂದ್ರ ಹಣಕಾಸು ಸಚಿವ ಸುತ್ತೋಲೆಯನ್ನು ನೀಡಿದೆ.
ಮೋದಿ ಸರಕಾರ ಐದು ವರ್ಷದ ಆರ್‌ಡಿ ಯೋಜನೆಯ ಬಡ್ಡಿದರವನ್ನು ಡಿಸೆಂಬರ್ ತ್ರೈಮಾಸಿಕಕ್ಕೆ 6.5 ಶೇಕಡಾದಿಂದ 6.7 ಕ್ಕೆ ಏರಿಸಿದೆ. ಈ ಯೋಜನೆ ಹೊರತು ಪಡಿಸಿ ಬೇರೆ ಯಾವುದೇ ಆರ್‌ಡಿ ಯೋಜನೆಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಅಕ್ಟೋಬರ್-ಡಿಸೆಂಬರ್ 2023 ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳು ನೀಡುವ ಪರಿಷ್ಕೃತ ದರಗಳು ಈ ಕೆಳಗಿನಂತಿವೆ:
ಉಳಿತಾಯ ಯೋಜನೆ ಹಾಗೂ ಬಡ್ಡಿ ದರ
ಪೋಸ್ಟ್ ಆಫೀಸ್ ಉಳಿತಾಯ ಖಾತೆ 4%
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ 6.70%
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ 7.40%
ಪೋಸ್ಟ್ ಆಫೀಸ್ ಸಮಯದ ಠೇವಣಿ( Post Office Time Deposit) (1 ವರ್ಷ) 6.90%
ಪೋಸ್ಟ್ ಆಫೀಸ್ ಸಮಯದ ಠೇವಣಿ (2 ವರ್ಷಗಳು) 7%
ಪೋಸ್ಟ್ ಆಫೀಸ್ ಸಮಯದ ಠೇವಣಿ (3 ವರ್ಷಗಳು) 7%
ಪೋಸ್ಟ್ ಆಫೀಸ್ ಸಮಯದ ಠೇವಣಿ (5 ವರ್ಷಗಳು) 7.50%
ಕಿಸಾನ್ ವಿಕಾಸ್ ಪತ್ರ (ಕೆವಿಪಿ) 7.50%
ಸಾರ್ವಜನಿಕ ಭವಿಷ್ಯ ನಿಧಿ (PPF) 7.10%
ಸುಕನ್ಯಾ ಸಮೃದ್ಧಿ ಯೋಜನೆ 8%
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ 7.70%
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) 8.20%
ಹಣಕಾಸು ಸಚಿವಾಲಯದ ಸುತ್ತೋಲೆಯ ಪ್ರಕಾರ, ಉಳಿತಾಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 4 ಮತ್ತು ಒಂದು ವರ್ಷದ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 6.9 ಕ್ಕೆ ಉಳಿಸಿಕೊಳ್ಳಲಾಗಿದೆ. ಎರಡು ವರ್ಷ ಮತ್ತು ಮೂರು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು ಶೇಕಡಾ 7 ರಷ್ಟಿದ್ದರೆ, ಐದು ವರ್ಷಗಳ ಅವಧಿಯ ಠೇವಣಿಯ ದರವು ಶೇಕಡಾ 7.5 ರಷ್ಟಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಶೇಕಡಾ 8.2 ರ ಬಡ್ಡಿದರ ಇದೆ.
ಮಾಸಿಕ ಆದಾಯ ಖಾತೆ ಯೋಜನೆಯಲ್ಲಿ, ಬಡ್ಡಿ ದರವು 7.4 ಪ್ರತಿಶತವಾಗಿದ್ದರೆ, ಇನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ 7.7 ಶೇಕಡಾ ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯಲ್ಲಿ ಶೇಕಡಾ 7.1 ಆಗಿದೆ. ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರವು 7.5 ಪ್ರತಿಶತ ಇದೆ.
ಸುತ್ತೋಲೆಯ ಪ್ರಕಾರ, ಹೆಣ್ಣು ಮಕ್ಕಳ ಯೋಜನೆ ಸುಕನ್ಯಾ ಸಮೃದ್ಧಿ ಖಾತೆಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗದೆ ಶೇಕಡಾ 8 ರಷ್ಟು ಇದೆ.
ಈ ಬಡ್ಡಿದರದ ಹೊಂದಾಣಿಕೆಗಳು ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಮಹತ್ವದ್ದಾಗಿದೆ. ಪ್ರಾಥಮಿಕವಾಗಿ ಅಂಚೆ ಕಚೇರಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ತ್ರೈಮಾಸಿಕ ಆಧಾರದ ಮೇಲೆ ಸರ್ಕಾರವು ಪರಿಶೀಲಿಸುತ್ತದೆ.