Home latest Kerala Nipha Virus: ಸೆ.24 ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!!!

Kerala Nipha Virus: ಸೆ.24 ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!!!

Image source Credit: businessleuge.in

Hindu neighbor gifts plot of land

Hindu neighbour gifts land to Muslim journalist

Kerala Nipha Virus: ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿರುವ ನಿಫಾ ಸೋಂಕು ಕೇರಳದಲ್ಲಿ(Kerala)ತನ್ನ ಅಟ್ಟಹಾಸ ಮುಂದುವರೆಸಿದೆ. 4 ವರ್ಷಗಳ ನಂತರ ಇದೀಗ ಕೇರಳದಲ್ಲಿ ಮತ್ತೆ ನಿಫಾ ವೈರಸ್‌ನ(Nipah virus) ಆತಂಕ ಎದುರಾಗಿದ್ದು, ಇಲ್ಲಿನ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಜ್ವರದಿಂದ ನಿಧನರಾಗಿದ್ದಾರೆ. ಕೋಝಿಕ್ಕೋಡ್‌ನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಸರ್ಕಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದ್ದು, ಸದ್ಯ ಈ ರಜೆಯನ್ನು ಸೆ.24ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಶಾಲೆಗಳನ್ನು ಮುಚ್ಚುವುದು ಎಲ್ಲಾ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವೃತ್ತಿಪರ ಕಾಲೇಜುಗಳಿಗೂ ಅನ್ವಯವಾಗಲಿದೆ. ಈ ಹಿಂದೆ ಜಿಲ್ಲಾಧಿಕಾರಿಯವರು ಶಾಲಾ ಕಾಲೇಜುಗಳಿಗೆ ಸೆಪ್ಟೆಂಬರ್ 16ರವರೆಗೆ ರಜೆ ವಿಸ್ತರಿಸಿ ಆದೇಶ ಹೊರಡಿಸಿದ್ದರು. ನಿಫಾ ವೈರಸ್ ಹೆಚ್ಚಳ ಹಿನ್ನೆಲೆ ಕೇರಳದ ಕೋಯಿಕ್ಕೋಡ್ನಲ್ಲಿ ನೀಡಲಾದ ಶಾಲಾ ಕಾಲೇಜುಗಳಿಗೆ ರಜಾ ದಿನಗಳನ್ನು ಮುಂಜಾಗ್ರತಾ ಕ್ರಮವಾಗಿ ಸೆ.24ರ ವರೆಗೆ ರಜೆಯನ್ನು ವಿಸ್ತರಣೆ ಮಾಡಲಾಗಿದೆ.

ಈ ಹಿಂದೆ ಎಲ್ಲಾ ಶಾಲೆಗಳಿಗೆ ಸೆ.14 ಮತ್ತು 15 ರಂದು ರಜೆ ನೀಡುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಇದಲ್ಲದೆ, ಈ ಆದೇಶ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವೃತ್ತಿಪರ ಕಾಲೇಜುಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ. ಒಂದು ದಿನ ರಜೆಯನ್ನು ವಿಸ್ತರಣೆ ಮಾಡಲಾಗಿದ್ದು, ಇದೀಗ ಮುಂಜಾಗ್ರತಾ ಕ್ರಮವಾಗಿ ಸೆ.24 ರವರೆಗೆ ರಜೆ ವಿಸ್ತರಿಸಲಾಗಿದೆ..

ದಕ್ಷಿಣದ ರಾಜ್ಯದಲ್ಲಿ ನಿಫಾ ವೈರಸ್ ದೊಡ್ಡ ಮಟ್ಟದ ಆತಂಕ ಮೂಡಿಸಿದೆ.ಆರು ಮಂದಿಗೆ ನಿಫಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಸೋಂಕಿತರ ಎಲ್ಲಾ ಅಪಾಯಕಾರಿ ಸಂಪರ್ಕಗಳನ್ನು ಪರೀಕ್ಷಿಸಲು ಕೇರಳ ಸರ್ಕಾರ ತೀರ್ಮಾನ ಕೈಗೊಂಡಿದೆ. 2018ರ ನಂತರ ಕೇರಳದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಕಂಡುಬರುತ್ತಿರುವ ನಿಫಾ ವೈರಸ್ ಬಾಂಗ್ಲಾದೇಶ ರೂಪಾಂತರವಾಗಿದ್ದು, ಬಹಳ ಅಪಾಯಕಾರಿ ಎನ್ನಲಾಗಿದೆ. ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ 24 ವರ್ಷದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ವೈರಸ್ ಇರುವುದು ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತರೊಬ್ಬರಿಗೆ ನಿಫಾ ಪಾಸಿಟಿವ್ ಬಂದಿರುವ ಮೂಲಕ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ ಕಂಡಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮತ್ತೊಂದು ನಿಫಾ ವೈರಸ್ ಪ್ರಕರಣವನ್ನು ದೃಢಪಡಿಸಿದ್ದಾರೆ.