Kalladka Prabhakar Bhat: ಮಂಗಳೂರು ವಿವಿ ಯಲ್ಲಿ ಸೆ.19 ರಂದು ಗಣೇಶ ಪ್ರತಿಷ್ಠಾಪನೆ; ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು!!!
Mangalore news Ganesh idol in Mangalore University Kalladka Prabhakar Bhat Challenge
Kalladka Prabhakar Bhat: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ( Mangalore University)ಯಲ್ಲಿ ಗಣಪತಿ ಕೂರಿಸೋ ವಿಷಯದಲ್ಲಿ ವಿವಾದವೊಂದು ಎದ್ದಿದೆ. ಈ ವಿವಾದಕ್ಕೆ ಮುಖ್ಯ ಕಾರಣ ಗಣಪನನ್ನು ಕೂರಿಸುವ ಜಾಗ, ಖರ್ಚು ವೆಚ್ಚಕ್ಕೆ ತಗಲೋ ಹಣ ಎಲ್ಲಿಂದ? ಎನ್ನುವುದೇ ಈ ರಾಜಕೀಯ ಜಗಳಕ್ಕೆ ಕಾರಣ ಎನ್ನಲಾಗಿದೆ.
ಅಂದ ಹಾಗೆ ಕಳೆದ ನಲುವತ್ತು ವರ್ಷಗಳಿಂದ ಗಣೇಶೋತ್ಸವ ನಡೀತಾ ಇದೆ. ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಮೂರ್ತಿ ಸ್ಥಾಪನೆ ಮಾಡಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿಯ ಗಣೇಶೋತ್ಸವ ಆಚರಣೆಗೆ ಮಂಗಳಾ ಆಡಿಟೋರಿಯಲ್ಲಿ ಸ್ಥಾಪನೆ ಬೇಡ ಎಂದು ತಕರಾರು ಎದ್ದಿದೆ. ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸೆ.19ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿಯೇ ಸಿದ್ಧ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್(Kalladka Prabhakar Bhat) ಹೇಳಿದ್ದಾರೆ.
ನಮಗೆ ಈಗ ಸಮಸ್ಯೆ ಬಂದಿರುವುದು ಕಾಂಗ್ರೆಸ್ ನಿಂದ. ಕಾಂಗ್ರೆಸ್ ನಮ್ಮನ್ನ ನಿರ್ವೀರ್ಯರನ್ನಾಗಿ, ಹೇಡಿಗಳನ್ನಾಗಿ ಮಾಡಿತು. ಈಗಲೂ ಪಾಕಿಸ್ತಾನ ಜಿಂದಾಬಾದ್ ಹೇಳುವವರು ಇದಾರೆ. ಅವರಿಗೆ ಕುಮ್ಮಕ್ಕು ಕೊಡುವವರು ಇದ್ದಾರೆ. ನಾವು ಸೆಪ್ಟೆಂಬರ್ 19 ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿಯೇ ಮಾಡುತ್ತೇವೆ ಎಂದು ಮಂಗಳೂರು ವಿವಿ ಉಪಕುಲಪತಿ ನಡೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ ಎಂದು ಟಿವಿ9 ಕನ್ನಡ ಮಾಧ್ಯಮ ಪ್ರಕಟ ಮಾಡಿದೆ.
ಇದನ್ನೂ ಓದಿ: School Holiday: ನಾಳೆ ಶಾಲೆಗಳಿಗೆ ರಜೆ ಘೋಷಣೆ!