Kerala: ಕೊನೆಗೂ RSS ಗೆ ಶಾಕ್ ಕೊಟ್ಟ ಹೈಕೋರ್ಟ್ !! ಇನ್ಮುಂದೆ ಇದಕ್ಕೆ ಅವಕಾಶವಿಲ್ಲ ಎಂದು ಹೊರಬಿತ್ತು ತೀರ್ಪು
Kerala news high court bans arms training by RSS inside sarkara Devi Temple in Thiruvananthapuram
Kerala: ಕೇರಳದ(Kerala)ತಿರುವನಂತಪುರಂ ಜಿಲ್ಲೆಯ ಸರ್ಕಾರಾ ದೇವಿ ದೇವಸ್ಥಾನದ ಆವರಣದಲ್ಲಿ ಆರ್ ಎಸ್ ಎಸ್(RSS) ಶಸ್ತ್ರಾಸ್ತ್ರ ತರಬೇತಿ ನೀಡಲು ಅವಕಾಶ ನೀಡುವುದಿಲ್ಲವೆಂದು ಕೇರಳ ಹೈಕೋರ್ಟ್ (High Court)ಸೂಚಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ತರಬೇತಿ ಶಿಬಿರದ ವಿರುದ್ಧ ಇಬ್ಬರು ಭಕ್ತರು ಅರ್ಜಿ ಸಲ್ಲಿಸಿದ ಹಿನ್ನೆಲೆ ಆರ್ಎಸ್ಎಸ್ ದೇವಸ್ಥಾನವನ್ನು(Temple)ಅಕ್ರಮವಾಗಿ ಬಳಕೆ ಮಾಡುತ್ತಿದೆ ಎಂದು ದೂರು ನೀಡಿದ್ದಾರೆ. ಇಬ್ಬರು ಭಕ್ತರ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಆದೇಶ ಹೊರಡಿಸಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅಥವಾ ಅದರ ಸದಸ್ಯರು ದೇವಸ್ಥಾನದ ಆವರಣವನ್ನು ಅನಧಿಕೃತವಾಗಿ ಬಳಕೆ ಮಾಡುವುದನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳುವುದನ್ನು ತಡೆಯಲು ಆದೇಶ ನೀಡುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಕೇರಳದ ದೇವಾಲಯಗಳನ್ನು ನಿರ್ವಹಿಸುವ ಮಂಡಳಿಯು ಮೇ 18 ರಂದು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಇದರ ಅನ್ವಯ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹಿಂದಿನ ಆದೇಶದಲ್ಲಿ, ಮಂಡಳಿಯ ಅಡಿಯಲ್ಲಿ ಧಾರ್ಮಿಕ ಸ್ಥಳ ಪ್ರದೇಶಗಳಲ್ಲಿ ಆರ್ಎಸ್ಎಸ್ನ ಶಾಖಾ ಅಥವಾ ಗುಂಪು ಅಭ್ಯಾಸ ಮಾಡುವುದನ್ನು ನಿಷೇಧ ಹೇರಿದ್ದು, ಇದನ್ನು ಸರಿಯಾಗಿ ಪಾಲನೆ ಮಾಡಲು ತಿಳಿಸಿದೆ. ಈ ದೇವಾಲಯದ ನಿರ್ವಹಣೆಯನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ವಹಿಸಿಕೊಂಡಿದೆ.
ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್ ಕುಮಾರ್ ಅವರ ಪೀಠ ತನ್ನ ಇತ್ತೀಚಿನ ಆದೇಶದ ಮೂಲಕ ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ವಹಿಸುತ್ತಿರುವ ದೇವಾಲಯದ ಆವರಣದಲ್ಲಿ ಸಾಮೂಹಿಕ ಅಭ್ಯಾಸ ಅಥವಾ ಆಯುಧ ಅಭ್ಯಾಸವನ್ನು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ
ಇದನ್ನೂ ಓದಿ: Dearness Allowance: ಕೇಂದ್ರ ನೌಕರರಿಗೆ ಭರ್ಜರಿ ಗುಡ್ ನ್ಯೂಸ್! ವೇತನದಲ್ಲಿ ಭಾರೀ ಹೆಚ್ಚಳ ?