Home latest Vasanth Giliyar Arrest: ನಿಂದನೆಗಾಗಿ ಮಾಜಿ ಪತ್ರಕರ್ತ ವಸಂತ ಗಿಳಿಯಾರ್ ಅರೆಸ್ಟ್ !

Vasanth Giliyar Arrest: ನಿಂದನೆಗಾಗಿ ಮಾಜಿ ಪತ್ರಕರ್ತ ವಸಂತ ಗಿಳಿಯಾರ್ ಅರೆಸ್ಟ್ !

Hindu neighbor gifts plot of land

Hindu neighbour gifts land to Muslim journalist

Vasanth Giliyar Arrest: ಮಾಜಿ ಪತ್ರಕರ್ತ ವಸಂತ ಗಿಳಿಯಾರ್ ಅರೆಸ್ಟ್ ಆಗಿದ್ದಾರೆ. ಹಳೆಯ ಮಾನನಷ್ಟ ಕೇಸೊಂದರಲ್ಲಿ ಮಾಜಿ ಪತ್ರಕರ್ತ ವಸಂತ ಗಿಳಿಯಾರ್ ಅರೆಸ್ಟ್ ಆಗಿದ್ದಾರೆ. ಸೌಜನ್ಯ ಹೋರಾಟದ ಪ್ರತಿಭಟನಾಕಾರರ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡು ಸುದ್ದಿಯಾಗಿರುವ ವಸಂತ್ ಗಿಳಿಯಾರ್ ಬಂಧನದ ಸುದ್ದಿ ಬಂದಿದೆ.

ಕೋರ್ಟು ಕೊಟ್ಟ ವಾರಂಟಿಗೆ ಕ್ಯಾರೆ ಅನ್ನದೆ ಇದ್ದ ವಸಂತ ಗಿಳಿಯಾರ್ ನನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಡಾಕ್ಟರ್ ರಾಜೇಶ್ ಮತ್ತು ಅನಿತಾ ದಂಪತಿಗಳು ಕೇಸು ಹಾಕಿದ್ದರು. ಡಾಕ್ಟರ್ ರಾಜೇಶ್ ಮತ್ತು ಅನಿತಾ ಅವರನ್ನು ನಿಂದಿಸಲಾಗಿತ್ತು. ನಿಂದನೆ ಮಾಡಿದ ಮತ್ತು ಮಾನಹಾನಿಕರವಾಗಿ ನಡೆದುಕೊಂಡ ವಸಂತ್ ಗಿಳಿಯಾರ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.

ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಮಾನಹಾನಿಕಾರವಾಗಿ ಬರೆದ ಕಾರಣಕ್ಕಾಗಿ ಮಾನಹಾನಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. A1 ಆರೋಪಿಯಾಗಿ ದಿ. ರವಿ ಬೆಳಗೆರೆ ಇದ್ದರೆ, A2 ಆರೋಪಿಯಾಗಿ ವಸಂತ ಗಿಳಿಯಾರ್ ರನ್ನು ಸೂಚಿಸಲಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಡಾಕ್ಟರ್ ರಾಜೇಶ್ ಮತ್ತು ಪತ್ನಿ ಅನಿತಾ ಮೇಲೆ ಮಾನಹಾನಿ ಬರಹ ಪ್ರಕಟವಾಗಿತ್ತು. ಹಾಗಾಗಿ ಡಾಕ್ಟರ್ ದಂಪತಿ ಕೋರ್ಟು ಮೆಟ್ಟಲು ಹತ್ತಿದ್ದರು. ಇದೀಗ ರವಿಬೆಳಗೆರೆಯವರು ಮೃತರಾಗಿದ್ದು, A2 ಆರೋಪಿಯಾಗಿರುವ ವಸಂತ್ ಗಿಳಿಯಾರ್ ಅವರು ಕಾನೂನು ಪ್ರಕಾರ ಬಾಧ್ಯರು.

ಎಷ್ಟೇ ವಾರಂಟ್ ಕೊಟ್ಟರೂ, ಕೋರ್ಟಿಗೆ ಕ್ಯಾರೇ ಅನ್ನದ ವಸಂತ ಗಿಳಿಯಾರ್ ನನ್ನು ಇದೀಗ ಬಂಧಿಸಲಾಗಿದೆ. ಮಾನಹಾನಿಕರ ನಿಂದನೆಗಾಗಿ ವಸಂತ್ ಗಿಳಿಯಾರ್ ಬಂಧನವಾಗಿದೆ. ತದನಂತರ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ. ಈತನ ಮೇಲೆ ಹಲವಾರು ಕೋರ್ಟುಗಳಲ್ಲಿ ಇಂತಹುದೇ ನಿಂದನೆಯ ಕೇಸುಗಳು ನಡೆಯುತ್ತಿರುವುದು ಕಂಡುಬಂದಿವೆ.