Rahul Gandhi: ಹೊಸ ಗೆಟಪ್ ನಲ್ಲಿ ಪ್ರತ್ಯಕ್ಷ ಆದ ರಾಹುಲ್ ಗಾಂಧಿ – ಚುನಾವಣೆ ಮುಂಚೆಯೇ ಗಂಟು ಮೂಟೆ ಕಟ್ಟಿದ್ರಾ ?!

Political news Rahul Gandhi Meets Coolies At Delhi's Anand Vihar Railway Station, Lifts Luggage viral video

Share the Article

Rahul Gandhi: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಆಗಾಗ ಜನರ ಮಧ್ಯೆ ಬಂದು ಕಷ್ಟ ಸುಖ ವಿಚಾರಿಸುತ್ತಾರೆ. ಇದೀಗ ಆನಂದ್ ವಿಹಾರ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಹಮಾಲರೊಂದಿಗೆ ಸಂವಾದ ನಡೆಸಿ ಅವರ ಸ್ಥಿತಿಗತಿ ಬಗ್ಗೆ ವಿಚಾರಿಸಿದ್ದಾರೆ.

ಸದ್ಯ ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ಮುಖಂಡರು ಕೂಲಿಗಳೊಂದಿಗೆ ಮಾತನಾಡಲು ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ರಾಹುಲ್ ಗಾಂಧಿ ಕೂಲಿಗಳೊಂದಿಗೆ ವಿಸ್ತರವಾಗಿ ಮಾತನಾಡಿದರು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು ಎಂದು ತಿಳಿಸಿದ್ದಾರೆ.

ಮೂಲತಃ ಕೆಲವು ಹಮಾಲರು, ತಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಉನ್ನತಿಗಾಗಿ ಕೆಲಸ ಮಾಡಲು ಅವರನ್ನು ಭೇಟಿಯಾಗುವಂತೆ ಒತ್ತಾಯಿಸಿದ್ದು, ಈ ಬೇಡಿಕೆ ಮೇರೆಗೆ ರಾಹುಲ್ ಅವರು ಹಮಾಲರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ರಾಹುಲ್ ಗಾಂಧಿ ಅವರು ಜನರ ನಡುವೆ ಭೇಟಿ ನೀಡುವ ಮೂಲಕ ಜನರನ್ನು ಬೆರಗುಗೊಳಿಸಿದ್ದು, ನಂತರ ಬೆಂಗಾಲಿ ಮಾರುಕಟ್ಟೆ, ಜಾಮಾ ಮಸೀದಿ ಪ್ರದೇಶಕ್ಕೆ ಆಹಾರ ಸೇವಿಸಲು ಭೇಟಿ ನೀಡಿದ್ದರು ಮತ್ತು ನಂತರ ಯುಪಿಎಸ್‌ಸಿ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಲು ಮುಖರ್ಜಿ ನಗರ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮೊಬೈಲ್ ಬಳಕೆದಾರರೇ ಎಚ್ಚರ.. ಈ 3 ಅಪ್ಲಿಕೇಶನ್‌ ಮೂಲಕ ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಪಾಕಿಸ್ತಾನಿ ಹ್ಯಾಕರ್‌ಗಳು

Leave A Reply