BMRCL Recruitment 2023: ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳ, ಇಲ್ಲಿದೆ ಹೆಚ್ಚಿನ ಮಾಹಿತಿ!!!
Latest news job notification BMRCL Recruitment 2023 notification
BMRCL Recruitment 2023: ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗಾವಕಾಶ(BMRCL Recruitment 2023)!!!ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಸೆಪ್ಟೆಂಬರ್ 2023 ರ BMRCL ಅಧಿಕೃತ ಅಧಿಸೂಚನೆಯ ಅನುಸಾರ, ಉಪ ಮುಖ್ಯ ಇಂಜಿನಿಯರ್, ಹೆಚ್ಚುವರಿ ಮುಖ್ಯ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಒಟ್ಟು 8 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಬೆಂಗಳೂರು ಮೆಟ್ರೋ ನಿಗಮದ ಅಧಿಕೃತ ವೆಬ್ಸೈಟ್ bmrc.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 23 ಕೊನೆಯ ದಿನವಾಗಿದ್ದು,ಈ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಹುದ್ದೆಯ ವಿವರ ಹೀಗಿದೆ:
ಹುದ್ದೆಯ ಹೆಸರು: ಉಪ ಮುಖ್ಯ ಎಂಜಿನಿಯರ್, ಹೆಚ್ಚುವರಿ ಮುಖ್ಯ ಎಂಜಿನಿಯರ್
ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
ಹುದ್ದೆಗಳ ಸಂಖ್ಯೆ: 8
ಉದ್ಯೋಗ ಸ್ಥಳ: ಬೆಂಗಳೂರು
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 26-09-2023 ಆರಂಭಿಕ ದಿನವಾಗಿದ್ದು,25-10- 2023 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಅರ್ಜಿಯ ಹಾರ್ಡ್ ಪ್ರತಿಯನ್ನು ಸಲ್ಲಿಸಲು 30-11- 2023ಕೊನೆಯ ದಿನವಾಗಿದೆ.ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
BMRCL ಹುದ್ದೆಯ ವಿವರಗಳು ಈ ಕೆಳಗಿನಂತಿವೆ:
ಮುಖ್ಯ ಇಂಜಿನಿಯರ್ (ಎಲೆಕ್ಟ್ರಿಕಲ್)- 1
ಹೆಚ್ಚುವರಿ ಮುಖ್ಯ ಇಂಜಿನಿಯರ್ (ಟ್ರಾಕ್ಷನ್ ಮತ್ತು RSS)- 2
ಉಪ ಮುಖ್ಯ ಇಂಜಿನಿಯರ್ (ಸಿಸ್ಟಮ್ ಒಪ್ಪಂದಗಳು)- 1
ಉಪ ಮುಖ್ಯ ಎಂಜಿನಿಯರ್ (ಕಾರ್ಯಾಚರಣೆ ಸುರಕ್ಷತೆ)- 1
ಉಪ ಮುಖ್ಯ ಇಂಜಿನಿಯರ್ (ECS/TVS)- 1
ಉಪ ಮುಖ್ಯ ಇಂಜಿನಿಯರ್ (ಸಿಗ್ನಲಿಂಗ್)- 1
ಕಾರ್ಯನಿರ್ವಾಹಕ ಇಂಜಿನಿಯರ್ (ಸಿಗ್ನಲಿಂಗ್)- 1
ಅರ್ಜಿ ಸಲ್ಲಿಸುವುದು ವಿಧಾನ ಹೀಗಿದೆ:
# ಮೊದಲಿಗೆ ಅಧಿಕೃತ ವೆಬ್ ಸೈಟ್ english.bmrc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 23ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
# ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ನಕಲನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
# ವಿಳಾಸ:
ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, K.H.ರಸ್ತೆ, ಶಾಂತಿನಗರ, ಬೆಂಗಳೂರು-560027 ಇಲ್ಲಿಗೆ ದಾಖಲೆಗಳನ್ನು ಕಳುಹಿಸಬೇಕು.
