Viral video: ಕಾವಲಯ್ಯ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಗೊರಿಲ್ಲಾ- ಇದು ಸೊಂಟ ಬಳುಕಿಸೋದನ್ನು ನೋಡಿದ್ರೆ ನಟಿಯರೂ ಏನಿಲ್ಲಾ ಬಿಡಿ !!

gorilla stepped to the song "Kavalayya".

Share the Article

Viral video: ಕಾಲಿವುಡ್​​ ಸಿನಿಮಾ ‘ಜೈಲರ್’ (Jailer) ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯ ನಟಿ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಅದರಲ್ಲೂ ಸಿನಿಮಾಗಿಂತಲೂ ಮೊದಲು ಬಂದ ಈ ಸಿನಿಮಾದ ಹಾಡು ಭರ್ಜರಿ ಸದ್ದು ಮಾಡಿತ್ತು‌. ಎಲ್ಲೆಡೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಇದೀಗ ಗೊರಿಲಾ ಕಾವಲಯ್ಯ ಹಾಡಿಗೆ ಸಖತ್ ಸ್ಟೆಪ್ ಹಾಕಿದೆ (Viral video). ಇದು ಸೊಂಟ ಬಳುಕಿಸೋದನ್ನು ನೋಡಿದ್ರೆ ನಟಿಯರೂ ಏನಿಲ್ಲಾ ಬಿಡಿ !!

ಹೌದು, ಎಲ್ಲರನ್ನೂ ನಾಚಿಸುವಂತೆ ಗೋರಿಲ್ಲಾ ಭರ್ಜರಿ ಸ್ಟೆಪ್​ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಸೊಂಟ ಬಳುಕಿಸಿ ಕುಣಿದ ಈ ಡ್ಯಾನ್ಸ್​ ನೋಡಿದ ನೆಟ್ಟಿಗರು ಗೋರಿಲ್ಲಾಗೆ ಫಿದಾ ಆಗಿ ಬಿಟ್ಟಿದ್ದಾರೆ. ಇದರ ಮುಂದೆ ಯಾವ ನಟಿಯರೂ ಲೆಕ್ಕಕ್ಕೇ ಇಲ್ಲ ಎನ್ನುತ್ತಿದ್ದಾರೆ. ಸೀರೆಯುಟ್ಟ ಗೋರಿಲ್ಲಾ ಡ್ರೆಸ್‌ಗೂ ನೆಟ್ಟಿಗರು ಫಿದಾ ಆಗಿದ್ದಾರೆ.

ಅಂದಹಾಗೆ, ಕಳೆದ ಆಗಸ್ಟ್​ 9ರಂದು ಬಿಡುಗಡೆಯಾಗಿದ್ದ ಜೈಲರ್ ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳಲ್ಲಿಯೇ ಭರ್ಜರಿ ಕಲೆಕ್ಷನ್​ ಮಾಡಿತ್ತು. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿಯೂ ಇದು ಇಂದಿಗೂ ಸಕತ್​ ಸದ್ದು ಮಾಡುತ್ತಿದೆ. ಆರಂಭದಲ್ಲಿಯೇ ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್‌ ಬುಕಿಂಗ್‌ ಮಾಡಲಾಗಿತ್ತು. ನೆಲ್ಸನ್‌ ದಿಲೀಪ್‌ಕುಮಾರ್‌ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್‌ ನಿವೃತ್ತ ಪೊಲೀಸ್‌ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.

ಜೈಲರ್​ ಚಿತ್ರ ಬಿಡುಗಡೆಯಾಗುವ ಮುನ್ನವೇ ಹವಾ ಸೃಷ್ಟಿಸಿದ್ದ ಕಾವಲಾಯ್ಯ ಹಾಡು ಸಿನಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ. ಜುಲೈ 6ರಂದು ಈ ಹಾಡು ಬಿಡುಗಡೆಯಾಗಿತ್ತು. ಆನ್‌ಲೈನ್‌ನಲ್ಲಿ ಹೊಸ ಪುಳಕ ಉಂಟು ಮಾಡಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ದಿನವೇ 80 ದಶಲಕ್ಷ ವೀಕ್ಷಣೆ ಗಳಿಸಿರುವುದು ಇತಿಹಾಸ.

ಈ ಹಾಡಿಗೆ ಅರುಣರಾಜ ಕಾಮರಾಜ್ ಸಾಹಿತ್ಯವಿದೆ. ಅನಿರುದ್ಧ್ ಮ್ಯೂಸಿಕ್, ಶಿಲ್ಪಾ ರಾವ್ ವಾಯ್ಸ್‌ನಲ್ಲಿ ಸಾಂಗ್ ಕೇಳುಗರಿಗೆ ಆಪ್ತವಾಗಿದೆ. ತಮನ್ನಾ ಭಾಟಿಯಾ ಅವರ ಡ್ಯಾನ್ಸ್​ ಅಂತೂ ಮೋಡಿ ಮಾಡುತ್ತಿದೆ. ಹಲವರಿಗೆ ಈ ಹಾಡು, ನೃತ್ಯ ಎಲ್ಲವೂ ಹುಚ್ಚೇ ಹಿಡಿಸಿದೆ. ಈಗಲೂ ಈ ಹಾಡಿನ ಹವಾ ನಿಂತಿಲ್ಲ. ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಲೇ ಸಾಗಿದೆ.

ಇದನ್ನು ಓದಿ: Belagavi: ಯೋಧನಿಗೆ ಗುಂಡು ಹಾರಿಸಿದ ಮತ್ತೊಬ್ಬ ಯೋಧ- ಕಾರಣ ಕೇಳಿದ್ರೆ ನೀವೇ ಶಾಕ್!!

 

Leave A Reply