Home Business SBI festival offer: ಈ ಬ್ಯಾಂಕ್ ನಲ್ಲಿ ಲೋನ್ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್...

SBI festival offer: ಈ ಬ್ಯಾಂಕ್ ನಲ್ಲಿ ಲೋನ್ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್ | ಹಬ್ಬದ ಪ್ರಯುಕ್ತ ಸಿಗ್ತಿದೆ ಸಾವಿರ-ಸಾವಿರ ಉಳಿತಾಯದ ಬಿಗ್ ಆಪರ್ !!

SBI festival offer

Hindu neighbor gifts plot of land

Hindu neighbour gifts land to Muslim journalist

SBI festival offer: ಭಾರತದ ಆರ್ಥಿಕತೆಗೆ ಬಹಳ ಮುಖ್ಯವಾದ ಬ್ಯಾಂಕ್‌ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡ ಒಂದಾಗಿದೆ. ಎಸ್‌ಬಿಐ ಬ್ಯಾಂಕ್ ಅನೇಕ ಹಣಕಾಸು ಸೇವೆಗಳನ್ನು ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಒದಗಿಸುತ್ತಿದ್ದು, ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿದೆ. ಇದೀಗ ಕಾರು ಖರೀದಿಸಬೇಕು ಎನ್ನುವವರಿಗೆ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹಬ್ಬದ ಸಮಯದಲ್ಲಿ ವಿಶೇಷ ಆಫರ್ (SBI festival offer)ನೀಡುತ್ತಿದೆ. ಇದರ ಪ್ರಕಾರ ಕಾರ್ ಲೋನ್ ಪಡೆಯುವವರು ಇನ್ನು ಮುಂದೆ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಹೌದು, ಎಸ್‌ಬಿಐಯ ಈ ನಿರ್ಧಾರದಿಂದ ಕಾರು ಸಾಲ ಪಡೆಯುವ ಗ್ರಾಹಕರು ಹಲವಾರು ಸಾವಿರ ರೂಪಾಯಿಗಳನ್ನು ಉಳಿಸುವುದು ಸಾಧ್ಯವಾಗುತ್ತದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಎಸ್‌ಬಿಐ ಮಾಹಿತಿ ನೀಡಿದೆ.

SBI festival offer

ಬ್ಯಾಂಕ್ ಮಾಡಿರುವ ಟ್ವೀಟ್ ಪ್ರಕಾರ, ಈ ಬಾರಿ ನಿಮ್ಮ ಹಬ್ಬದ ಖುಷಿಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಬ್ಯಾಂಕ್ ತನ್ನ ಟ್ವೀಟ್ ನಲ್ಲಿ ಹೇಳಿದೆ. ಅಲ್ಲದೆ ಎಸ್‌ಬಿಐ ಜೊತೆಗೆ ನಿಮ್ಮ ಕನಸಿನ ಕಾರನ್ನು ಖರೀದಿಸಬಹುದು ಎಂದು ಹೇಳಿಕೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಪ್ರಕಾರ, ಹಬ್ಬದ ಕೊಡುಗೆಯ ಅಡಿಯಲ್ಲಿ ಕಾರ್ ಲೋನ್ ಗ್ರಾಹಕರಿಂದ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುವುದಿಲ್ಲ. SBI ವೆಬ್‌ಸೈಟ್ ಪ್ರಕಾರ, ಈ ಕೊಡುಗೆಯು ಜನವರಿ 31, 2024 ರವರೆಗೆ ಮಾನ್ಯವಾಗಿರುತ್ತದೆ.

ಕಾರ್ ಲೋನ್‌ಗೆ ಯಾವ ದಾಖಲೆಗಳು :
ಕಳೆದ 6 ತಿಂಗಳ ಬ್ಯಾಂಕ್ ಖಾತೆ ವಿವರಗಳು.
2 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು.
ನಿವಾಸ ಪ್ರಮಾಣಪತ್ರ.
ಸ್ಯಾಲರಿ ಸ್ಲಿಪ್‌ನೊಂದಿಗೆ ಫಾರ್ಮ್ 16.
ಕಳೆದ 2 ವರ್ಷಗಳ ಐಟಿಆರ್ ರಿಟರ್ನ್.
ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಪತ್ರ, ಡ್ರೈವಿಂಗ್ ಲೈಸೆನ್ಸ್ ಬೇಕಾಗುತ್ತದೆ.
ಒಂದು ವರ್ಷದ MCLR ಅನ್ನು SBI ಆಟೋ ಲೋನ್ ಮೇಲೆ ನೀಡುತ್ತದೆ. ಸದ್ಯ ಇದು ಶೇ.8.55ರಷ್ಟಿದೆ. ಬ್ಯಾಂಕ್ ಯಾವುದೇ ಗ್ರಾಹಕರಿಗೆ ಕಾರು ಸಾಲವನ್ನು ನೀಡಿದರೆ, ಅದು ಕನಿಷ್ಠ ಶೇಕಡಾ 8.55 ಬಡ್ಡಿ ದರವನ್ನು ವಿಧಿಸುತ್ತದೆ. ಪ್ರಸ್ತುತ ಎಸ್‌ಬಿಐ ಕಾರು ಸಾಲವು ಶೇಕಡಾ 8.80 ರಿಂದ 9.70 ರಷ್ಟಿದೆ. SBI ಸಾಲಗಳ ಮೇಲಿನ ಬಡ್ಡಿದರಗಳನ್ನು ಗ್ರಾಹಕರ CIBIL ಸ್ಕೋರ್‌ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಇದನ್ನೂ ಓದಿ:ರಸ್ತೆಯಲ್ಲಿ ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕ – ಪಕ್ಕದಲ್ಲೇ ಇದ್ದ ವೃದ್ಧರು ಮಾಡಿದ್ದೇನು ಗೊತ್ತಾ?!