Chandrayaan-3 MahaQuiz: ಇಸ್ರೋ ಚಂದ್ರಯಾನದ ಮೆಗಾ ಕ್ವಿಜ್ ನಲ್ಲಿ ಪಾಲ್ಗೊಳ್ಳಿ – ನೀವೂ ಲಕ್ಷ ಲಕ್ಷ ಬಹುಮಾನ ಗೆಲ್ಲಿ

Latest news Chandrayaan-3 MahaQuiz organised by ISRO participate in mygov portal and win cash prize

Chandrayaan-3 MahaQuiz: ಜುಲೈ.14ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ಅದರಲ್ಲಿ ಚಂದ್ರನ ಅಧ್ಯಯನ ನಡೆಸಲು ಬೇಕಾದ ವಿವಿಧ ಉಪಕರಣಗಳನ್ನು ಕಳುಹಿಸಲಾಗಿದೆ ಎಂಬುದು ಗೊತ್ತಿರುವ ಸಂಗತಿ.

ಇಸ್ರೋ ಕಳುಹಿಸಿದ ಚಂದ್ರಯಾನ-3 ನೌಕೆ ಆಗಸ್ಟ್ 23ರಂದು ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಇಳಿದು ಭಾರತದ ಹಿರಿಮೆ ಗರಿಮೆಯನ್ನು ಹೆಚ್ಚಿಸಿ ಹೊಸ ದಾಖಲೆ ನಿರ್ಮಿಸಿದೆ. ಇದೀಗ, ಭಾರತದ ಮೂರನೇ ಚಂದ್ರಯಾನದ ಯೋಜನೆ ಬಗ್ಗೆ ನಿಮಗೆ ಎಷ್ಟು ಮಾಹಿತಿ ಗೊತ್ತಿದೆ? ಎಂಬುದನ್ನು ಪತ್ತೆ ಹಚ್ಚಲು ಇಸ್ರೋ ಹೊಸ ಮಾಸ್ಟರ್ ಪ್ಲಾನ್ ಮಾಡಿದೆ.

ನಿಮ್ಮ ಬುದ್ದಿವತಿಕೆಗೆ ಸವಾಲ್ ಎಸೆಯುವ ಜೊತೆಗೆ ಬೊಂಬಾಟ್ ಬಹುಮಾನ ಗೆಲ್ಲುವ ಸುವರ್ಣ ಅವಕಾಶ ಇಲ್ಲಿದೆ ನೋಡಿ!! ಅದೇನು ಅಂತೀರಾ??ಇಸ್ರೋ ನಡೆಸುವ ಕ್ವಿಜ್ನಲ್ಲಿ ಭಾಗಿಯಾಗಿ ಬಹುಮಾನ ಕೂಡ ಪಡೆಯಬಹುದು. ಇಸ್ರೋ ಮತ್ತು ಮೈ ಗವ್ ವೆಬ್ಸೈಟ್ ಸಹಯೋಗದಲ್ಲಿ ಚಂದ್ರಯಾನ ರಸಪ್ರಶ್ನೆ(Chandrayaan-3 MahaQuiz) ನಡೆಸಲಾಗುತ್ತಿದೆ. 300ಕ್ಕೂ ಹೆಚ್ಚು ಮಂದಿ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಯಾರು ಈ ಕ್ವಿಜ್ನಲ್ಲಿ ಪಾಲ್ಗೊಳ್ಳಬಹುದು, ಎಷ್ಟೆಷ್ಟು ಮೊತ್ತದ ಬಹುಮಾನಗಳ ಆಫರ್ ಇದೆ ಎನ್ನುವ ವಿವರ ಈ ಸುದ್ದಿಯಲ್ಲಿದೆ.

ಈ ಚಂದ್ರಯಾನದ ಯಶಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ಇದರ ಹಿಂದಿರುವ ವ್ಯಕ್ತಿಗಳು, ಈ ಯೋಜನೆಯ ವಿಶೇಷತೆಗಳೇನು ಎಂಬೆಲ್ಲ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜ್ಞಾನ ಪರೀಕ್ಷೆ ಮಾಡಲು ಇಸ್ರೋ ಕ್ವಿಜ್ ಕಾರ್ಯಕ್ರಮ (Chandrayaan-3 MahaQuiz) ನಡೆಸಲಿದೆ. ಸೆಪ್ಟೆಂಬರ್ 1ರಿಂದಲೇ ಇಸ್ರೋ ಈ ಕ್ವಿಜ್ ನಡೆಸುತ್ತಿದ್ದು, ಇಲ್ಲಿಯವರೆಗೆ 16 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ.

