Ganesh Chaturthi Guidelines 2023: ಗಮನಿಸಿ ಸಿಲಿಕಾನ್‌ ಸಿಟಿ ಜನರೇ, ಗೌರಿ ಗಣೇಶ ಹಬ್ಬಕ್ಕೆ ಈ ಗೈಡ್‌ಲೈನ್ಸ್‌ ಫಾಲೋ ಮಾಡೋದು ಅಗತ್ಯ- ಪೊಲೀಸ್‌ ಪ್ರಕಟಣೆ

Bengaluru news Ganesh chaturthi guidelines 2023 police department issues guidelines for Gauri Ganesha festival

Ganesh Chaturthi Guidelines 2023: ಹಿಂದೂ ಧರ್ಮದ ಹಬ್ಬಗಳಲ್ಲಿ ಗಣೇಶ ಚತುರ್ದಶಿ, ವಿನಾಯಕ ಚತುರ್ದಶಿ ಅಥವಾ ಗಣೇಶ ಚತುರ್ಥಿ ಪ್ರಮುಖ ಹಬ್ಬವಾಗಿದೆ. ಭಾರತವು ಈ ಹಬ್ಬವನ್ನು ಅತ್ಯಂತ ವೈಭವದಿಂದ ಮತ್ತು ಉತ್ಸಾಹದಿಂದ ಆಚರಿಸುತ್ತದೆ. ಈ ವರ್ಷ ಗಣೇಶ ಹಬ್ಬ ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದೆ. ಕೆಲವೆಡೆ ಸೆಪ್ಟೆಂಬರ್‌ 18 ರಂದು ಕೂಡ ಆಚರಿಸುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವು ಗಣೇಶನ ಜನ್ಮವನ್ನು ಸುಂದರವಾಗಿ ಸ್ಮರಿಸುತ್ತದೆ ಮತ್ತು ಜನರು ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ಮತ್ತು ಶುಭ ಫಲಕ್ಕಾಗಿ ಗಣೇಶನ ಆಶೀರ್ವಾದವನ್ನು ಕೋರಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಸದ್ಯ ಗೌರಿ ಗಣೇಶ ಹಬ್ಬದ(Gowri Ganesha Festival) ಸಂದರ್ಭದಲ್ಲಿ ಗಣೇಶ ಕೂರಿಸುವ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು(Bengaluru Police) ಮುಂದಾಗಿದ್ದಾರೆ. ಈ ಗೌರಿ ಗಣೇಶ ಹಬ್ಬದ ಕುರಿತು ನಗರ ಪೊಲೀಸ್ ಇಲಾಖೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಾರ್ಯಕ್ರಮದ ಆಯೋಜಕರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಮುಖ್ಯವಾಗಿ ಕಾರ್ಯಕ್ರಮದ ಆಯೋಜಕರು ಪಾಲಿಸಬೇಕಾದ ಕ್ರಮಗಳು (Ganesh Chaturthi Guidelines 2023) ಇಂತಿವೆ :
>ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ.
>ಗಣೇಶ ಕೂರಿಸಲು ಕಾನೂನು ಬಾಹಿರಬಾಗಿ ಹಣ ಸಂಗ್ರಹ ಮಾಡಲು ಅವಕಾಶ ಇಲ್ಲ.
>ಕಾರ್ಯಕ್ರಮ ನಡೆಸಲು ಚಪ್ಪರ, ಶಾಮಿಯಾನ, ಪೆಂಡಾಲ್ ಗೆ ವಿಶೇಷ ಅನುಮತಿ ಪಡೆಯಬೇಕು.
>ಧರ್ಮ, ಜಾತಿ, ವಿವಾದಿತ ಜಾಗದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವಹಾಗಿಲ್ಲ.
>ಇನ್ನು ಮೆರವಣಿಗೆ ವೇಳೆ ಅಹಿಕತರ ಘಟನೆ ನಡೆದರೆ ಸಂಘಟಕರೇ ಅದಕ್ಕೆ ಹೊಣೆ.
>ಆಯೋಜಕರು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಸಿಸಿಟಿವಿ,ಬೆಂಕಿ ನಂದಿಸುವ ಸಾಮಾಗ್ರಿಗಳು, ಸೇರಿದಂತೆ ಅಗತ್ಯ ಕ್ರಮವಹಿಸಬೇಕು.
>ಮೂರ್ತಿ ಸ್ಥಾಪನೆಮಾಡಿರುವ ಜಾಗದಲ್ಲಿ ಬೆಂಕಿಗೆ ಸಂಬಂಧಿಸಿದ ಸಾಮಾಗ್ರಿಗಳನ್ನು ಇಡಬಾರದು.
>ವಿದ್ಯುತ್ ಸಂಪರ್ಕ ಬೇಕಾಗಿರುವ ಬಗ್ಗೆ ಬೆಸ್ಕಾಂ ಮತ್ತು ಅಗ್ನಿ ಶಾಮಕ ಇಲಾಖೆಯ NOC ಕಡ್ಡಾಯ.
>ಧ್ವನಿ ವರ್ಧಕ ಬಳಕೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಡೆಡ್ ಲೈನ್ ನೀಡಲಾಗಿದೆ.
>ಯಾವುದೇ ಕಾರಣಕ್ಕೂ DJ ಸೌಂಡ್ ಸಿಸ್ಟಮ್ ಅಳವಡಿಕೆಗೆ ಅವಕಾಶ ಇಲ್ಲ.
> ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಹಾಗೂ ಪ್ರಾರ್ಥನೆ ಸ್ಥಳಗಳ ಮುಂಭಾಗದಲ್ಲಿ ಪಟಾಕಿ, ಸಿಡಿ ಮದ್ದು ನಿಷೇಧ.
>ಮುಖ್ಯವಾಗಿ ಗಣಪನ ವಿಸರ್ಜನೆ ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು.

ಈ ಮೇಲಿನಂತೆ ಬೆಂಗಳೂರು ಪೊಲೀಸರು ಗಣೇಶ ಕೂರಿಸುವ ಕಾರ್ಯಕ್ರಮದ ಕುರಿತು ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಇದನ್ನೂ ಓದಿ: Lottery Ticket Winner: 42 ಕೋಟಿಯ ಲಾಟ್ರಿ ಗೆದ್ದ ಅಜ್ಜ, ಆದ್ರೆ ಪತ್ನಿಗೆ ಕೊಟ್ಟಿದ್ದು ಕಲ್ಲಂಗಡಿ ಹಣ್ಣು ಗಿಫ್ಟ್ ! ಯಾಕೆ ಗೊತ್ತಾ?

Leave A Reply

Your email address will not be published.