NPS Pension Scheme: ಪಿಂಚಣಿದಾರರಿಗೆ ಗುಡ್ ನ್ಯೂಸ್ – ನಿಮಗಿನ್ನು ಇಲ್ಲೂ ಸಿಗಲಿದೆ ಬಂಪರ್ ಲಾಭ !!
New information about NPS Pension Scheme for pensioners
NPS Pension Scheme : ಪ್ರಸ್ತುತ ಪಿಎಫ್ಆರ್ಡಿಎ ಮೂಲಕ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಎನ್ಪಿಎಸ್ ಸೌಲಭ್ಯವನ್ನು ಒದಗಿಸಲು ಯೋಜನೆಯನ್ನು ಮಾಡಲಾಗುತ್ತಿದೆ. ಇದರಿಂದ ಪ್ರತಿಯೊಬ್ಬರೂ ಸುಲಭವಾಗಿ ಪಿಂಚಣಿ ಪ್ರಯೋಜನವನ್ನು ಪಡೆಯಬಹುದು. ಎನ್ಪಿಎಸ್ ಪಿಂಚಣಿಯನ್ನು ಜನರಿಗೆ ಸುಲಭವಾಗಿ ತಲುಪಿಸುವ ಸಲುವಾಗಿ ಅದನ್ನು ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಅದಲ್ಲದೆ ಹೊಸ ಪಿಂಚಣಿ ವ್ಯವಸ್ಥೆ (NPS Pension Scheme) ವಿತರಣೆಗಾಗಿ ಪ್ರಾಧಿಕಾರವು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಮತ್ತು ಬ್ಯಾಂಕ್ ಪ್ರತಿನಿಧಿಗಳನ್ನು ಸಂಪರ್ಕಿಸಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಅಧ್ಯಕ್ಷ ದೀಪಕ್ ಮೊಹಾಂತಿ ಹೇಳಿದ್ದಾರೆ. ಇದರಿಂದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳ ಜನರು ಸಹ ಈ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.
RRBಯಿಂದ NPSನ ಪ್ರಯೋಜನ :
ಎನ್ಪಿಎಸ್ ‘ಮಾದರಿ’ ಅಡಿಯಲ್ಲಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ ಜನರಿಗೆ ಲಾಭ ಸಿಗುವಂತಾಗಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳನ್ನು (ಆರ್ಆರ್ಬಿ) ಸೇರಿಸಲಾಗಿದೆ. ಈ ರೀತಿಯಾಗಿ, ಈಗ NPS ಅನ್ನು RRB ಯಿಂದಲೂ ತೆಗೆದುಕೊಳ್ಳಬಹುದು. ಇದಲ್ಲದೇ ಬ್ಯಾಂಕ್ ಪ್ರತಿನಿಧಿ (ಬ್ಯಾಂಕಿಂಗ್ ಕರೆಸ್ಪಾಂಡೆಂಟ್) ಮೂಲಕ ಎನ್ಪಿಎಸ್ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ.
PFRDA NPS ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ನಿರ್ವಹಿಸುತ್ತದೆ. ಅಟಲ್ ಪಿಂಚಣಿ ಯೋಜನೆಯಲ್ಲಿ, ಕೊಡುಗೆ ಮೊತ್ತದ ಆಧಾರದ ಮೇಲೆ ಪಿಂಚಣಿಯನ್ನು ನಿಗದಿಪಡಿಸಲಾಗಿದೆ. ಅದೇ ಸಮಯದಲ್ಲಿ, NPSನಲ್ಲಿ, 60 ವರ್ಷಗಳ ವಯಸ್ಸನ್ನು ಪೂರ್ಣಗೊಳಿಸಿದ ನಂತರ, ಒಟ್ಟು ಕಾರ್ಪಸ್ನ ಕನಿಷ್ಠ 40 ಪ್ರತಿಶತದೊಂದಿಗೆ ಪೆನ್ಶನ್ ಪ್ರಾಡಕ್ಟ್ ಅನ್ನು ಕಡ್ಡಾಯವಾಗಿ ಖರೀದಿಸಬೇಕಾಗುತ್ತದೆ.
ಪಿಎಫ್ಆರ್ಡಿಎ ಅಧ್ಯಕ್ಷರ ಪ್ರಕಾರ,
ಎನ್ಪಿಎಸ್ನಲ್ಲಿನ ಆದಾಯವು ಉತ್ತಮವಾಗಿದೆ ಮತ್ತು ಜನರು ದೀರ್ಘಾವಧಿಯಲ್ಲಿ ಉತ್ತಮ ಕಾರ್ಪಸ್ ಅನ್ನು ನಿರೀಕ್ಷಿಸಬಹುದು ಎಂದು ಪಿಎಫ್ಆರ್ಡಿಎ ಅಧ್ಯಕ್ಷರು ಹೇಳಿದ್ದಾರೆ.
ಇನ್ನು ಎನ್ಪಿಎಸ್ ಮಾರಾಟಕ್ಕೆ ಸಿಗುವ ಕಮಿಷನ್ ಕಡಿಮೆಯಾಗಿದೆ. ಈ ಕಾರಣದಿಂದಾಗಿ, ಏಜೆಂಟ್ಗಳು ಅಥವಾ ಪಿಒಪಿ (ಪಾಯಿಂಟ್ ಆಫ್ ಪ್ರೆಸೆನ್ಸ್) ಅಂದರೆ ಬ್ಯಾಂಕ್ಗಳು ಎನ್ಪಿಎಸ್ ಪ್ರಾಡಕ್ಟ್ ಮಾರಾಟ ಮಾಡಲು ಹೆಚ್ಚು ಆಕರ್ಷಿತರಾಗದಿರಬಹುದು. ಆದರೆ ಗ್ರಾಹಕರಿಗೆ ಲಾಭವಾಗುವಂತೆ ಅದನ್ನು ಕನಿಷ್ಠ ವೆಚ್ಚದ ಉತ್ಪನ್ನವಾಗಿ ಇಡುವುದು ಸರ್ಕಾರದ ಗುರಿಯಾಗಿದೆ.
ಇದನ್ನು ಓದಿ: Nitin Gadkari: ದೇಶದ ಎಲ್ಲಾ ವಾಹನ ಸವಾರರಿಗೆ ಸಿಹಿ ಸುದ್ದಿ- ಕೇಂದ್ರದಿಂದ ಬಂತು ದೀಪಾವಳಿ ಗಿಫ್ಟ್ !