Assault Case: ಯುವತಿ ಸ್ನಾನ ಮಾಡುವುದನ್ನು ಕದ್ದುಮುಚ್ಚಿ ಕಿಟಕಿಯಿಂದ ರೆಕಾರ್ಡ್‌ ಮಾಡಿದ ಯುವಕ! ನಂತರ ಏನಾಯ್ತು?

assault case young women claims man taking her video while she is taking bath

ಯುವತಿಯೋರ್ವಳು ಸ್ನಾನ ಮಾಡುತ್ತಿದ್ದಾಗ ಯುವಕನೋರ್ವ ವೀಡಿಯೋ ರೆಕಾರ್ಡ್‌ ಮಾಡಿರುವ ಘಟನೆಯೊಂದು ರಾಮನಗರದ ಕನಕಪುರದ ಬಸವೇಶ್ವರ ನಗರದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಯುವತಿ ಮನೆಯವರು ಇದೀಗ ಯುವಕನ ಮೇಲೆ ದೂರು ನೀಡಿದ್ದಾರೆ.

 

ನಿತಿನ್‌ (25) ಎಂಬಾತನೇ ಈ ದುಷ್ಕೃತ್ಯ ಎಸಗಿದ ಆರೋಪಿ.

ನಳಿನಿ ಎಂಬ ಯುವತಿ ಬೆಂಗಳೂರಿನಲ್ಲಿ ವಾಸವಿದ್ದು, ತನ್ನ ತಾಯಿ ಮನೆಗೆ ಬಂದಿದ್ದಳು. ಮಧ್ಯಾಹ್ನ ಸ್ನಾನಕ್ಕೆಂದು ಹೋಗಿದ್ದಾಳೆ. ಸ್ನಾನ ಮಾಡುವಾಗ ಬಾತ್‌ರೂಮಿನ ಕಿಟಕಿ ಇದ್ದಕ್ಕಿದ್ದಂತೆ ತೆರೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಯುವತಿ ಕಿಟಕಿ ಮೂಲಕ ನೋಡಿದಾಗ, ನಿತಿನ್‌ ಮೊಬೈಲ್‌ ಹಿಡಿದು ರೆಕಾರ್ಡಿಂಗ್‌ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ನಳಿನಿ ಭಯದಿಂದ ಚೀರಿದ್ದು, ಚೀರಾಟ ಕೇಳಿ ಓಡಿ ಬಂದ ಮನೆಯ ಸದಸ್ಯರಿಗೆ ವಿಷಯ ಹೇಳಿದ್ದಾಳೆ.

ಇತ್ತ ಈ ಕೂಗಾಟದಿಂದ ಓಡಿ ಹೋಗುತ್ತಿದ್ದ ಯುವಕನನ್ನು ಯುವತಿ ಪೋಷಕರು ಹಿಡಿದು ಥಳಿದಿದ್ದಾರೆ. ನಿತಿನ್‌ ವಿರುದ್ಧ ಯುವತಿ ಕುಟುಂಬದವರು ದೂರು ನೀಡಿದ್ದು, ಕನಕಪುರ ಪೊಲೀಸರು ನಿತಿನ್‌ನನ್ನು ಬಂಧಿಸಿದ್ದು, ಕನಕಪರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave A Reply

Your email address will not be published.