Diesel Cars: ಡೀಸೆಲ್‌ ಕಾರುಗಳ ಮೇಲೆ ಮಾಲಿನ್ಯ ತೆರಿಗೆ ವಿಧಿಸಲು ಸಿದ್ಧತೆ ಮಾಡಿಕೊಂಡ ನಿತಿನ್‌ ಗಡ್ಕರಿ!!! ಎಷ್ಟು ಗೊತ್ತೇ?

National news 10 percentage additional GST proposed on diesel vehicles, says Nitin Gadkari

Diesel vehicles: ಭಾರತದಲ್ಲಿ ಡೀಸೆಲ್ ಎಂಜಿನ್ ವಾಹನಗಳನ್ನು ಖರೀದಿಸುವುದು ಶೀಘ್ರದಲ್ಲೇ ದುಬಾರಿಯಾಗಬಹುದು. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಏನು ಮಾಹಿತಿ ನೀಡಿದ್ದಾರೆ. ವಾಯುಮಾಲಿನ್ಯವನ್ನು ಇದರಿಂದ ಕಡಿಮೆ ಮಾಡಬಹುದು. ಡೀಸೆಲ್‌ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚಿನ ಜಿಎಸ್‌ಟಿ ವಿಧಿಸುವುದು ನಿತಿನ್‌ ಗಡ್ಕರಿ ಅವರ ಪ್ರಸ್ತಾಪ. ಡೀಸೆಲ್‌ ಹೆಚ್ಚು ವಾಯು ಮಾಲಿನ್ಯಕಾರಕ ಇಂಧನವಾಗಿದ್ದು, ವಾಯು ಮಾಲಿನ್ಯ ತಡೆಗಟ್ಟುವುದು ಇದರ ಮೂಲ ಉದ್ದೇಶವಾಗಿದೆ.

ದೇಶದಲ್ಲಿ ಡೀಸೆಲ್ ಎಂಜಿನ್ ವಾಹನಗಳ (Diesel vehicles) ಮೇಲಿನ ಜಿಎಸ್‌ಟಿಯನ್ನು ಶೇ 10ರಷ್ಟು ಹೆಚ್ಚಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದಕ್ಕಾಗಿ ಅವರು ಪತ್ರವನ್ನು ಸಿದ್ಧಪಡಿಸಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಬಹುದು.

SIAM (ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್) ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಅವರು ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದರು. ಡೀಸೆಲ್ ವಾಹನಗಳು ಅಥವಾ ಡೀಸೆಲ್‌ನಲ್ಲಿ ಚಲಿಸುವ ಪ್ರತಿಯೊಂದು ಎಂಜಿನ್‌ನ ಮೇಲೆ ಸರ್ಕಾರವು ಶೇಕಡಾ 10 ರಷ್ಟು ಹೆಚ್ಚುವರಿ ಜಿಎಸ್‌ಟಿಯನ್ನು ವಿಧಿಸಬೇಕು ಎಂದು ಅವರು ಇಂದು ಸ್ವತಃ ಹಣಕಾಸು ಸಚಿವರಿಗೆ ಇದನ್ನು ಸಲ್ಲಿಸಲಿದ್ದಾರೆ.

ಇದನ್ನೂ ಓದಿ: Fashion: ನಿಮ್ಮಲ್ಲಿ ಕಾಂಜೀವರಂ ಸೀರೆ ಇದೆಯೇ? ಇದು ನಕಲಿಯೋ ಅಸಲಿಯೋ ಎಂದು ಗುರುತಿಸುವ ಸುಲಭ ವಿಧಾನ ಇಲ್ಲಿದೆ!!!

Leave A Reply

Your email address will not be published.