BMRCL ನೇಮಕಾತಿ 2023 ಅರ್ಹತಾ ಮಾನದಂಡಗಳು ಹೀಗಿವೆ:
* ಮುಖ್ಯ ಇಂಜಿನಿಯರ್ (ಎಲೆಕ್ಟ್ರಿಕಲ್)ಹುದ್ದೆಗೆ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು
* ಹೆಚ್ಚುವರಿ ಮುಖ್ಯ ಇಂಜಿನಿಯರ್ (ಟ್ರಾಕ್ಷನ್ ಮತ್ತು RSS)ಹುದ್ದೆಗೆ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.
* ಡೆಪ್ಯುಟಿ ಚೀಫ್ ಇಂಜಿನಿಯರ್ (ಸಿಸ್ಟಮ್ ಕಾಂಟ್ರಾಕ್ಟ್ಸ್): ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿ.ಟೆಕ್ ಆಗಿರಬೇಕು.
* ಡೆಪ್ಯುಟಿ ಚೀಫ್ ಇಂಜಿನಿಯರ್ (ಆಪರೇಷನ್ ಸೇಫ್ಟಿ) ಹುದ್ದೆಗೆ ಇಂಜಿನಿಯರಿಂಗ್ ಪದವಿ, ಎಂ.ಎಸ್ಸಿ ಆಗಿರಬೇಕು.
*ಉಪ ಮುಖ್ಯ ಇಂಜಿನಿಯರ್ (ECS/TVS) ಹುದ್ದೆಗೆ ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ B.E ಅಥವಾ B.Tech ಆಗಿರಬೇಕು.
* ಡೆಪ್ಯುಟಿ ಚೀಫ್ ಇಂಜಿನಿಯರ್ (ಸಿಗ್ನಲಿಂಗ್)ಹುದ್ದೆಗೆ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಬಿ.ಇ ಅಥವಾ ಬಿ.ಟೆಕ್ ಆಗಿರಬೇಕು.
* ಕಾರ್ಯನಿರ್ವಾಹಕ ಇಂಜಿನಿಯರ್ (ಸಿಗ್ನಲಿಂಗ್) ಹುದ್ದೆಗೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಬಿ.ಇ ಅಥವಾ ಬಿ.ಟೆಕ್ ಆಗಿರಬೇಕು.
BMRCL ಸಂಬಳ ವಿವರ:
ಮುಖ್ಯ ಇಂಜಿನಿಯರ್ (ಎಲೆಕ್ಟ್ರಿಕಲ್)- ರೂ.140000-165000/ ವೇತನ ಆಗಿರಲಿದೆ.
ಹೆಚ್ಚುವರಿ ಮುಖ್ಯ ಇಂಜಿನಿಯರ್ (ಟ್ರಾಕ್ಷನ್ ಮತ್ತು RSS)- ರೂ.125000-150000/ ವೇತನ ಆಗಿರಲಿದೆ.
ಉಪ ಮುಖ್ಯ ಇಂಜಿನಿಯರ್ (ಸಿಸ್ಟಂ ಗುತ್ತಿಗೆಗಳು)- ರೂ.110000-140000/ ವೇತನ ಆಗಿರಲಿದೆ.
ಉಪ ಮುಖ್ಯ ಎಂಜಿನಿಯರ್ (ಕಾರ್ಯಾಚರಣೆ ಸುರಕ್ಷತೆ)- ರೂ.110000-140000/ ವೇತನ ಆಗಿರಲಿದೆ.
ಉಪ ಮುಖ್ಯ ಎಂಜಿನಿಯರ್ (ECS/TVS)- ರೂ.110000-140000/ ವೇತನ ಆಗಿರಲಿದೆ.
ಉಪ ಮುಖ್ಯ ಎಂಜಿನಿಯರ್ (ಸಿಗ್ನಲಿಂಗ್)- ರೂ.110000-140000/ವೇತನ ಆಗಿರಲಿದೆ.
ಕಾರ್ಯನಿರ್ವಾಹಕ ಇಂಜಿನಿಯರ್ (ಸಿಗ್ನಲಿಂಗ್)- ರೂ.85000/ ವೇತನ ಆಗಿರಲಿದೆ.
ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಇದನ್ನು ಓದಿ: Meghana Raj:ಮತ್ತೆ ಪ್ರೀತಿಯಲ್ಲಿ ಚಿರು ಪತ್ನಿ ಮೇಘನಾ ರಾಜ್? ನಟಿ ಕೊಟ್ರು ಬಿಗ್ ಅಪ್ಡೇಟ್