Home latest Heart Attack: ಊರಿನ ನಾಟಕದಲ್ಲಿ ನೃತ್ಯ ಮಾಡುತ್ತಿದ್ದ 24 ವರ್ಷದ ಯುವಕ ಕುಸಿದು ಸಾವು!

Heart Attack: ಊರಿನ ನಾಟಕದಲ್ಲಿ ನೃತ್ಯ ಮಾಡುತ್ತಿದ್ದ 24 ವರ್ಷದ ಯುವಕ ಕುಸಿದು ಸಾವು!

Heart attack

Hindu neighbor gifts plot of land

Hindu neighbour gifts land to Muslim journalist

Heart attack: ಇತ್ತೀಚೆಗೆ ಸಾವು ಯಾವಾಗ, ಯಾವ ರೀತಿ ಬರುತ್ತದೆ ಎಂದು ಊಹಿಸುವುದು ಕಷ್ಟ. ಯಾವ ಕ್ಷಣದಲ್ಲಿ ಏನಾದರೂ ಆಗಬಹುದು ಎನ್ನುವುದಕ್ಕೆ ಇತ್ತೀಚೆಗೆ ನಾವು ಸಾಕಷ್ಟು ನಿರ್ದಶನಗಳನ್ನು ಕಂಡಿದ್ದೇವೆ. ಇದೇ ಸರಣಿಗೆ ಇದೀಗ ವಿಜಯಪುರ ಜಿಲ್ಲೆಯ (Vijayapura News) ತಿಕೋಟ ತಾಲೂಕಿನಲ್ಲಿ ಒಂದು ಘಟನೆ ನಡೆದಿದೆ. ಊರ ಜಾತ್ರೆಯ ನಾಟಕದ ವೇಳೆ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದ ವ್ಯಕ್ತಿ ಮೃತ ಹೊಂದಿದ್ದಾನೆ. ಹೃದಯಾಘಾತ (Heart Attack) ಎನ್ನಲಾಗುತ್ತಿದೆ.

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶರಣು ಬಾಗಲಕೋಟೆ (24ವರ್ಷ) ಎಂಬುವವರೇ ಮೃತ ವ್ಯಕ್ತಿ. ಇವರು ಪೋಸ್ಟ್‌ ಮ್ಯಾನ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮಹಿಳಾ ಪಾತ್ರಧಾರಿಯ ಜೊತೆಗೆ ಡ್ಯಾನ್ಸ್‌ಮಾಡುವ ಸನ್ನಿವೇಶದಲ್ಲಿ ದೇಹದ ಬಲ ಕಳೆದುಕೊಂಡು ಕುಸಿದು ಬಿದ್ದು ಅಲ್ಲೇ ಸಾವು ಕಂಡಿದ್ದಾರೆ. ಇದರ ವೀಡಿಯೋ ಈಗ ವೈರಲ್‌ ಆಗಿದೆ.

ಮಹಿಳಾ ಪಾತ್ರಧಾರಿ ನೃತ್ಯ ಮಾಡುವ ಸನ್ನಿವೇಶ ಬಂದಾಗ, ಶರಣು ಅವರು ವೇದಿಕೆಗೆ ಹೋಗಿ ನೃತ್ಯ ಮಾಡಲು ಆರಂಭ ಮಾಡಿದ್ದರು. ಕೆಲವು ನಿಮಿಷ ನೃತ್ಯ ಮಾಡಿದ ನಂತರ, ಒಮ್ಮಿಂದೊಮ್ಮೆ ಕುಸಿದು ಬಿದ್ದು ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದರೂ ಪ್ರಾಣ ಉಳಿಯಲಿಲ್ಲ.

ಇದನ್ನೂ ಓದಿ: Chaitra Kundapura : Big Update; ವಂಚನೆ ಪ್ರಕರಣ; ಚೈತ್ರ ಕುಂದಾಪುರ ಅಸ್ವಸ್ಥ ಕಾರಣ ಬಹಿರಂಗ! ಇದು ಆತ್ಮಹತ್ಯೆ ಅಲ್ಲ, ಬೇರೇನು? ಕಾರಣ ರಿವೀಲ್‌!!!