Gruha Jyothi Scheme: ಉಚಿತ ಕರೆಂಟ್; ಬಾಡಿಗೆ ಮನೆಯವರೇ ಇತ್ತ ಗಮನಿಸಿ, ಗೃಹ ಜ್ಯೋತಿ ಯೋಜನೆ ಲಾಭ ಪಡೆಯಲು ಈ ದಾಖಲೆ ಕಡ್ಡಾಯ!!!

Congress guarantee grahaJyoti scheme update this document is mandatory to get the benefit of gruha Jyoti Yojana

Gruha Jyothi Scheme: ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತರಲು ಹರಸಾಹಸ ಪಡಬೇಕಾಯಿತು. ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ (Karnataka Government Schemes)ಪ್ರತಿಯೊಂದೂ ಯೋಜನೆಗಳು ಯಶಸ್ವಿಯಾಗಿದ್ದರು ಕೂಡ ಕೆಲ ಯೋಜನೆಗಳ ಬಗ್ಗೆ ಜನರಿಗೆ ಈಗಲೂ ಗೊಂದಲಗಳು ಹಾಗೆ ಉಳಿದುಕೊಂಡಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ(Gruha Jyothi Scheme) ಪ್ರತೀ ಫಲಾನುಭವಿ ಕುಟುಂಬಗಳಿಗೆ ತಲಾ 200 ಯೂನಿಟ್ (200 Units)ವಿದ್ಯುತ್ ಉಚಿತವಾಗಿ ಪಡೆಯುವ ಯೋಜನೆಯ ಪ್ರಯೋಜನ ಪಡೆಯುವ ಮಂದಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.

ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು (Free Bus Scheme) ಚಾಲನೆ ಮಾಡಲಾಗಿದ್ದು, ಇನ್ನು ಗೃಹಲಕ್ಷ್ಮಿ (Gruha Lakshmi Scheme) ಮತ್ತು ಗೃಹ ಜ್ಯೋತಿ ಯೋಜನೆಗಳನ್ನು (Gruha Jyothi Scheme) ಸರ್ಕಾರ ಯೋಜನೆ ಜಾರಿ ಮಾಡಲಾಗಿದೆ. ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಲಾಭವನ್ನು ಈಗಾಗಲೇ ಅನೇಕರು ಪಡೆಯುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸುಮಾರು 200 ಯೂನಿಟ್ ಉಚಿತ ವಿದ್ಯುತ್ (Free Electricity) ಅನ್ನು ಅನೇಕರು ಪಡೆಯುತ್ತಿದ್ದಾರೆ. ಆದರೆ, ಇನ್ನು ಕೆಲವರಿಗೆ ಗೃಹ ಜ್ಯೋತಿ ಯೋಜನೆಗೆ ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು? ಯಾವುದೆಲ್ಲ ದಾಖಲೆ ಒದಗಿಸಬೇಕು? ಎಲ್ಲ ದಾಖಲೆ ನೀಡಿದ್ದರು ಕೂಡ ಝೀರೋ ಬಿಲ್ ಬಂದಿಲ್ಲ ಎಂಬೆಲ್ಲ ಅನುಮಾನಗಳು ಜನರಲ್ಲಿ ಮನೆ ಮಾಡಿದೆ.

ಗೃಹ ಜ್ಯೋತಿ (Gruha jyothi Scheme) ಯೋಜನೆಯ ಹೊಸ ಅಪ್ಲೇಟ್ ಬಗ್ಗೆಯೂ ಕೂಡ ನೀವು ತಿಳಿಯದೇ ಹೋದರೆ ಮುಂದಿನ ಬಾರಿ ಅರ್ಜಿ ಹಾಕಲು ಪರದಾಡಬೇಕಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಮುಖ್ಯವಾಗಿ ಮನೆಯ ಓನರ್ಗಳಿಗೆ ಮಾತ್ರವಲ್ಲದೆ ಯಾವುದೇ ಮನೆಯಲ್ಲಿ ಬಾಡಿಗೆ ಇರುವವರು ಕೂಡ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗೃಹ ಜ್ಯೋತಿ ಯೋಜನೆ ಆರಂಭವಾದಾಗ (Zero current bill) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರು ಹೆಚ್ಚಿನ ದಾಖಲೆಗಳನ್ನು ನೀಡಬೇಕಾದ ಅವಶ್ಯಕತೆ ಇರಲಿಲ್ಲ. ಕೇವಲ ಆರ್ ಆರ್ ನಂಬರ್ ಪ್ರತಿ ಹಾಗೂ ಆಧಾರ್ ಕಾರ್ಡ್ (Aadhaar Card) ದಾಖಲೆ ನೀಡಿದರೆ ಸಾಕಾಗಿತ್ತು. ಹೀಗಾಗಿ ಸುಲಭವಾಗಿ ಆನ್ಲೈನ್ (Online) ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪರಿಣಾಮ ಸುಲಭವಾಗಿ ಎಲ್ಲರೂ ಅರ್ಜಿ ಸಲ್ಲಿಸುವಂತಾಗಿದೆ.

ಆದರೆ ಇನ್ನು ಮುಂದಿನ ದಿನಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಮಂದಿಗೆ ಕಷ್ಟವಾಗುವ ಸಂಭವ ಹೆಚ್ಚಿದೆ.ಸದ್ಯದಲ್ಲಿಯೇ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲುವ ಸಾಧ್ಯತೆಯಿದ್ದು, ಆದರೆ ಸ್ಥಗಿತಗೊಂಡಿರುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತೆ ಪುನರ್ ಆರಂಭವಾಗುವ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸುವವರು ಈ ದಾಖಲೆಗಳ ಜೊತೆಗೆ ಮನೆ ಬಾಡಿಗೆಗೆ ಇರುವುದಕ್ಕೆ ಅಗ್ರಿಮೆಂಟ್ (Rent Agreement), ಬಾಡಿಗೆ ಪಾವತಿ ಮಾಡಿರುವುದಕ್ಕೆ ರಶೀದಿ ಮೊದಲಾದವುಗಳನ್ನು ಕೇಳಬಹುದಾದ ಕ್ರಮಗಳನ್ನು ಕೂಡ ಕೈಗೊಳ್ಳುವ ಸಂಭವ ಹೆಚ್ಚಿದೆ ಎನ್ನಲಾಗಿದೆ. ಗೃಹಜೋತಿ ಯೋಜನೆ ಅಪ್ಲಿಕೇಶನ್ ಹಾಕುವವರು ಹೇಳಿರುವ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡರೆ ಒಳಿತು. ರಶೀದಿ ಅಗ್ರಿಮೆಂಟ್ ಪ್ರತಿ ಎಲ್ಲವೂ ನಿಮ್ಮ ಬಳಿ ಇದ್ದರೆ ಸರ್ಕಾರ ಕೇಳಿರುವ ದಾಖಲೆಗಳನ್ನು ತಕ್ಷಣವೇ ಸಲ್ಲಿಸಿ ಅರ್ಜಿ ಪ್ರಕ್ರಿಯೆ ಪೂರ್ಣ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Crime News: ಹುಡುಗಿಯನ್ನು ಚುಡಾಯಿಸಿದ ಭೂಪ – ಮಸೀದಿಯನ್ನೇ ಧ್ವಂಸಮಾಡಿದ ಜನ

Leave A Reply

Your email address will not be published.