Electric Mosquito Repellent: ಸೊಳ್ಳೆ ಓಡಿಸಲು ಗುಡ್ ನೈಟ್, ಸೊಳ್ಳೆ ಬತ್ತಿ ಬಳಸುತ್ತೀರಾ ?!ಹಾಗಿದ್ರೆ ವಿದ್ಯುತ್ ಬಿಲ್ ಎಷ್ಟು ಹೆಚ್ಚಾಗುತ್ತದೆ ಗೊತ್ತಾ?

technology news electricitu does mosquito repellent device consume in a month

Electric Mosquito Repellent: ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಜಿಕಾ ವೈರಸ್‌ನಂತಹ ಮಾರಕ ಕಾಯಿಲೆಗಳು ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಆದ್ದರಿಂದ ಈ ಅಪಾಯವನ್ನು ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ (Market) ಹಲವು ಬಗೆಯ ಎಲೆಕ್ಟ್ರಿಕ್ ಸೊಳ್ಳೆ ಕಾಯಿಲ್ (Electric Mosquito Repellent) ಲಭ್ಯವಿವೆ. ಆದರೆ ಇದರಿಂದ ನಿಮ್ಮ ಮನೆ ವಿದ್ಯುತ್ ಬಿಲ್ ಎಷ್ಟು ಹೆಚ್ಚಾಗಬಹುದು ಎಂದು ಊಹೆ ಮಾಡಿದ್ದೀರಾ?

ಕೆಲವರು ರಾತ್ರಿ ಹೊತ್ತು ಮಾತ್ರ ಈ ಎಲೆಕ್ಟ್ರಿಕ್ ಕಾಯಿಲ್ ಗಳನ್ನು ಬಳಸಿದರೆ, ಇನ್ನು ಕೆಲವರು ದಿನದ 24 ಗಂಟೆಯೂ ಬಳಸುತ್ತಾರೆ. ಈ ಕಾಯಿಲ್ ತನ್ನ ಕೆಲಸ ಮಾಡಬೇಕಾದರೆ ವಿದ್ಯುತ್ ಬಳಸುತ್ತದೆ. ಅದು ಹೇಗೆ ಎಷ್ಟು ಎನ್ನುವುದು ಇಲ್ಲಿ ತಿಳಿಸಲಾಗಿದೆ.

ವಿದ್ಯುತ್ ಸೊಳ್ಳೆ ನಿವಾರಕ ಸಾಧನದ ವಿದ್ಯುತ್ ಬಳಕೆ ಹೆಚ್ಚಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಈ ಸಾಧನಗಳು 5W ಅಥವಾ 7W ಆಗಿರುತ್ತವೆ. ಇದು ಎಲ್ಇಡಿ ನೈಟ್ ಲ್ಯಾಂಪ್ ಗೆ ಸಮನಾಗಿರುತ್ತದೆ. ಉದಾಹರಣೆಗೆ, ನೀವು ದಿನಕ್ಕೆ 8 ಗಂಟೆಗಳ ಕಾಲ 5W ಸೊಳ್ಳೆ ನಿವಾರಕ ಸಾಧನವನ್ನು ಬಳಸಿದರೆ, ಅದು ಕೇವಲ 40W ಶಕ್ತಿಯನ್ನು ಬಳಸುತ್ತದೆ.

ಸುಲಭವಾಗಿ ಲೆಕ್ಕ ಹಾಕುವುದಾದರೆ, ಒಂದು ದಿನದಲ್ಲಿ 8 ಗಂಟೆಗಳ ವಿದ್ಯುತ್ ಸೊಳ್ಳೆ ನಿವಾರಕ ಸಾಧನ ಬಳಸಿದರೆ , ಅದು 40W ಶಕ್ತಿಯನ್ನು ಬಳಸುತ್ತದೆ. ಒಂದು ತಿಂಗಳಿಗೆ ನೋಡುವುದಾದರೆ 30 ದಿನಗಳು x 8 ಗಂಟೆಗಳ = 240 ಗಂಟೆಗಳವರೆಗೆ ಈ ಬತ್ತಿ ಉರಿಯುತ್ತದೆ. ಆದ್ದರಿಂದ, ಒಟ್ಟು ವಿದ್ಯುತ್ ಬಳಕೆಯು 240 ಗಂಟೆಗಳ x 5W = 1200W ಅಥವಾ 1.2kWh ಆಗಿರುತ್ತದೆ. ಒಂದು ಯೂನಿಟ್ ಗೆ 8 ರೂ. ಪಾವತಿಸುವುದಾದರೆ ಈ ಸೊಳ್ಳೆ ಕಾಯಿಲ್ ನಿಂದ ನೀವು ತಿಂಗಳಿಗೆ ಪಡೆಯುವ ಬಿಲ್ ನಲ್ಲಿ 9.6 ರೂಪಾಯಿ ಸೊಳ್ಳೆ ಬತ್ತಿಯದ್ದಾಗಿರುತ್ತದೆ ಎಂದು ಲೆಕ್ಕ ಇಟ್ಟುಕೊಳ್ಳಬಹುದಾಗಿದೆ.

Leave A Reply

Your email address will not be published.