Home latest ಹಿಂದೂಪರ ಹೋರಾಟಗಾರ, ಗೋರಕ್ಷಕ ಪುನೀತ್‌ ಕೆರೆಹಳ್ಳಿ ಜೈಲಿನಿಂದ ಬಿಡುಗಡೆ! ಗೂಂಡಾ ಕಾಯ್ದೆ ರದ್ದು!!!

ಹಿಂದೂಪರ ಹೋರಾಟಗಾರ, ಗೋರಕ್ಷಕ ಪುನೀತ್‌ ಕೆರೆಹಳ್ಳಿ ಜೈಲಿನಿಂದ ಬಿಡುಗಡೆ! ಗೂಂಡಾ ಕಾಯ್ದೆ ರದ್ದು!!!

Hindu neighbor gifts plot of land

Hindu neighbour gifts land to Muslim journalist

ಹಿಂದೂಪರ ಹೋರಾಟಗಾರ, ಗೋರಕ್ಷಕ ಎಂದು ವಿವಿಧ ಹೋರಾಟಗಳ ಮೂಲಕ ವಿವಿಧ ಪ್ರಕರಣಗಳಡಿ ಪುನೀತ್‌ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್‌ ದಾಖಲಾಗಿದ್ದು, ಇದೀಗ ಪುನೀತ್‌ ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆಯನ್ನು ರದ್ದುಗೊಳಿಸಿ, ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಗಣೇಶ ಹಬ್ಬದ ಒಂದು ದಿನ ಮುಂಚಿತವಾಗಿ ಈ ಗುಡ್‌ನ್ಯೂಸ್‌ ಪುನೀತ್‌ ಕೆರೆಹಳ್ಳಿಗೆ ಲಭಿಸಿದೆ.

ಪೊಲೀಸ್‌ ಆಯುಕ್ತರು, ಬೆಂಗಳೂರು ನಗರ ಇವರು ಕರ್ನಾಟಕ ಕಳ್ಳ ಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ, ವಿಡಿಯೋ ಅಥವಾ ಆಡಿಯೋ ಪೈರೇಟ್ ಚಟುವಟಿಕೆಗಳ ತಡೆ ಅಧಿನಿಯಮ, 1985ರಡಿಯಲ್ಲಿ ಪುನೀತ್ ಕುಮಾರ್ ಅಲಿಯಾಸ್‌ ಪುನೀತ್ ಕೆರೆಹಳ್ಳಿ (32 ವರ್ಷ) ವಿರುದ್ಧ ಆ.11ರಂದು ಹೊರಡಿಸಿರುವ ಬಂಧನ ಆದೇಶವನ್ನು ಆ.17ರಂದು ಅನುಮೋದಿಸಲಾಗಿತ್ತು. ಆದರೆ, ಸಲಹಾ ಮಂಡಳಿಯು ‘ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ’ ಎಂದು ಸೆ.13ರ ವರದಿಯಲ್ಲಿ ಅಭಿಪ್ರಾಯಪಟ್ಟಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.