Anna bhagya: ಅನ್ನಭಾಗ್ಯದ ಫಲಾನುಭವಿಗಳಿಗೆ ಮಹತ್ವದ ಸುದ್ದಿ- ಉಚಿತ ಅಕ್ಕಿ ಬೇಕಂದ್ರೆ ಇನ್ಮುಂದೆ ರೇಷನ್ ಕಾರ್ಡ್ ಜೊತೆ ಇದನ್ನೂ ಸೊಸೈಟಿಗೆ ಒಯ್ಯಬೇಕು !

Anna bhagya: ಸರ್ಕಾರ ಜನತೆಗೆ ಅನ್ನಭಾಗ್ಯ (Anna bhagya) ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಬಡ ಜನರಿಗೆ ಸಹಾಯ ಆಗಲೆಂದೇ ಸರ್ಕಾರ ಈ ಯೋಜನೆ ಜಾರಿಗೊಳಿಸಿದ್ದು, ಇದೀಗ ಅನ್ನಭಾಗ್ಯದ ಫಲಾನುಭವಿಗಳಿಗೆ ಮಹತ್ವದ ಸುದ್ದಿ ಇಲ್ಲಿದೆ. ಉಚಿತ ಅಕ್ಕಿ ಬೇಕಂದ್ರೆ ಇನ್ಮುಂದೆ ರೇಷನ್ ಕಾರ್ಡ್ (ration card) ಜೊತೆ ಇದನ್ನೂ ಸೊಸೈಟಿಗೆ ಒಯ್ಯಬೇಕು.

ಹೌದು, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿಗಳ ಸೂಚನೆ ಅನ್ವಯ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ ಪಡೆಯಲು ಮುಂದಾಗಿದೆ.

ಜುಲೈನಿಂದಲೇ ಜಾತಿ ಪ್ರಮಾಣ ಪತ್ರ ಸಂಗ್ರಹಣೆ ನಡೆದಿದೆ. ಇದೀಗ ಮತ್ತೊಮ್ಮೆ ಫಲಾನುಭವಿಗಳಿಗೆ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ 25,31,485 ಪರಿಶಿಷ್ಟ ಪಲಾನುಭವಿಗಳನ್ನು ಗುರುತಿಸಲಾಗಿದೆ. ಇಲಾಖೆ ಅಂಕಿ ಅಂಶಗಳಿಗಾಗಿ ಉಳಿದ ಪರಿಶಿಷ್ಟ ಫಲಾನುಭವಿಗಳ ವಿವರ ಸಂಗ್ರಹಿಸಲಾಗುತ್ತಿದೆ.

Leave A Reply

Your email address will not be published.