ರಸ್ತೆಯಲ್ಲಿ ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕ – ಪಕ್ಕದಲ್ಲೇ ಇದ್ದ ವೃದ್ಧರು ಮಾಡಿದ್ದೇನು ಗೊತ್ತಾ?!
4-Year-Old Child Electrocuted On Busy Road In varanasi
Varanasi: ಕೆಲವೊಂದು ಸಮಯ ಪವಾಡ ಎಂಬಂತೆ ಅಪಾಯದಲ್ಲಿ ಇರುವವರ ಪಾಲಿಗೆ ದೇವರಾಗಿ ಯಾರಾದರೂ ಬಂದು ಕಾಪಾಡುತ್ತಾರೆ. ಅಂತೆಯೇ ವಾರಾಣಸಿಯ (Varanasi) ಜನನಿಬಿಡ ರಸ್ತೆಯಲ್ಲಿ ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನ್ನು ವೃದ್ಧರು ರಕ್ಷಿಸಿದ ಮಾಹಿತಿ ಬೆಳಕಿಗೆ ಬಂದಿದೆ.
ಹೌದು, ಸದ್ಯ ಬನಾರಸ್ ನಗರದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದ್ದು, ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿ ಚರಂಡಿಗಳೂ ತುಂಬಿ ಹರಿಯುತ್ತಿವೆ. ಈ ಚರಂಡಿಗಳು ತುಂಬಿ ಹರಿಯುತ್ತಿದ್ದರಿಂದ 4 ವರ್ಷದ ಮಗುವೊಂದು ವಿದ್ಯುತ್ ಸ್ಪರ್ಶಿಸಿದ್ದು, ವೃದ್ಧರೊಬ್ಬರು ಬಾಲಕನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ
ಸ್ಥಳೀಯ ನಿವಾಸಿ ಜಿತೇಂದ್ರ ಕುಮಾರ್ ಮಾಹಿತಿ ಪ್ರಕಾರ, ನಾಲ್ಕು ವರ್ಷದ ಮಗು ಕಾರ್ತಿಕ್ ಮಳೆ ನಿಂತ ನಂತರ ನೀರಿನಲ್ಲಿ ಆಟವಾಡುತ್ತಿದ್ದ. ಮನೆಯ ಸಮೀಪದಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ನೀರಿನ ಮೂಲಕ ಪ್ರವಹಿಸಿತ್ತು. ಕಾರ್ತಿಕ್ಗೆ ವಿದ್ಯುತ್ ತಗುಲಿದ ನಂತರ ಕಿರುಚುತ್ತಿರುವಾಗ , ಆ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ಹಿರಿಯರಲ್ಲಿ ಒಬ್ಬರು ನೆಲದ ಮೇಲೆ ಬಿದ್ದು ಅಳುತ್ತಿದ್ದ ಬಾಲಕನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ ಆಗ ಅವರಿಗೆ ವಿದ್ಯುತ್ ತಗುಲಿದೆ. ಬಳಿಕ ಮರದ ಕೋಲಿನ ಸಹಾಯದಿಂದ ಬಾಲಕನನ್ನು ಕಾಪಾಡಿದ್ದಾರೆ.
ಮೂಲತಃ ಬನಾರಸ್ ನ ಚೆಟ್‌ಗಂಜ್ ಪೊಲೀಸ್ ಠಾಣೆಯ ಹಬೀಬ್‌ಪುರ ಪ್ರದೇಶದ ಜಂಜಿರಾ ಶಾ ಬಾಬಾ ಸಮಾಧಿ ಬಳಿ ಈ ಘಟನೆ ನಡೆದಿದೆ. ಮಗುವನ್ನು ರಕ್ಷಿಸಿದ ನಂತರ, ಅವರು ಬಾಲಕನನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಿ, ಮೆಸ್ಕಾಂ ಕಚೇರಿ ಕರೆ ಮಾಡಿ ವಿದ್ಯುತ್ ಸರಬರಾಜನ್ನು ನಿಲ್ಲಿಸಿದ್ದಾರೆ. ಸದ್ಯ ವೃದ್ಧರು ಕಾಪಾಡಿದ ಈ ಸಂಪೂರ್ಣ ಘಟನೆಯು ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ, ಈ ಹಿರಿಯರ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.
https://x.com/liveankitknp/status/1706680496015790545?s=20
ಇದನ್ನೂ ಓದಿ: ಮುಸ್ಲಿಂ ಹುಡುಗಿಯನ್ನೇ ‘ಮಹಾಲಕ್ಷ್ಮಿ’ ಮಾಡಿದ ಹನುಮಂತ – ಆಸಿಯ ಬೇಗಂಳ ಅವತಾರಕ್ಕೆ ಫ್ಯಾನ್ಸ್ ಫಿದಾ !!