Smartphone Tricks: ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ ?! ಜಸ್ಟ್ ಹೀಗೆ ಮಾಡಿ, ದಿನವಿಡೀ ಎಷ್ಟು ಬೇಕಾದರೂ ನೆಟ್ ಬಳಸಿ

Latest news technology news Smartphone Tricks to save mobile data details

Smartphone Tricks: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ (Digital)ಮಯವಾಗಿಬಿಟ್ಟಿದೆ. ಅದರಲ್ಲಿಯೂ ಮೊಬೈಲ್ ಬಳಕೆ ಮಾಡದೇ ಇರುವವರೆ ವಿರಳ. ಅದರಲ್ಲಿಯೂ ಹೆಚ್ಚು ಬಾರಿ ಮೊಬೈಲ್ ಬಳಕೆ ಮಾಡುವಾಗ ಇಂಟರ್ನೆಟ್(Internet)ಬಳಸುವಾಗ ಮೊಬೈಲ್(Mobile)ಡೇಟಾ ಖಾಲಿ ಆಗಿ ಬಿಡುತ್ತೆ. ಆದ್ರೆ, ನೀವು ಸಿಂಪಲ್ ಟ್ರಿಕ್ಸ್(Smartphone Tricks) ಬಳಸಿ ನೆಟ್ ಸ್ಪೀಡ್ ಆಗುವಂತೆ ಮಾಡಬಹುದು.

ಹಾಗಿದ್ರೆ, ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಹೆಚ್ಚಿನ ಡೇಟಾ ಪ್ರಯೋಜನ ಪಡೆಯಲು ಮತ್ತು ಡೇಟಾ ಬೇಗ ಖಾಲಿ ಆಗದ ರೀತಿ ಬಳಕೆ ಮಾಡೋದು ಹೇಗೆ ಅಂತೀರಾ? ನೀವು ಸ್ಮಾರ್ಟ್ ಫೋನ್ ನಲ್ಲಿ (Smartphone Data Settings)ಸಣ್ಣ ಟ್ರಿಕ್ಸ್ ಫಾಲೋ ಮಾಡಿದರೆ ಸಾಕು. ಸ್ಮಾರ್ಟ್ಫೋನ್ ಬಳಕೆದಾರರು ಸೆಟ್ಟಿಂಗ್ನಲ್ಲಿ ಡೇಟಾ ಮಿತಿಯನ್ನು ಆಯ್ಕೆ ಮಾಡುವುದು ಒಳ್ಳೆಯದು. ಇದಕ್ಕಾಗಿ, ಡೇಟಾ ಬಳಕೆಯ ಆಯ್ಕೆಯನ್ನು ಕ್ಲಿಕ್ ಮಾಡಿ, ಇಲ್ಲಿ ಡೇಟಾ ಮಿತಿ ಮತ್ತು ಬಿಲ್ಲಿಂಗ್ ಸೈಕಲ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ 1GB ಮಾಡಿದರೆ, 1ಜಿಬಿಯಷ್ಟು ಡೇಟಾ ಬಳಕೆ ಮಾಡಿದ ನಂತರ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ವರ್ಕ್ ಆಗುವುದಿಲ್ಲ. ಈ ರೀತಿಯು ನೀವು ದೈನಂದಿನ ಡೇಟಾವನ್ನು ಉಳಿಸಬಹುದು.

