Chaitra Kundapur Fraud Case: ಚೈತ್ರಾ ವಂಚನೆ ಪ್ರಕರಣ; 1 ಕೋಟಿ ಆಸ್ತಿ, 65 ಲಕ್ಷ ಚಿನ್ನ, 40 ಲಕ್ಷ ಹಣ ಪತ್ತೆ!!!

Share the Article

ಬಿಜೆಪಿ ಟಿಕೆಟ್‌ ನೀಡುವುದಾಗಿ ಉದ್ಯಮಿಯೊಬ್ಬರಿಗೆ ಕೋಟಿಗಟ್ಟಲೆ ಹಣ ವಂಚಿಸಿದ ಆರೋಪದಲ್ಲಿ ಬಂಧನದಲ್ಲಿರುವ ಹಿಂದೂ ಪರ ಸಂಘಟನೆಯ ಪ್ರಚಾರಕಿ ಚೈತ್ರಾ ಕುಂದಾಪುರ ಅವರು ಮಾಡಿದಂತಹ ಕುಕರ್ಮಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಬಂದ ಹೊಸ ಸುದ್ದಿ ಪ್ರಕಾರ ಆಕೆಯ ಆಪ್ತನ ಹೆಸರಲ್ಲಿ ಸಹಕಾರಿ ಬ್ಯಾಂಕ್‌ನಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 40 ಲಕ್ಷ ರೂ. ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.

ಹಾಗೆನೇ ಬೆಂಗಳೂರಿನ ಸಿಸಿಬಿ ಪೊಲೀಸರ ಕೈಗೆ ಇದರ ಜೊತೆಗೆ 1.08 ಕೋಟಿ ರೂ. ಆಸ್ತಿ-ಪಾಸ್ತಿ ದಾಖಲೆಗಳು ಕೂಡಾ ಲಭ್ಯವಾಗಿದೆ. ಚೈತ್ರಾ ಕುಂದಾಪುರ ಮತ್ತು ಆಕೆಯ ಆಪ್ತರ ಆಸ್ತಿ, ಬ್ಯಾಂಕ್‌ ಖಾತೆಗಳನ್ನು ಸಿಸಿಬಿ ಪೊಲೀಸರು ಜಾಲಾಡುತ್ತಿದ್ದಾರೆ.

ಉದ್ಯಮಿ ಗೋವಿಂದ ಪೂಜಾರಿಯಿಂದ ಪಡೆದುಕೊಂಡಿದ್ದ ಹಣದಲ್ಲಿ ಚೈತ್ರಾ ಜಮೀನು, ಮನೆ ನಿರ್ಮಾಣದಲ್ಲಿ ಹಣ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹಳೆಯ ಮನೆಯ ಪಕ್ಕದಲ್ಲೇ ಚೈತ್ರಾ ಭೂಮಿ ಖರೀದಿ ಮಾಡಿದ್ದು, ಮಹಡಿ ಮನೆಯನ್ನು ಕಟ್ಟಿದ್ದಾರೆ. ಇದೇ ಪ್ರಕರಣದಲ್ಲಿ ಹೆಸರಿದ್ದ ಗಗನ್‌ ಕಡೂರು, ಶ್ರೀಕಾಂತ್‌ ಕೂಡಾ ಮೂರು ಕೋಟಿ ಹಣವನ್ನು ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಾರ್ಕಳದಲ್ಲಿ ಶ್ರೀಕಾಂತ್‌ ಕೂಡಾ ಜಮೀನು ಖರೀದಿ ಮಾಡಿ, ಮನೆ ಕಟ್ಟಲು ರೆಡಿಮಾಡಿಕೊಂಡಿದ್ದಾನೆ. ಹಾಗೆನೇ ನಿರ್ಮಾಣ ಹಂತದಲ್ಲಿರುವ ಈ ಮನೆಯಲ್ಲಿ ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಬೇನಾಮಿ ಹೆಸರಿನಲ್ಲಿ ಒಂದಷ್ಟು ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನದಲ್ಲಿರುವ ಆರೋಪಿಗಳಲ್ಲಿ ಒಬ್ಬನಾದ ಶ್ರೀಕಾಂತ್‌ ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಉಪ್ಪೂರಿಗೆ ಕರೆತಂದಿದ್ದಾರೆ. ಇಲ್ಲಿ ಕೂಡಾ ಅವರು ಆಸ್ತಿ-ಪಾಸ್ತಿ ದಾಖಲೆ ಪರಿಶೀಲನೆ ಮಾಡಿದ್ದಾರೆ.

 

Leave A Reply