Chandrayaan: ಬೆಳ್ಳಂಬೆಳಗ್ಗೆಯೇ ಚಂದ್ರನಂಗಳದಿಂದ ಬಂತು ಮತ್ತೊಂದು ಮಹತ್ವದ ಸುದ್ದಿ- ಇಸ್ರೋ ವಿಜ್ಞಾನಿಗಳಿಗಂತೂ ಫುಲ್ ಖುಷಿ !

Chandrayaan: ಬೆಳ್ಳಂಬೆಳಗ್ಗೆಯೇ ಚಂದ್ರನಂಗಳದಿಂದ (Chandrayaan) ಮತ್ತೊಂದು ಮಹತ್ವದ ಸುದ್ದಿ ಬಂದಿದೆ. ಈ ಸುದ್ದಿಯಿಂದ ಇಸ್ರೋ ವಿಜ್ಞಾನಿಗಳಿಗಂತೂ ಫುಲ್ ಖುಷಿಯಾಗಿದ್ದಾರೆ. ಹಾಗಾದ್ರೆ ಏನಾ ಖುಷಿಯ ಸುದ್ದಿ? ಇಲ್ಲಿದೆ ನೋಡಿ ಮಾಹಿತಿ!!!.

ಇತ್ತೀಚಿಗಷ್ಟೇ ISRO ಸಂಸ್ಥೆ ಈಗಾಗಲೇ ಬಾಹ್ಯಾಕಾಶದಲ್ಲಿ ಅಂದರೆ ಚಂದ್ರನ ಆರ್ಬಿಟ್ (Moon Orbit) ನಲ್ಲಿ ಇರುವಂತಹ Chandrayaan 2 ಆರ್ಬಿಟರ್ ತೆಗೆದಿರುವಂತಹ Chandrayaan 3 ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 6ರಂದು ಈ ಫೋಟೋವನ್ನು ಚಂದ್ರಯಾನ 2 ಆರ್ಬಿಟರ್ ತೆಗೆದಿದೆ ಎಂದು ISRO ತಿಳಿಸಿದೆ.

ಚಂದ್ರಯಾನ 2 ಮಿಷನ್ ಸಂಪೂರ್ಣವಾಗಿ ಹಾಳಾಗಿದೆ ಎಂದು ಭಾವಿಸಲಾಗಿತ್ತು‌. ಆದರೆ ಚಂದ್ರಯಾನ್ 3 ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪುವ ಮುನ್ನವೇ ಎರಡರ ನಡುವೆ ಕೂಡ ಲಿಂಕ್ ಮಾಡುವಲ್ಲಿ ಯಶಸ್ವಿಯಾಗಿತ್ತು ಎಂದು ಹೇಳಲಾಗಿದೆ. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ದ್ರುವಕ್ಕೆ ಕಾಲಿಡುವ ಮುಂಚೆನೇ ಇವೆರಡು ಕಮ್ಯುನಿಕೇಶನ್ ಅನ್ನು ಪ್ರಾರಂಭಿಸಿದೆ ಎಂದು ಕೂಡ ಇಸ್ರೋ ಆ ವೇಳೆ ಅಧಿಕೃತವಾಗಿ ಹೇಳಿತ್ತು.

ಈಗ ಮತ್ತೆ ತನ್ನ ಆರ್ಬಿಟರ್ ಮೂಲಕ ವಿಕ್ರಂ ಲ್ಯಾಂಡರ್’ನ (Vikram Lander) ಫೋಟೋಗಳನ್ನು ಭೂಮಿಗೆ ಕಳಿಸುತ್ತಿರುವುದು ಖುಷಿಯ ಸಂಗತಿ. ಈಗಲೂ ಕೂಡ ಚಂದ್ರಯಾನ 2 ನಲ್ಲಿ ಪೋಲಾರಮಿಟ್ರಿಕ್ ಹೈಡೆಫಿನಿಷನ್ ರೆಸುಲ್ಯೂಷನ್ ಅನ್ನು ಹೊಂದಿರುವಂತಹ ಫೋಟೋಗಳನ್ನು ಪಡೆಯುವಂತಹ ತಂತ್ರಜ್ಞಾನವನ್ನು ನಾವು ಹೊಂದಿದ್ದೇವೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಇದು Lunar Surface ನಲ್ಲಿ ನಡೆಯುವಂತಹ ಆಕ್ಟಿವಿಟಿಗಳನ್ನು ಕ್ಯಾಮೆರಾದಲ್ಲಿ ಕ್ಯಾಪ್ಚರ್ ಮಾಡುವಂತಹ ಕ್ಷಮತೆಯನ್ನು ಕೂಡ ಅದು ಹೊಂದಿದೆ‌‌.

Leave A Reply

Your email address will not be published.