Home latest Special Parliament session: ನೂತನ ಸಂಸತ್ ಕಟ್ಟಡದಲ್ಲಿ ಅಧಿವೇಶನ: ಸಿಬ್ಬಂದಿಗಳಿಗೆ ನೂತನ ಭಾರತೀಯ ಸಮವಸ್ತ್ರ!

Special Parliament session: ನೂತನ ಸಂಸತ್ ಕಟ್ಟಡದಲ್ಲಿ ಅಧಿವೇಶನ: ಸಿಬ್ಬಂದಿಗಳಿಗೆ ನೂತನ ಭಾರತೀಯ ಸಮವಸ್ತ್ರ!

Hindu neighbor gifts plot of land

Hindu neighbour gifts land to Muslim journalist

Special Parliament session: ಮುಂದಿನ ವಾರ ನಡೆಯಲಿರುವ ನೂತನ ಪಾರ್ಲಿಮೆಂಟ್‌ (New Parliament Building)ಭವನದ ವಿಶೇಷ ಅಧಿವೇಶನದಲ್ಲಿ (Special Parliament session) ಸಂಸತ್ತಿನ ಸಿಬ್ಬಂದಿ ಎರಡೂ ಸದನಗಳ ಒಳಗೆ ಮತ್ತು ಹೊರಗೆ ಹೊಸ ಸಮವಸ್ತ್ರಗಳನ್ನು ಧರಿಸಲಿರುವ ಕುರಿತು ಲೋಕಸಭೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ದಿನದಂದು ಸಣ್ಣ ಪೂಜೆಯ ಬಳಿಕ ಹೊಸ ಸಂಸತ್ ಭವನಕ್ಕೆ (New Parliament Building) ಔಪಚಾರಿಕ ಪ್ರವೇಶ ಸಿಗಲಿದೆ. ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಸೆಪ್ಟೆಂಬರ್ 18ರಿಂದ 22ರವರೆಗೆ ನಿಗದಿಯಾಗಿದ್ದು, ಸಂಸತ್ತಿನ ಸೆಕ್ರೆಟರಿಯೇಟ್‌ನ ಎಲ್ಲಾ ಐದು ಪ್ರಮುಖ ಶಾಖೆಗಳಾದ ವರದಿಗಾರಿಕೆ, ಟೇಬಲ್ ಆಫೀಸ್, ನೋಟಿಸ್ ಆಫೀಸ್, ಶಾಸಕಾಂಗ ಶಾಖೆ ಮತ್ತು ಭದ್ರತೆಯ ಅಧಿಕಾರಿಗಳು ಈ ಅಧಿವೇಶನದಲ್ಲಿ ಮಾರ್ಷಲ್‌ಗಳಂತೆ ಹೊಸ ಸಮವಸ್ತ್ರಗಳನ್ನು ಧರಿಸುತ್ತಾರೆ.

ಸಂಸತ್ ಭವನದ ಸಿಬ್ಬಂದಿ ಗಾಢ ಗುಲಾಬಿ ಬಣ್ಣದ ನೆಹರು ಜಾಕೆಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಲಿದ್ದಾರೆ. ಇವರು ಧರಿಸಲಿರುವ ಶರ್ಟ್ ಕಮಲದ ಹೂವಿನ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ಸಮವಸ್ತ್ರವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ರಚಿಸಿದೆ. ಹೊಸ ಸಮವಸ್ತ್ರಗಳಲ್ಲಿ ಉಭಯ ಸದನಗಳ ಮಾರ್ಷಲ್‌ಗಳಿಗೆ ಮಣಿಪುರಿ ಮುಂಡಾಸು (ಶಿರಸ್ತ್ರಾಣ)ಗಳನ್ನು ಒಳಗೊಂಡಿರುತ್ತದೆ. ಐದು ಇಲಾಖೆಗಳ ಅಧಿಕಾರಿಗಳು ಕೆನೆ ಬಣ್ಣದ ಜಾಕೆಟ್‌ಗಳು ಮತ್ತು ತೆಳು ಬಿಳಿ ಪ್ಯಾಂಟ್‌ಗಳನ್ನು ಧರಿಸಲಿದ್ದಾರೆ. ಸಂಸತ್ತಿನ ಎದುರಿನ ಕಚೇರಿಗಳು ಹಾಗೂ ಸಂಸದೀಯ ವರದಿ ವಿಭಾಗಗಳಲ್ಲಿನ ಅಧಿಕಾರಿಗಳು ಕಮಲದ ಚಿಹ್ನೆ ಹೊಂದಿರುವ ಶರ್ಟ್‌ಗಳನ್ನು ಧರಿಸಲಿದ್ದಾರೆ. ಹೊಸ ಕಟ್ಟಡದ ರಾಜ್ಯಸಭೆಯ ಕಾರ್ಪೆಟ್‌ನಲ್ಲಿ ಸಹ ಕಮಲ ಇರಲಿದ್ದು, ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಹೊಸ ವಿನ್ಯಾಸದ ಸೀರೆಗಳು ಸಿಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.