Cobra bite: ಉರಗತಜ್ಞನಿಗೇ ಕಚ್ಚಿದ ಕಾಳಿಂಗಸರ್ಪ! ಬೈಕ್‌ನಲ್ಲೇ ಹೋಗುವಾಗ ನಡೆಯಿತು ಭೀಕರ ಘಟನೆ, ಸ್ಥಳದಲ್ಲೇ ಸಾವು!! ವೀಡಿಯೋ ವೈರಲ್‌

Madhya Pradesh news Man Dies of cobra Bite on Moving Bike viral video

Share the Article

Cobra bite : ಉರಗ ತಜ್ಞನೋರ್ವ ತಾನು ಹಿಡಿದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲೆಂದು ಬೈಕಿನಲ್ಲಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅಚಾನಕ್‌ ಆಗಿ ಅದು ಕಚ್ಚಿದ್ದು, ಪರಿಣಾಮ ಉರಗತಜ್ಞ ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹಾವು ಕಚ್ಚಿದ (Cobra bite ) ಕಾರಣ ಉರಗತಜ್ಞ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಇಂದೋರ್‌ ಜಿಲ್ಲೆಯಲ್ಲಿ ನಡೆದಿದೆ. ತನ್ನ ಸ್ನೇಹಿತನ ಜೊತೆ ಕಾಳಿಂಗ ಸರ್ಪವನ್ನು ಕೈನಲ್ಲಿ ಹಿಡಿದುಕೊಂಡು ಬೈಕಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಹಾವು ಮನೀಶ್‌ಗೆ ಕಚ್ಚಿದೆ.

ಇದರಿಂದ ಗಾಬರಿಗೊಂಡ ಸ್ನೇಹಿತ ಬೈಕ್‌ ನಿಲ್ಲಿಸಿದ್ದು, ಅಷ್ಟರೊಳಗೆ ವಿಷ ಏರಿದ್ದ ಪರಿಣಾಮ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರೊಳಗೆ ಆತ ಮೃತಪಟ್ಟಿದ್ದ ಎನ್ನಲಾಗಿದೆ. ಈ ಭಯಾಬಕ ವೀಡಿಯೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನ ವೀಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮ ಬೈದಳೆಂದು ಸಿಟ್ಟು ಮಾಡಿಕೊಂಡ 10 ವರ್ಷದ ಪೋರ ಕಾರು ಡ್ರೈವ್‌ ಮಾಡಿಕೊಂಡು ಹೋದ! ಹೋದದ್ದೆಲ್ಲಿಗೆ ಗೊತ್ತೇ? ಪೊಲೀಸರಿಗೇ ಶಾಕ್‌ ಕೊಟ್ಟ ಬಾಲಕ!!!

Leave A Reply