Home Education School Timings : ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ?! ರೊಚ್ಚಿಗೆದ್ದ ಪೋಷಕರು !!

School Timings : ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ?! ರೊಚ್ಚಿಗೆದ್ದ ಪೋಷಕರು !!

School Timings
Iamge source : TOI

Hindu neighbor gifts plot of land

Hindu neighbour gifts land to Muslim journalist

School Timings: ಬೆಂಗಳೂರಿನಲ್ಲಿ ಪ್ರತಿನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಶಾಲಾ ಸಮಯವನ್ನು (School Timings)ಬದಲಾವಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಬೆಂಗಳೂರಿನ ಶಾಲೆಗಳಲ್ಲಿ(School)ಸಂಚಾರ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ ಕಾರ್ಖಾನೆಗಳ ಸಮಯ ಬದಲಾವಣೆ ಕುರಿತು ಚಿಂತಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.ಈ ಮೂಲಕ ಶಾಲಾ ಸಮಯ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಶಾಲಾ ಅವಧಿಯನ್ನ ಬೆಳಗ್ಗೆ 9ಗಂಟೆಯ ಬದಲಿಗೆ 8ಕ್ಕೆ ನಿಗದಿಪಡಿಸುವ ಸಂಭವವಿದೆ. ಆದರೆ ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಮಯ ಬದಲಾವಣೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ.ಸಮಯ ಬದಲಾವಣೆಯಿಂದ ಪೋಷಕರು ಮತ್ತು ಮಕ್ಕಳಿಗೆ ಸಮಸ್ಯೆ ಉಂಟಾಗುತ್ತದೆ. ಸದ್ಯದ ಸಮಯ ಪರಿಪೂರ್ಣವಾಗಿದ್ದು, ಪ್ರತಿಯೊಬ್ಬರೂ ಅದಕ್ಕೆ ಹೊಂದಿಕೊಂಡಿದ್ದಾರೆ ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.

ಪ್ರಸ್ತುತ, ಶಾಲೆಗಳ ಸಮಯ ಬೆಳಿಗ್ಗೆ 8.45 – 9 ರಿಂದ 3.45 – 4 ರವರೆಗೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಕಚೇರಿಗಳು ಬೆಳಿಗ್ಗೆ 10 ಗಂಟೆಗೆ ಅರಂಭವಾಗುತ್ತವೆ. ಗಾರ್ಮೆಂಟ್ಸ್ ಸೇರಿದಂತೆ ಇತರ ಖಾಸಗಿ ಉದ್ಯಮಗಳು ಬೆಳಿಗ್ಗೆ 9 ರಿಂದ 9.30 ರವರೆಗೆ ತೆರೆದಿರುತ್ತವೆ. ಈ ರೀತಿ ಶಾಲಾ ಸಮಯ ಬದಲಾವಣೆ ಮಾಡಿದರೆ ಟ್ರಾಫಿಕ್ ನಿಯಂತ್ರಣ ಮಾಡಬಹುದು ಎಂಬ ವಿಚಾರವನ್ನು ತಿಳಿಸಿದೆ. ಈ ಸಮಯ ಬದಲಾವಣೆ ಬೆಂಗಳೂರಿನ ಶಾಲೆಗಳಿಗೆ ಅನ್ವಯವಾಗಲಿದ್ದು, ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಶಾಲಾ ಸಮಯ ಬದಲಾವಣೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗಣೇಶ ಹಬ್ಬದ ನಂತರ ಸಂಬಂಧಪಟ್ಟವರ ಜೊತೆ ಸಭೆ ನಡೆಸಲು ತೀರ್ಮಾನ ಕೈಗೊಂಡಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದು, ತೀರ್ಪಿನ ಪ್ರತಿಗಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: SBI: ಸಾಲದ ಕಟ್ಟಲು ಡೆಡ್‌ಲೈನ್‌ ಬಂದ್ರೂ ಕಂತು ಕಟ್ಟದವರಿಗೆ ಚಾಕೋಲೇಟ್ ಕೊಡ್ತಿದೆ SBI ಬ್ಯಾಂಕ್ !! ಏನಿದು ಬ್ಯಾಂಕ್ ನ ಹೊಸ ನಡೆ?