ಆಂಡ್ರಾಯ್ಡ್ ಫೋನ್‌ಗಳಲ್ಲಿ ಡೇಟಾ ಉಳಿತಾಯ ಮೋಡ್ ಎಂಬ ವೈಶಿಷ್ಟ್ಯ ವಿರುತ್ತದೆ. ಈ ಆಯ್ಕೆಯನ್ನು ಹೊಂದಿರುವವರು ಅದನ್ನು ಸಕ್ರಿಯಗೊಳಿಸಿದರೆ ಡೇಟಾವನ್ನು ಉಳಿಸಬಹುದು. ನಾವು ಬಳಕೆ ಮಾಡುವ ಅಪ್ಲಿಕೇಷನ್ ಗಳಲ್ಲಿ ವಾಟ್ಸಪ್, ಫೇಸ್ಬುಕ್ ಗಳ ಫೋಟೋ, ವಿಡಿಯೋಗಳನ್ನು ಅಟೋಮೆಟಿಕ್ ಡೌನ್ಲೋಡ್ ಆಯ್ಕೆಯಲ್ಲಿದ್ದರೆ ಅದನ್ನು ಆಫ್ ಮಾಡಿ. ಈ ಆಯ್ಕೆ ಆಫ್ ಮಾಡದೇ ಹೋದರೆ ಡೇಟಾವನ್ನು ಬೇಗನೆ ಖಾಲಿ ಆಗಿಬಿಡುತ್ತೆ. ಹೀಗಾಗಿ, ವಾಟ್ಸ್ಆ್ಯಪ್ ಸೆಟ್ಟಿಂಗ್‌ಗಳಿಗೆ ಹೋಗಿ ಸ್ವಯಂಚಾಲಿತ ಡೌನ್‌ಲೋಡ್ ಅನ್ನು ಆಫ್ ಮಾಡುವ ಮೂಲಕ ಡೇಟಾವನ್ನು ಉಳಿಸಬಹುದು.

ಗೂಗಲ್ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುವುದರಿಂದ ಕೂಡ ಡೇಟಾ ಬೇಗನೆ ಖಾಲಿ ಆಗಿಬಿಡುತ್ತದೆ. ಈ ಆ್ಯಪ್ಗಳನ್ನು ಆಫ್ ಲೈನ್ ಮೋಡ್ನಲ್ಲಿ ಬಳಕೆ ಮಾಡುವ ಮೂಲಕ ಡೇಟಾವನ್ನು ಉಳಿಸಬಹುದು. ಡೀಫಾಲ್ಟ್ ಸೆಟ್ಟಿಂಗ್‌ಗಳಿಂದಾಗಿ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತಿರುತ್ತದೆ. ನಾವು ಕೆಲ ಆ್ಯಪ್ ಅನ್ನು ಡೌನ್ಲೋಡ್ ಮಾಡಿರುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ ಅದು ಬ್ಯಾಕ್ರೌಂಡ್ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಹೀಗಾಗಿ, ಡೇಟಾ ಖಾಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.ಇಲ್ಲಿ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಅಲ್ಲಿ ಆಟೋ ಅಪ್ಡೇಟ್ ಆನ್ ಆಗಿದ್ದರೆ ಅದನ್ನು ಮೊದಲು ಆಫ್ ಮಾಡಿ. ಡೌನ್‌ಲೋಡ್ ಮಾಡಿದ ಎಲ್ಲಾ ಅಪ್ಲಿಕೇಶನ್‌ಗಳಿಗೆ ಆಟೋ ಅಪ್ಡೇಟ್ ಆಪ್ಷನ್ ಅನ್ನು ಸೆಲೆಕ್ಟ್ ಮಾಡಬಹುದು. ಆದರೆ ಹೆಚ್ಚು ಡೇಟಾ ಖಾಲಿ ಆಗುತ್ತಿದೆ ಎಂದರೆ ಆಫ್ ಮಾಡಿದರೆ ಉತ್ತಮ.

 

ಇದನ್ನು ಓದಿ: West Bengal: ಈ ಪುಟ್ಟ ಪೋರನ ಸಮಯ ಪ್ರಜ್ಞೆಯಿಂದ ಉಳಿಯಿತು ನೂರಾರು ಜನರ ಜೀವ! ಅಷ್ಟಕ್ಕೂ ಈತ ಮಾಡಿದ್ದೇನು ಗೊತ್ತೇ?

Leave A Reply

Your email address will not be published.