ಬಹುಮಾನದ ವಿವರ ಹೀಗಿದೆ:
ಮೊದಲ ಬಹುಮಾನ: 1 ಲಕ್ಷ ರೂ
ಎರಡನೇ ಬಹುಮಾನ: 75,000 ರೂ
ಮೂರನೇ ಬಹುಮಾನ: 50,000 ರೂ
100 ಮಂದಿಗೆ ಸಮಾಧಾನಕರ ಬಹುಮಾನ: 2,000 ರೂ
200 ಮಂದಿಗೆ ಸಮಾಧಾನಕರ ಬಹುಮಾನ: 1,000 ರೂ

ಸರ್ಕಾರದ ಮೈ ಗವ್ ಡಾಟ್ ಇನ್ ವೆಬ್ಸೈಟ್ನಲ್ಲಿ (www.mygov.in) ಈ ಕ್ವಿಜ್ಗಾಗಿ ಮಿನಿ ಪೋರ್ಟಲ್ ಅನ್ನು (isroquiz.mygov.in) ರಚಿಸಲಾಗಿದ್ದು, ಇದನ್ನು ಇಸ್ರೋ ನಿರ್ವಹಣೆ ಮಾಡುತ್ತಿದೆ. ಇದರಲ್ಲಿ ಚಂದ್ರಯಾನದ ರಸಪ್ರಶ್ನೆಗಳನ್ನು ರೂಪಿಸಲಾಗಿದ್ದು, ಈ ಕ್ವಿಜ್ನಲ್ಲಿ ಯಾವುದಾದರೂ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 300 ಸೆಕೆಂಡುಗಳ ಕಾಲಾವಕಾಶ ಇರಲಿದ್ದು, 300ಕ್ಕೂ ಹೆಚ್ಚು ಮಂದಿಗೆ ಬಹುಮಾನ ನೀಡಲಾಗುತ್ತದೆ. ಹಾಗಿದ್ರೆ, ಮಿಸ್ ಮಾಡದೇ ನೀವು ಕೂಡ ಭಾಗಿಯಾಗಿ ಬಂಪರ್ ಬಹುಮಾನ ನಿಮ್ಮದಾಗಿಸಿಕೊಳ್ಳಿ.

ಈ ಕ್ವಿಜ್ ನಲ್ಲಿ ಭಾಗಿಯಾಗುವುದು ಹೇಗೆ?
# ಭಾರತದ ಯಾವುದೇ ನಾಗರಿಕರು ಈ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಬಹುದು.
# ಮೈ ಗವ್ ಡಾಟ್ ಇನ್ ವೆಬ್ಸೈಟ್ನ ಈ ಲಿಂಕ್ಗೆ isroquiz.mygov.in ಭೇಟಿ ನೀಡಿ.
# ನಂತರ ಲಾಗಿನ್ ಆಗಿ, ಎಲ್ಲಾ ವಿವರವನ್ನು ಭರ್ತಿ ಮಾಡಿ ಪ್ರೊಫೈಲ್ ಭರ್ತಿ ಮಾಡಬೇಕು.
# ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ನೀಡಬೇಕು.
# ಒಬ್ಬ ವ್ಯಕ್ತಿ ಒಂದು ಪ್ರೊಫೈಲ್ ಮಾತ್ರ ರಚಿಸಲು ಅವಕಾಶ ಕಲ್ಪಿಸಲಾಗಿದೆ.
# ಒಟಿಪಿ ಎಲ್ಲವನ್ನೂ ಕೊಟ್ಟು ಸಬ್ಮಿಟ್ ಬಟನ್ ಕ್ಲಿಕ್ ಆದ ಕೂಡಲೇ ಕ್ವಿಜ್ ಶುರುವಾಗುತ್ತದೆ.
# 300 ಸೆಕೆಂಡ್ ಕಾಲಾವಕಾಶದಲ್ಲಿ 10 ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ.

 

ಇದನ್ನು ಓದಿ: Ayushman Card: ಆಯುಷ್ಮಾನ್ ಕಾರ್ಡ್ ಇದ್ರೆ ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ ಉಚಿತ – ಕಾರ್ಡ್ ಪಡೆಯೋದು ಹೇಗೆ ಗೊತ್ತಾ ?!

Leave A Reply

Your email address will not be published.